ಮುಂಬಯಿ (ಬರೋಡಾ), ಫೆ.21: ಗುಜರಾತ್ ಬಿಲ್ಲವರ ಸಂಘವು ಗುಜರಾತ್‍ನ ಬರೋಡಾ ಅಲ್ಕಾಪುರಾ ಇಲ್ಲಿನ ತನ್ನ ಶ್ರೀ ಬ್ರಹ್ಮಬೈದರ್ಕಳ ಸಭಾಗೃಹದಲ್ಲಿ ಇಂದಿಲ್ಲಿ ಮಹಾಶಿವರಾತ್ರಿ ಆಚರಿಸಿತು. ಸಂಘದ ಗೌರವಾಧ್ಯಕ್ಷ ದಯಾನಂದ ಬೋಂಟ್ರಾ ಅವರ ಸಾರಥ್ಯ, ಸಂಘದ ಅಧ್ಯಕ್ಷ ಮನೋಜ್ ಸಿ.ಪೂಜಾರಿ ಹಾಗೂ ಕಾರ್ಯದರ್ಶಿ ವಾಸು ಸುವರ್ಣ ಅವರ ಮುಂದಾಳತ್ವದಲ್ಲಿ ಉತ್ತರಾಷಾಢಾ, ತ್ರಯೋದಶಿಯ ಶುಭಾವಸರಧಿ ಸಂಘದ ಎಲ್ಲಾ ಶಾಖೆಗಳ ಮುಖ್ಯಸ್ಥರು ಮತ್ತು ಸದಸ್ಯರನ್ನೊಳಗೊಂಡು ಲಘರುದ್ರಾಭಿಷೇಕ, ಪೂಜಾಧಿಗಳಿಂದ ಶಾಸ್ತ್ರೋಕ್ತವಾಗಿ ಶ್ರದ್ಧಾಭಕ್ತಿಪೂರ್ವಕವಾಗಿ ಮಹಾಶಿವರಾತ್ರಿ ಆಚರಿಸಿದರು.
ಸಂಘದ ಪದಾಧಿಕಾರಿಗಳು, ಮಹಿಳಾ ಮತ್ತು ಯುವ ವಿಭಾಗದ ಸದಸ್ಯರನೇಕರು ಹಾಜರಿದ್ದು, ನಡೆಸಲ್ಪಟ್ಟ ಧಾರ್ಮಿಕ ಕಾರ್ಯಕ್ರಮದ ಆರಂಭದಲ್ಲಿ ಗಣ್ಯರು ಮಂದಿರದಲ್ಲಿನ ಕೋಟಿ ಚೆನ್ನಯರು ಮತ್ತು ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆಗಳಿಗೆ ಪೂಜೆ ನೆರವೇರಿಸಿದ್ದು, ಮಹಿಳಾ ವಿಭಾಗದಧ್ಯಕ್ಷೆ ಸರಿತಾ ಪೂಜಾರಿ ಮತ್ತು ಮಹಿಳಾವೃಂದ, ಯುವ ವಿಭಾಗದ ಸದಸ್ಯರು ಭಜನೆ ನಡೆಸಿ ಪೂಜಾಧಿಗಳಲ್ಲಿ ಪಾಲ್ಗೊಂಡಿದ್ದÀರು. ಕೊನೆಯಲ್ಲಿ ಪ್ರಸಾದರೂಪವಾಗಿ ಅನ್ನಸಂತರ್ಪಣೆ ನಡೆಸಲ್ಪಟ್ಟಿತು.