Thursday 28th, March 2024
canara news

ವಿಜಯ ಕಾಲೇಜು ಮೂಲ್ಕಿ ಹಳೆ ವಿದ್ಯಾಥಿರ್s ಸಂಘ ಮುಂಬಯಿ ಘಟಕ ಸಂಭ್ರಮಿಸಿದ ಸ್ನೇಹ ಮಿಲನ

Published On : 16 Feb 2020   |  Reported By : Rons Bantwal


ಸಾಂಘಿಕತೆಯಿಂದ ಸುಧಾರಣೆ ಸುಲಭಸಾಧ್ಯ: ಸಿಎ| ಸೋಮನಾಥ್ ಕುಂದರ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಫೆ.15: ಮೂಲ್ಕಿಯ ವಿಜಯ ಕಾಲೇಜ್ ಅನ್ನುವುದು ಯಾವೊತ್ತೂ ವಿಜಯದ ಸಂಕೇತವೇ ಸರಿ. ಇಲ್ಲಿ ವ್ಯಾಸಂಗ ಮಾಡಿದ ವಿದ್ಯಾಥಿರ್sಗಳೆಲ್ಲರೂ ಇಂದು ಒಬ್ಬರನ್ನೊಬ್ಬರು ಸಾಧಕರೆಣಿಸಿದ್ದಾರೆ. ಸಾಂಘಿಕತೆಯಿಂದ ಸುಧಾರಣೆ ಸುಲಭ ಸಾಧ್ಯವಾಗುವುದು. ಆದ್ದರಿಂದ ವಿಜಯ ಕಾಲೇಜ್‍ನಲ್ಲಿ ಅಭ್ಯಾಸಿಸಿದ ಎಲ್ಲಾ ವಿದ್ಯಾಥಿರ್sಗಳು ಒಗ್ಗಟ್ಟಾಗಿ ತಮ್ಮತಮ್ಮ ಕೊಡುಗೆಗಳನ್ನಿತ್ತು ನಾವು ಕಲಿತ ವಿದ್ಯಾಲಯವನ್ನು ಆಲದಮರದಂತೆ ಬೆಳೆಸಿ ಮುಂಬರುವ ವಿದ್ಯಾಥಿರ್sಗಳಿಗೆ ನೆರಳಾಗಬೇಕು ಎಂದು ವಿಜಯ ಕಾಲೇಜು ಮೂಲ್ಕಿ ಹಳೆ ವಿದ್ಯಾಥಿರ್s ಸಂಘ ಮುಂಬಯಿ ಘಟಕದ ಗೌರವ ಅಧ್ಯಕ್ಷ ಸಿಎ| ಸೋಮನಾಥ್ ಬಿ.ಕುಂದರ್ ನುಡಿದರು.

ಇಂದಿಲ್ಲಿ ಶನಿವಾರ ರಾತ್ರಿ ಕುರ್ಲಾ ಪೂರ್ವದಲ್ಲಿನ ಬಂಟರ ಸಂಘದ ರಂಜನಿ ಸುಧಾಕರ್ ಎಸ್.ಹೆಗ್ಡೆ ಅನೆಕ್ಸ್ ಕಟ್ಟಡದ ವಿಜಯಲಕ್ಷ್ಮೀ ಮಹೇಶ್ ಶೆಟ್ಟಿ (ಬಾಬಾ ಗ್ರೂಪ್) ಕಿರು ಸಭಾಗೃಹದಲ್ಲಿ ಸಂಭ್ರಮಿಸಿದ್ದು ಸಮಾರಂಭದಲ್ಲಿ ವಿಸಿಎಂಎಎ ಮುಂಬಯಿ ಘಟಕವು 2020ನೇ ವಾರ್ಷಿಕ ಸ್ನೇಹ ಸಮ್ಮೀಲನ ಆಚರಿಸಿದ್ದು ದೀಪ ಪ್ರಜ್ವಲಿಸಿ ಸಮಾರಂಭ ಉದ್ಘಾಟಿಸಿ ಸಿಎ| ಸೋಮನಾಥ್ ಮಾತನಾಡಿದರು.

ಹಳೆ ವಿದ್ಯಾಥಿರ್s ಸಂಘದ ಮುಂಬಯಿ ಘಟಕದ ಅಧ್ಯಕ್ಷ ಆನಂದ ಶೆಟ್ಟಿ ಅಧ್ಯಕ್ಷತೆಯಲ್ಲಿ ನೇರವೇರಿದ ಸಮಾರಂಭದ ಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮುಖ್ಯ ಅತಿಥಿsಯಾಗಿ, ವಿಜಯ ಕಾಲೇಜು ಮೂಲ್ಕಿ ಹಳೆ ವಿದ್ಯಾಥಿರ್s ಸಂಘದ ಅಧ್ಯಕ್ಷೆ ಸುಮಲತಾ ನವೀನ್ಚಂದ್ರ ಸುವರ್ಣ, ಬಂಟರ ಸಂಘದ ಎಸ್.ಎಂ ಶೆಟ್ಟಿ ಶೈಕ್ಷಣಿಕ ಸಂಸ್ಥೆಯ ಕಾರ್ಯಧ್ಯಕ್ಷ ಸಿಎ| ಶಂಕರ ಬಿ.ಶೆಟ್ಟಿ, ಉಪ ಕಾರ್ಯಧ್ಯಕ್ಷ ಶಿರ್ವಾ ನಿತ್ಯಾನಂದ ಹೆಗ್ಡೆ, ಬಂಟ್ಸ್ ಸಂಘ ಮುಂಬಯಿ ಮಾಜಿ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ವಿಜಯ ಕಾಲೇಜು ಮೂಲ್ಕಿ ಗರ್ವನಿಂಗ್ ಕೌನ್ಸಿಲಿಂಗ್‍ನ ಕಾರ್ಯಾಧ್ಯಕ್ಷ ಸುಹಾಸ್ ಹೆಗ್ಡೆ ನಂದಳಿಕೆ, ವಿಜಯ ಕಾಲೇಜು ಮೂಲ್ಕಿ ಪ್ರಾಂಶುಪಾಲ ಡಾ| ಕೆ.ನಾರಾಯಣ ಪೂಜಾರಿ ಗೌರವ ಅತಿಥಿsಗಳಾಗಿ ಮತ್ತು ವಿಸಿಎಂಎಎಸ್‍ಎಎಂ ಉಪಾಧ್ಯಕ್ಷ ವಾಸುದೇವ ಎಂ.ಸಾಲ್ಯಾನ್, ಕಾರ್ಯದರ್ಶಿ ನ್ಯಾ| ಶೇಖರ ಎಸ್.ಭಂಡಾರಿ, ಕೋಶಾಧಿಕಾರಿ ಅಶೋಕ್ ದೇವಾಡಿಗ ವೇದಿಕೆಯಲ್ಲಿ ಆಸೀನರಾಗಿದ್ದರು.

ಸಮಾರಂಭದಲ್ಲಿ ಸಂಘದ ಪದಾಧಿಕಾರಿಗಳು, ಮಹಾನರದಲ್ಲಿನ ಗಣ್ಯ ಮಹಾನೀಯರೆಣಿಸಿದ ಕಾಲೇಜ್‍ನ ಹಳೆ ವಿದ್ಯಾಥಿರ್sಗಳು ಜೊತೆಗೂಡಿ ಕಾಲೇಜ್‍ನ ವಾಣಿಜ್ಯ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪೆÇ್ರ| ಜಯರಂಗ ತೆಲ್ಲಾರ್, ವಿಜಯ ಫ್ರೀ ಯುನಿರ್ವಸಿಟಿ ಕಾಲೇಜ್ ಮೂಲ್ಕಿ ಪ್ರಾಂಶುಪಾಲೆ ಪಮೀದಾ ಮನ್ಸೂರ್ ಬೇಗಾಂ ಹಾಗೂ ಗಣಿತ ಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ| ವಿಜಯ ಕುಮಾರಿ ಇವರಿಗೆ ಗುರುವಂದನೆ ನೆರವೇರಿಸಿದರು. ಹಾಗೂ ಸಂಘದ ಸಾಧಕ ಸದಸ್ಯರಾದ ಮುಂಬಯಿ ಬಿಎಆರ್‍ಸಿ ಇದರ ಹಿರಿಯ ವಿಜ್ಞಾನಿ ಪ್ರಫುಲ್ಲಾ ಎಸ್.ಶೆಣೈ ವಾಧ್ಯಾರ್ (ಪತಿ ಸತೀಶ್ ಶೆಣೈ), ಬಂಟ್ಸ್ ಸಂಘ ಮುಂಬಯಿ ಗೌರವ ಕೋಶಾಧಿಕಾರಿ ಪ್ರವೀಣ್ ಬಿ.ಶೆಟ್ಟಿ (ಪತ್ನಿ ನಮಿತಾ ಪ್ರವೀಣ್), ಜತೆ ಕೋಶಾಧಿಕಾರಿ ಗುಣಪಾಲ್ ಶೆಟ್ಟಿ ಐಕಳ (ಪತ್ನಿ ಸುಜತಾ ಗುಣಪಾಲ್), ಮೊಡೇಲ್ ಬ್ಯಾಂಕ್‍ನ ನಿರ್ದೇಶಕ ಲಾರೇನ್ಸ್ ಆರ್.ಡಿಸೋಜಾ (ಪತ್ನಿ ಜಾನೇಟ್ ಲಾರೇನ್ಸ್) ದಂಪತಿಗಳನ್ನು ಸನ್ಮಾನಿಸಿ ಅಭಿನಂದಿಸಿದರು. ಅಂತೆಯೇ ಸಂಘದ ಸದಸ್ಯರ ಪ್ರತಿಭಾವ್ವಾನಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನಿಸಿ ಗೌರವಿಸಿದರು. ಸನ್ಮಾನಿತರು ಕಾಲೇಜು ಜೀವನವನ್ನು ಪುನರಾವರ್ತಿಸಿ ಗೌರವಕ್ಕಾಗಿ ಅಭಿವಂದಿಸಿದರು. ಅತಿಥಿsಗಳೂ ಸಂದರ್ಭೊ ೀಚಿತವಾಗಿ ಮಾತನಾಡಿ ಸಂಘದ ಮುಂಬಯಿ ಘಟಕದ ಸೇವೆ ಮತ್ತು ಕಾರ್ಯವೈಖರಿ ಪ್ರಶಂಸಿಸಿದರು.

ಸುಹಾಸ್ ಹೆಗ್ಡೆ ಮಾತನಾಡಿ ನಾನು ಕೂಡಾ ವಿಜಯ ಕಾಲೇಜ್‍ನಲ್ಲಿರುವಾಗ ತುಂಬಾ ಮುಗ್ಧನಾಗಿದ್ದೆ. ಆಗ ನನಗೆ ಗುರುಗಳಾಗಿದ್ದದ್ದೇ ಐಕಳ ಹರೀಶ್ ಶೆಟ್ರು ಮತ್ತು ಕರ್ನಿರೆ ವಿಶ್ವನಾಥ ಶೆಟ್ರು. ನಾನು ಹಾಸ್ಟೇಲ್‍ನಲ್ಲಿದ್ದವ. ನಾನೂ ಆಗ ವಿಜಯ ಕಾಲೇಜ್‍ನ ಸದ್ಯದ ವಾಟ್ಸಪ್ ಗ್ರೂಪ್‍ಇದ್ದಂತಿದ್ದವ. ಏಕಂದರೆ ಈ ವಾಟ್ಸಪ್ ಗ್ರೂಪ್‍ನಲ್ಲಿ ಕಾಲೇಜ್‍ಗೆ ಸಂಬಂಧಿತ ವಿಷಯ ಬಿಟ್ಟು ಇತರೆಲ್ಲಾ ಮಾಹಿತಿ ಬಂರುತ್ತಿದ್ದಂತೆ ಬೇಕಾದ್ದದ್ದು ಬಿಟ್ಟು ಬೇಡದ್ದು ಬರುವಂತೆ ನಾನೂ ಬೆಳೆದವ. ಇದೆಲ್ಲವೂ ಆ ಕಾಲದ ವಿದ್ಯಾಥಿರ್ü ಬಾಳು. ಆದರೆ ಇಂದು ವಿಜಯ ಕಾಲೇಜ್‍ನ್ನು ಸುಧಾರಣೆ ಮಾಡುವ ಸಂಧಿಗ್ಧ ಪರಿಸ್ಥಿತಿಯಲ್ಲಿದ್ದೇನೆ. ಇದೀಗಲೇ ಅಭಿವೃದ್ಧಿ ಒಂದು ಹಂತದಲ್ಲಿದ್ದು ತಾವೆಲ್ಲರೂ ಸಹಯೋಗವನ್ನಿತ್ತರೆ ಎರಡೇ ವರ್ಷಗಳಲ್ಲಿ ಈ ಕಾಲೇಜನ್ನು ರಾಷ್ಟ್ರಮಟ್ಟಕ್ಕೆ ಬೆಳೆಸಿ ತೋರಿಸುವೆ ಎಂದರು.

ಕಾಲೇಜ್ ದಿನಗಳಲ್ಲಿ ನಾನು ತುಂಬಾ ಪಾಪದ ವಿದ್ಯಾಥಿರ್ü ಆಗಿದ್ದೆ. ಆದ್ದರಿಂದ ನನ್ನ ಬಗ್ಗೆ ಯಾರೂ ದೂರುಗಳನ್ನು ಹೇಳುವಂತಿಲ್ಲ. ಜೀವನೋಪಾಯದ ಅವಕಾಶ ವಂಚಿತರಾಗಿ ನಾವೆಲ್ಲಾ ಮುಂಬಯಿ ಸೇರಿದವರು. ಮುಂಬಯಿನಲ್ಲಿನ ನಮ್ಮ ಹೋರಾಟದ ಬದುಕು ಸುಲಭ ಸಾಧ್ಯವಾದದ್ದಲ್ಲ. ಎಲ್ಲರೂ ಹೋರಾಟ ನಡೆಸಿಯೇ ಸಾಧಕರೆಣಿಸಿದವರು. ಕಾಲೇಜು ದಿನಗಳಲ್ಲೇ ನಮ್ಮಲ್ಲಿ ಜಾತಿ, ಮತ, ಧರ್ಮದ ಬೇಧ ಕಂಡವರಲ್ಲ. ಇಂದು ನಾವು ಏನಾದರೂ ಸಿದ್ಧಿಸಿದ್ದದಿದ್ದರೆ ಅದು ವಿಜಯ ಕಾಲೇಜ್‍ನ ಹಿರಿಮೆಯಾಗಿದೆ ಎಂದು ಐಕಳ ಹರೀಶ್ ಶೆಟ್ಟಿ ಕಾಲೇಜು ದಿನದ ಬದುಕನ್ನು ಬಣ್ಣಿಸಿದರು.

ವಿದ್ಯಾಥಿರ್sಗಳನ್ನು ಕಾಲೇಜ್‍ಗೆ ಸೇರ್ಪಡೆ ಗೊಳಿಸುವಾಗಲೇ ಅವರನ್ನು ಶಿಸ್ತಿನ ಸಿಪಾಯಿಗಳಾಗಿಸಬೇಕು. ಅವರಲ್ಲಿನ ಅರ್ಹತೆಗುಣವಾಗಿ ಸೇರ್ಪಡಿಸಬೇಕು. ಕಾಲೇಜು ಮಂಡಳಿ ಜೊತೆಗೆ ಉಪನ್ಯಾಸಕರ ಶ್ರಮ ವಿದ್ಯಾಥಿರ್sಗಳನ್ನು ಚತುರರನ್ನಾಗಿಸ ಬಲ್ಲದು. ಆವಾಗ ಕಾಲೇಜ್‍ನ ಗುಣಮಟ್ಟ ತನ್ನಷ್ಟಕ್ಕೆ ಸುಧಾರಿತವಾಗುವುದು. ಮುಂದಿನ ವರ್ಷಗಳಲ್ಲಿ ವೇದಿಕೆಯಲ್ಲಿರುವ ನಾವುಗಳು ಸಭಿಕಸ್ಥಾನ ಬಯಸುತ್ತಿದ್ದು ಸಭಿಕ ಸದಸ್ಯರು ವೇದಿಕೆಯನ್ನು ಅಲಂಕರಿಸುವಂತಾಗಬೇಕು. ಆವಾಗ ಶೀಘ್ರಗತಿಯಲ್ಲಿ ನಮ್ಮ ಉದ್ದೇಶಗಳು ಫಲಪ್ರದವಾಗುವುದು ಎಂದು ನಿತ್ಯಾನಂದ ಹೆಗ್ಡೆ ತಿಳಿಸಿದರು.

ನಾವು ಅಭ್ಯಾಸಿಸಿದ ಶಿಕ್ಷಣಾಲಯದ ಋಣ ಪೂರೈಸುವುದು ನಮ್ಮೆಲ್ಲರ ಪರಮ ಕರ್ತವ್ಯವಾಗಬೇಕು. ಇದನ್ನು ನಾನು ಸರ್ವೋತ್ಕೃಷ್ಟ ಸೇವೆ ಅಂದುಕೊಂಡವ. ವಿಜಯ ಕಾಲೇಜ್‍ನ ಮೇಲೆ ಇಲ್ಲಿನ ಎಲ್ಲಾ ವಿದ್ಯಾಥಿರ್üಗಳಿಗೆ ಅಪಾರ ಒಲವು ಇದೆ. ಅದರಲ್ಲೂ ಮುಂಬಯಿವಾಸಿ ವಿದ್ಯಾಥಿರ್üಗಳು ತಮ್ಮಿಂದಾದ ದೇಣಿಗೆಗಳನ್ನು ನೀಡಿ ಋಣ ಪೂರೈಸಿ ಕಾಲೇಜ್‍ನ ಸಂಬಂಧ ಉಳಿಸಿಕೊಂಡಿರುವುದೇ ಈ ಸ್ನೇಹಮಿಲನದ ವೈಶಿಷ್ಟ್ಯವಾಗಿದೆ ಎಂದು ಕರ್ನಿರೆ ವಿಶ್ವಾನಾಥ್ ಅಭಿಪ್ರಾಯ ಪಟ್ಟರು.

ವಿಜಯ ಕಾಲೇಜು ಮಂಡಳಿ ಜೊತೆ ಸಂವಾದ ಸಭೆ ನಡೆಸಿ ಅವರ ಸಂಕಲ್ಪ, ಅವಶ್ಯತೆಗಳನ್ನು ಮೊದಲಾಗಿ ತಿಳಿಯೋಣ. ಇಂತಹ ಸ್ನೇಹ ಸಮ್ಮೀಲನಗಳು ಕಾಲೇಜ್‍ನ ಸರ್ವೋನ್ನತಿಗೆ ಬೆನ್ನೆಲುಬು ಆಗುವಂತಾಗಲಿ. ಆ ಮೂಲಕ ನಮ್ಮ ಮತ್ತು ವಿಜಯ ಕಾಲೇಜ್‍ನ ಆಸ್ತಿತ್ವವನ್ನು ಜಾಗತಿಕವಾಗಿ ಮೆರೆಸೋಣ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಆನಂದ ಶೆಟ್ಟಿ ತಿಳಿಸಿದರು.

ರಾಜ್‍ಕುಮಾರ್ ಕಾರ್ನಾಡ್ ಮತ್ತು ರತ್ನಾ ಉಮಾನಾಥ ಶೆಟ್ಟಿ ಹಾಡುಗಳನ್ನಾಡಿದರು. ಅಮಿತಾ ಕಲಾ ವೃಂದ ವಿೂರಾರೋಡ್ ತಂಡ ಹಾಗೂ ತನ್ವಿ ದಯಾನಂದ್, ಶೃತಿ ಜನಾರ್ದನ್ ನೃತ್ಯಗಳನ್ನು ಪ್ರದರ್ಶಿಸಿದರು. ಮಯೂರ್ ಮತ್ತು ಹರ್ಷ್ ರೋಹಿತಾಕ್ಷ ದೇವಾಡಿಗ ಸಹೋದರರು ಯೋಗ ಅಭ್ಯಾಸದ ತಿಳುವಳಿಕೆ ಪ್ರಸ್ತುತ ಪಡಿಸಿದರು. ಶಶಿಧರ್ ಆರ್.ಬಂಗೇರ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.

ಸಂಘದ ಕಾರ್ಯಕಾರಿ ಸಮಿತಿ, ಸಲಹಾಸಮಿತಿ ಹಾಗೂ ಸದಸ್ಯರು, ಹಳೆ ವಿದ್ಯಾಥಿರ್üಗಳನೇಕರು ಉಪಸ್ಥಿತರಿದ್ದು,
ಚಿತ್ರಾ ಗಣೇಶ್ ಶೆಟ್ಟಿ ಪ್ರಾರ್ಥನೆಯನ್ನಾಡಿದರು. ಕೋಶಾಧಿಕಾರಿ ಅಶೋಕ್ ದೇವಾಡಿಗ ಗತ ವಾರ್ಷಿಕ ಹಣಕಾಸು ಮಾಹಿತಿ ನೀಡಿದರು. ರತ್ನಾಕರ್ ಆರ್.ಸಾಲ್ಯಾನ್, ಸರಿತಾ ರಾವ್, ಪುಷ್ಪಾ ಶೆಟ್ಟಿ, ದಿನೇಶ್ ಸಿ.ಸಾಲ್ಯಾನ್, ಭಾಸ್ಕರ್ ಬಿ.ಶೆಟ್ಟಿ, ತಕ್ಚಿಲ ಪ್ರಸಾದ್ ಭಂಡಾರಿ ಪುರಸ್ಕೃತರನ್ನು ಪರಿಚಯಿಸಿದರು. ಪ್ರತಿಭಾವ್ವಾನಿತ ಮಕ್ಕಳ ಯಾದಿ ವಾಚಿಸಿದರು. ವಾಸುದೇವ ಎಂ.ಸಾಲ್ಯಾನ್, ಹರೀಶ್ ಹೆಜ್ಮಾಡಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ನ್ಯಾ| ಶೇಖರ ಎಸ್.ಭಂಡಾರಿ ಸಂಘದ ವಾರ್ಷಿಕ ವರದಿ ವಾಚಿಸಿ ಉಪಕಾರ ಸ್ಮರಿಸಿದರು.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here