ಸಂಸ್ಕೃತಿ ಧರ್ಮಾನುಭಕ್ಕೆ ಮಯೂರವರ್ಮ ಆದರ್ಶ : ತೋನ್ಸೆ ವಿಜಯಕುಮಾರ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಫೆ.17: ಸಂಸ್ಕೃತಿ ಉಳುವಿಗೆ ಸಾಂಸ್ಕೃತಿಕ ಪ್ರತಿಷ್ಠಾನವು ಮಾದರಿಯಾಗಿದೆ. ದಶವರ್ಷ ದಾಟುವಲ್ಲಿ ವಿಶೇಷ ಪರಿಕಲ್ಪನೆ ಚಂದ ಅನುಪಮವಾದುದು. ಪ್ರತಿಷ್ಠಾನದ ಈ ವರೇಗಿನ ಎಲ್ಲಾ ಕಾರ್ಯಕ್ರಮಗಳು ಕಣ್ಣಿಗೆ, ಕಿವಿಗೆ ಚಂದದ ಅನುಭವ ನೀಡಿದೆ. ಎಲ್ಲಾ ಭಾಷೆಗಳಿಗೆ ವಿಶೇಷ ಮಾನ್ಯತೆ ನೀಡಿದ ಅಸಾಮಾನ್ಯ ಕಾರ್ಯಕ್ರಮ ಇದಾಗಿದೆ. ಆದ್ದರಿಂದ ಸಂಸ್ಕೃತಿ ಧರ್ಮಾನುಭಕ್ಕೆ ಮಯೂರವರ್ಮ ಸಂಸ್ಥೆಯು ಎಂದು ಕಲಾಜಗತ್ತು ಮುಂಬಯಿ ಅಧ್ಯಕ್ಷ ಡಾ| ತೋನ್ಸೆ ವಿಜಯ ಕುಮಾರ್ ಶೆಟ್ಟಿ ನುಡಿದರು.
ಇಂದಿಲ್ಲಿ ಬುಧವಾರ ಸಂಜೆ ಘಾಟ್ಕೋಪರ್ ಅಸಲ್ಪ ಇಲ್ಲಿ ಶ್ರೀ ಗೀತಾಂಬಿಕಾ ಮಂದಿರದ ಸಭಾಗೃಹದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಕೃತಿ ಬಿಡುಗಡೆ, ಪ್ರಶಸ್ತಿ ಪ್ರದಾನ, ಸಂಸ್ಕೃತ ಕಾವ್ಯಗೋಷ್ಠಿ ಇತ್ಯಾದಿ ವೈವಿಧ್ಯತೆಗಳೊಂದಿ ಗೆ ಮಹಾನಗರದಲ್ಲಿನ ಹೆಸರಾಂತ ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನವು ತನ್ನ ದಶಮಾನೋತ್ಸವ ಸಂಭ್ರಮಿಸಿದ್ದು ಮುಖ್ಯ ಅತಿಥಿüಯಾಗಿದ್ದು ವಿಜಯ ಕುಮಾರ್ ಶೆಟ್ಟಿ ಮಾತನಾಡಿದರು.
ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭದಲ್ಲಿ ಕನ್ನಡ ಸಂಘ ಮುಂಬಯಿ ಮಹಿಳಾ ವಿಭಾಗಧ್ಯಕ್ಷೆ ಡಾ| ರಜನಿ ವಿ.ಪೈ ಗೌರವ ಅತಿಥಿüಯಾಗಿದ್ದು ಶ್ರೀ ಪಲಿಮಾರು ಮಠ (ವಿೂರಾರೋಡ್) ಮುಂಬಯಿ ಇದರ ಪ್ರಧಾನ ಆರ್ಚಕ ವಿದ್ವಾನ್ ರಾಧಾಕೃಷ್ಣ ಶ್ರೀಪತಿ ಭಟ್ ಕಲ್ಲಂಜೆ ದೀಪ ಪ್ರಜ್ವಲಿಸಿ ಸಮಾಂರಂಭ ಉದ್ಘಾಟಿಸಿ ಅನುಗ್ರಹಿಸಿದರು. ಪ್ರತಿಷ್ಠಾನ ಹತ್ತು ವರ್ಷಗಳ ಸವಿನೆನಪಿನ `ದಶಧಾರೆ (ನನ್ನೂರು-ನನ್ನ ಶಹರ)' ಕೃತಿಯನ್ನು ಸುರೇಶ್ ಭಂಡಾರಿ ಬಿಡುಗಡೆ ಗೊಳಿಸಿ ಪ್ರತಿಷ್ಠಾನ ಕೊಡಮಾಡುವ 2020ನೇ ವಾರ್ಷಿಕ `ಚಕ್ರಧಾರಿ ಪ್ರಶಸ್ತಿ'ಯನ್ನು ನಾಡಿನ ಹಿರಿಯ ಸಾಹಿತಿ, ಕವಯತ್ರಿ ಡಾ| ಸುನೀತಾ ಎಂ.ಶೆಟ್ಟಿ ಇವರಿಗೆ ಮತ್ತು ವಾರ್ಷಿಕ `ಕೃಷಿಬಂಧು' ಪುರಸ್ಕಾರವನ್ನು ಶಾರದಾ ಚಂದ್ರಶೇಖರ್ ಮೂಲೆಮನೆ ಇವರಿಗೆ ಪ್ರದಾನಿಸಿದರು. ಪ್ರತಿಷ್ಠಾನದ ಗೌ| ಪ್ರ| ಕಾರ್ಯದರ್ಶಿ ವಿಶ್ವನಾಥ ದೊಡ್ಮನೆ ಮತ್ತು ಸಾಫಲ್ಯ ಮಾಸಿಕದ ಸಂಪಾದಕಿ ಡಾ| ಜಿ.ಪಿ ಕುಸುಮ ಅಭಿನಂದನಾ ನುಡಿಗಳನ್ನಾಡಿ ಪುರಸ್ಕೃತರಿಗೆ ಅಭಿನಂದನಾ ನುಡಿಗಳನ್ನಾಡಿ ಶುಭಾರೈಸಿದರು.
ಪ್ರತಿವರ್ಷದ ವಾರ್ಷಿಕೋತ್ಸವದಲ್ಲಿ ಒಂದು ಧನ್ಯತಾಭಾವ ಮೂಡುತ್ತದೆ. ಕನ್ನಡ ನಾಡಿನ ಜನತೆ ಉದರ ಪೆÇೀಷಣೆಗಾಗಿ ಮರಾಠಿ ನೆಲಕ್ಕೆ ಬಂದ ಕನ್ನಡಿಗರು ಸಂಸ್ಥೆಗಳನ್ನು ಹುಟ್ಟುಹಾಕಿ ಮಾಡಿರುವ ಅದ್ಭುತ ಕೆಲಸಗಳು ಸಮಗ್ರ ಕನ್ನಡಿಗರಿಗೆ ಸಲ್ಲುವ ಗೌರವ. ಒಳನಾಡ ಬೆಂಗಳೂರುನಲ್ಲಿ ನಡೆಯುವುದಕ್ಕಿಂತ ಹೆಚ್ಚಿನ ಕನ್ನಡ ಚಟುವಟಿಕೆಗಳು ಮುಂಬಯಿಯಲ್ಲಿ ನಡೆಯುತ್ತಿದೆ. ಇದು ಸಕಲ ಕನ್ನಡಿಗರ ಹಿರಿಮೆಯಾಗಿದೆ ಎಂದÀು ರಜನಿ ಪೈ ತಿಳಿಸಿದರು.
ಮುಂಬಯಿಯಲ್ಲಿ ಪ್ರತಿಭೆಗಳ ಪ್ರತಿಭಾನ್ವೇಷಣೆಗೆ ಉತ್ತಮ ಅವಕಾಶಗಳಿದೆ. ಯಾರು ಹಿಂಜರಿಯದೆ ನಡೆ ಮುಂದೆ ಎಂಬಂತೆ ಮುಂದೆ ಬಂದು ತಮ್ಮಲ್ಲಿನ ಪ್ರತಿಭಾ ಅನಾವರಣ ಮಾಡಬೇಕು ಎಂದÀು ರಾಧಾಕೃಷ್ಣ ಭಟ್ ಆಶಯ ವ್ಯಕ್ತಪಡಿಸಿದರು.
ಡಾ| ಸುನೀತಾ ಎಂ.ಶೆಟ್ಟಿ ಮಾತನಾಡಿ ಹೊಸತನದ ಪ್ರಯತ್ನ, ಪ್ರೇರಣೆಗೆ ಇದೊಂದು ಮಾದರಿ ಕಾರ್ಯಕ್ರಮ. ಹಳೇ ಸಂಸ್ಕೃತಿಯೊಂದಿಗೆ ಹೊಸತನವನ್ನೇ ರೂಢಿಸುತ್ತಾ ಭಾವೀ ಜನಾಂಗಕ್ಕೆ ಉತ್ಸಹ ತುಂಬುವ ಪ್ರಯತ್ನ ಅಭಿನಂದನೀಯ. ಎಲ್ಲರಲ್ಲೂ ಆಸಕ್ತಿ ಹುಟ್ಟಿಸುವ ಸಾಧನೆ ಇದಾಗಿದೆ. ನನಗೆ ಮುಂಬಯಿ ಅಂದರೆ ತುಂಬಾ ಖುಷಿ. ಮುಂಬಯಿಯಂತಹ ಸುಖಾನುಭವದ ಜಾಗ ವಿಶ್ವದಲ್ಲೇ ಮತ್ತೊಂದಿಲ್ಲ. ಇಲ್ಲಿನ ಜನರೂ ಮತ್ತೆಲ್ಲೂ ಸಿಗಲಾರರು. ಎಲ್ಲರೂ ಸಾಮರಸ್ಯಕ್ಕೆ ಒತ್ತುನೀಡುತ್ತಾ ಪರಸ್ಪರ ಪ್ರೀತಿಸುತ್ತಾ ಮನುಕುಲದ ಬದುಕಿಗೆ ಬದ್ಧರಾದ ಮುಂಬಯಿ ಜನತೆ ಜಗತ್ತಿಗೇ ಮಾದರಿ. ಎಲ್ಲರೂ ತಮ್ಮತಮ್ಮ ಜಾತಿ, ಮತ, ಧರ್ಮ, ಪಂಥ, ಭಾಷೆಗಳನ್ನು ಉಳಿಸಿ ಬೆಳೆಸಿ ಬಾಳುವ ಮುಂಬಯಿಗರು ಭಾವೈಕ್ಯತಾ ಬಾಳಿಗೆ ಪ್ರೇರಕರು. ಮೂಲ ಪುರಾಣಗಳಿಗೆ ಅಪಚಾರ ಎಸಗದೆ, ಯಾವುದನ್ನೂ ತಿರುಚದೆ ಹೊಸತನವನ್ನು ಸೃಷ್ಟಿಸಿ ಪ್ರೇರೆಪಿಸುವ ಇಂತಹ ಪ್ರತಿಷ್ಠಾನಗಳಿಂದ ಇದೆಲ್ಲಾ ಸಾಧ್ಯವಾಗುತ್ತಿದೆ ತಿಳಿಸುತ್ತಾ ಪ್ರಶಸ್ತಿಗೆ ಅಭಿವಂದಿಸಿದರು.
ಇದು ನಾಡಿನ ಸಮಗ್ರ ರೈತರು, ಕೃಷಿಕರಿಗೆ ಸಂದ ಗೌರವ ಎಂದÀು ಪುರಸ್ಕಾರಕ್ಕೆ ಉತ್ತರಿಸಿ ಶಾರದಾ ಚಂದ್ರಶೇಖರ್ ತಿಳಿಸಿದರು.
ಪ್ರತಿಷ್ಠಾನದ ಯಶಸ್ಸಿನ ಎಲ್ಲಾ ಕೆಲಸ ಮಾಡಿದವರು ವಿಶ್ವನಾಥ ದೊಡ್ಮನೆ. ಕಡಂದಲೆಯ ಹೆಸರನ್ನು ಒಂದು ಅಂಶ ಬೆಳಕಿದ್ದೇ ಆದರೆ ಪ್ರದ್ಯುಮ್ನ ಒಂದೇ ದಿಕ್ಕಿಗೆ ಪಯಣ ಹೋಗುವ ದಾರಿಗಳು ಮಾತ್ರ ಬೇರೆ. ನಮ್ಮ ಧರ್ಮದ ಗುರಿ ದೇವರನ್ನು ಸೇರುವುದು. ನಮ್ಮ ಧರ್ಮವನ್ನು ತಾಯಿಯ ಹಾಗೆ ಪ್ರೀತಿಸಿ ಬೇರೆ ಧರ್ಮವನ್ನು ಗೌರವಿಸುವುದು ಆಗಬೇಕು. ನಾವೂ ಮಕ್ಕಳನ್ನು ಅನುಷ್ಠಾನದ ಮೂಲಕ ಬೆಳೆಸಿ ಪ್ರದ್ಯುಮ್ನ ಮೂರ್ತಿ ಹಾಗೆ ಬೆಳೆಸಬೇಕು. ಸುನೀತಾ ಅಕ್ಕ ಅವರಿಗೆ `ಚಕ್ರಧಾರಿ ಪ್ರಶಸ್ತಿ' ಪ್ರದಾನಿಸಿ ಗೌರವಿಸಿದ್ದು ಈ ಪ್ರಶಸ್ತಿಗೆ ಇನ್ನೂ ಹೆಚ್ಚಿನ ಮೌಲ್ಯ ಬಂದಿದೆ ಎಂದು ಅಧ್ಯಕ್ಷೀಯ ಭಾಷ್ಣದಲ್ಲಿ ಸುರೇಶ್ ಭಂಡಾರಿ ತಿಳಿಸಿದರು.
ಯುವವಾಗ್ಮೀ ಮಾ| ಪದ್ಯುಮ್ನ ಮೂರ್ತಿ ಕಡಂದಲೆ ಅಧ್ಯಕ್ಷತೆಯಲ್ಲಿ ಸಂಸ್ಕೃತ ಕಾವ್ಯ ಸೌರಭ ವಿಶೇಷ ಕಾರ್ಯಕ್ರಮ ನಡೆದಿದ್ದು, ವಿದ್ವಾನ್ ಅರವಿಂದ ಬನ್ನಿಂತಾಯ, ರಾಮಚಂದ್ರ ಶಾಸ್ತ್ರೀ, ಡಾ| ಕುಮಾರ ಭಟ್, ಗೋಪಾಲ ಭಟ್, ಅನಂತ ಭಟ್, ಶಾಂತಾ ಶಾಸ್ತ್ರಿ, ಕೃಷ್ಣ ಉಡುಪ, ಶೈಲಜಾ ಹೆಗಡೆ, ಕು| ದೀತ್ಯ ಶಿವತ್ತಾಯ, ಮಾ| ನಿರಂಜನ ರಾವ್ ತಮ್ಮ ಕಾವ್ಯಗಳನ್ನು ವಾಚಿಸಿದರು.
ಮಾಲತಿ ಪುತ್ರನ್ ಮತ್ತು ಸಂಗಡಿಗರು ಪ್ರಾರ್ಥನೆಯನ್ನಾಡಿದರು. ವಿಶ್ವನಾಥ ದೊಡ್ಮ ಸ್ವಾಗತಿಸಿದರು. ಜಿ.ಟಿ ಆಚಾರ್ಯ ಅವರು ಪ್ರಶಸ್ತಿಗಳ ಬಗ್ಗೆ ತಿಳಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಸುಜತಾ ಆರ್.ಶೆಟ್ಟಿ ಕೃತಿಯನ್ನು ವಿಶ್ಲೇಷಿಸಿದರು. ಶಾಂತಾಲಕ್ಷಿ ್ಮೀ ಉಡುಪ ಮತ್ತು ತನುಜಾ ಎಂ.ಭಟ್ ಪುರಸ್ಕೃತರನ್ನು ಪರಿಚಯಿಸಿದರು. ಶಿಕ್ಷಕಿ ಅಮೃತಾ ಎ.ಶೆಟ್ಟಿ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಪದಾಧಿಕಾರಿಗಳು ಅತಿಥಿüಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಪ್ರತಿಷ್ಠಾನದ ಉಪಾಧ್ಯಕ್ಷ ರಾಜೇಶ ಪಿ.ಗೌಡ ಗಣ್ಯರ ಸಂದೇಶ ವಾಚಿಸಿ ವಂದನಾರ್ಪಣೆಗೈದರು.
ಪ್ರತಿಷ್ಠಾನದ ಕೋಶಾಧಿಕಾರಿ ಪದ್ಮನಾಭ ಸಪಲಿಗ, ಪುರಸ್ಕಾರ ಆಯ್ಕೆ ಸಮಿತಿಯ ಎಸ್.ಕೆ ಸುಂದರ್, ನ್ಯಾ| ಆರ್.ಎಂ ಭಂಡಾರಿ, ಹೆಚ್.ಬಿ.ಎಲ್ ರಾವ್, ಗುರುರಾಜ್ ಎಸ್.ನಾಯಕ್, ರಾಜ್‍ಕುಮಾರ್ ಕಾರ್ನಾಡ್, ಪತ್ರಕರ್ತ ಶೇಖರ್ ಅಜೆಕಾರ್, ಸಂಗೀತ ನಿರ್ದೇಶಕ ರಕೀರಾ ಬೆಂಗಳೂರು, ಲತಾ ಸಂತೋಷ್ ಶೆಟ್ಟಿ ಮುದ್ದುಮನೆ, ಸವಿತಾ ಎಸ್.ಶೆಟ್ಟಿ ಮತ್ತಿತರ ಗಣ್ಯರು ಹಾಜರಿದ್ದು ಸಾಂಸ್ಕೃತಿಕ ಕಾರ್ಯಕ್ರಮವಾಗಿ ದಿನಕರ ಭಂಡಾರಿ ಕಣಂಜಾಲು ರಚಿಸಿ ಕರುಣಾಕರ ಕೆ.ಕಾಪು ನಿರ್ದೇಶಿಸಿದ `ಒಯಿಕ್ಲಾ ಕಾಸ್ ಬೋಡು' ತುಳು ಸಾಮಾಜಿಕ ಹಾಸ್ಯ ನಾಟಕವನ್ನು ಅಭಿನಯ ಮಂಟಪ ಮುಂಬಯಿ ಕಲಾವಿದರು ಪ್ರದರ್ಶಿಸಿದರು.