ವೃತ್ತಿಪರ ಸಂಸ್ಥೆಗಳ ಕ್ರೀಡಾಕೂಟಗಳು ಸಾಮರಸ್ಯಕ್ಕೆ ಪೂರಕ : ಸಿ.ಆರ್ ಮೂಲ್ಕಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಫೆ.21: ವೃತ್ತಿಪರ ಸಂಸ್ಥೆಗಳ ಕ್ರೀಡಾಕೂಟಗಳು ಸಹೋದ್ಯೋಗಿಗಳಲ್ಲಿನ ಅನ್ಯೋನತೆ, ಸಾಮರಸ್ಯಕ್ಕೆ ಪೂರಕವಾಗಿದೆ. ಇದು ಸಹೋದ್ಯೋಗಿಗಳೊಳಗಿನ ಸ್ಪರ್ಧೆಯಲ್ಲ ಬದಲಾಗಿ ತಮ್ಮೆಲ್ಲರೊಳಗಿನ ಕ್ರೀಡಾಸ್ಪೂರ್ತಿ, ಪ್ರತಿಭಾನಾವರಣ ಗೊಳಿಸುವ ಸಂಧಿಯಾಗಿದೆ. ಇದೊಂದು ಉತ್ತಮ ಭಾಗವಹಿಸಿಕೆ ಆಗಿದೆ ಎಂದು ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್‍ನ ಸಿಇಒ-ಆಡಳಿತ ನಿರ್ದೇಶಕ ಸಿ.ಆರ್ ಮೂಲ್ಕಿ ತಿಳಿಸಿದರು.
ಇಂದಿಲ್ಲಿ ಶುಕ್ರವಾರ ಕಾಂದಿವಲಿ ಪೂರ್ವದಲ್ಲಿನ ಠಾಕೂರು ವಿಲೇಜ್‍ನಲ್ಲಿರುವ ಠಾಕೂರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ್ ಬ್ಯಾಂಕ್ ಸ್ಟಾಪ್ ವೆಲ್ಫೇರ್ ಕ್ಲಬ್ ಮುಂಬಯಿ ತನ್ನ ವಾರ್ಷಿಕ ಕ್ರೀಡಾ ಪಂದ್ಯಾಟ (ಸ್ಪೋರ್ಟ್ಸ್ ಟೂರ್ನಮೆಂಟ್) 2020 ಆಯೋಜಿಸಿದ್ದು, ಬೆಳಿಗ್ಗೆ ಆಯೋಜಿಸಿದ್ದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿದ್ದು ದೀಪ ಬೆಳಗಿಸಿ ಪಂದ್ಯಾಟ ಉದ್ಘಾಟಿಸಿ ಸಿ.ಆರ್ ಮೂಲ್ಕಿ ಮಾತನಾಡಿದರು.
ಬ್ಯಾಂಕ್‍ನ (ನಿಯೋಜಿತ) ಆಡಳಿತ ನಿರ್ದೇಶಕ ಮತ್ತು ಭಾರತ್ ಬ್ಯಾಂಕ್ ಸ್ಟಾಪ್ ವೆಲ್ಫೇರ್ ಕ್ಲಬ್‍ನ ಅಧ್ಯಕ್ಷ ವಿದ್ಯಾನಂದ ಎಸ್.ಕರ್ಕೇರ, ಭಾರತ್ ಬ್ಯಾಂಕ್‍ನ ಬ್ಯಾಂಕ್‍ನ ಜಂಟಿ ಆಡಳಿತ ನಿರ್ದೇಶಕ ದಿನೇಶ್ ಬಿ.ಸಾಲ್ಯಾನ್, ಉಪ ಪ್ರಧಾನ ಪ್ರಬಂಧಕರಾದ ಪ್ರಭಾಕರ್ ಜಿ.ಸುವರ್ಣ, ನಿವೃತ್ತ ಉನ್ನತ ಅಧಿಕಾರಿಗಳಾದ ಶೋಭಾ ದಯಾನಂದ್ ಪೂಜಾರಿ, ಸುರೇಶ್ ಎಸ್.ಸಾಲ್ಯಾನ್, ನವೀನ್ಚಂದ್ರ ಎಸ್.ಬಂಗೇರ, ಅತಿಥಿü ಅಭ್ಯಾಗತರಾಗಿ ವೇದಿಕೆಯಲ್ಲಿದ್ದು ಏಕದಿನದ ಪಂದ್ಯಾಟಕ್ಕೆ ಶುಭಾರೈಸಿದರು.
ಸಹೋದ್ಯೋಗಿಗಳÀ ಕ್ರೀಡಾವಕಾಶಗಳು ವ್ಯವಹಾರ ಕೌಶಲ ಹೆಚ್ಚಿಸುತ್ತಿದ್ದು, ದೈನಂದಿನ ವೃತ್ತಿ ಒತ್ತಡದ ಮುಕ್ತತೆಗೆ ಇದೊಂದು ಉತ್ತಮ ಅವಕಾಶವೂ ಹೌದು. ಮಾನಸಿಕ ಮತ್ತು ಆರೋಗ್ಯದ ಬಲವರ್ಧನೆಗೆ ಇಂತಹ ಸ್ನೇಹಪರ ಆಟೋಟಗಳು ಸಂಬಂಧಗಳನ್ನು ಮತ್ತಷ್ಟು ಸಮರ್ಥಗೊಳಿಸ ಬಲ್ಲವು. ಆದ್ದರಿಂದ ಎಲ್ಲರೂ ಕ್ರೀಡಾ ಬಾಧ್ಯತೆ ಹೆಚ್ಚಿಸಿ ಕ್ರೀಡೋಲ್ಲಾಸಕ್ಕೆ ಒತ್ತು ನೀಡುವಂತೆ ವಿದ್ಯಾನಂದ ಕರ್ಕೇರ ಕರೆಯಿತ್ತರು.
ಈ ಸಂದರ್ಭದಲ್ಲಿ ಸ್ಟಾಪ್ ವೆಲ್ಫೇರ್ ಕ್ಲಬ್‍ನ ಕೋಶಾಧಿಕಾರಿ ಸೌರಭ್ ಅಗರ್‍ವಾಲ್, ಜತೆ ಕಾರ್ಯದರ್ಶಿ ದೀಪಕ್ ಪ್ರಭು, ಜತೆ ಕೋಶಾಧಿಕಾರಿ ನಿಶಾ ಕೆಲ್ಲಪುತ್ತಿಗೆ, ಅಂತರಿಕ ಲೆಕ್ಕಪರಿಶೋಧಕಿ ಮೋಕ್ಷ ಕುಂದರ್, ಭಾರತ್ ಬ್ಯಾಂಕ್ ಆಫೀಸರ್ಸ್ ಅಸೋಸಿಯೇಶನ್‍ನ ಅಧ್ಯಕ್ಷ ದಿನೇಶ್ ಪೂಜಾರಿ, ಕಾರ್ಯದರ್ಶಿ ಪ್ರೇಮಾನಂದ ಪೂಜಾರಿ, ಮಾಜಿ ಅಧ್ಯಕ್ಷ ಕಿರಣ್ ಬಿ.ಅವಿೂನ್ ಸೇರಿದಂತೆ ಕ್ಲಬ್‍ನ ಅಪಾರ ಸಂಖ್ಯೆಯ ಸದಸ್ಯರು ಪಂದ್ಯಾಟದಲ್ಲಿ ಭಾಗವಹಿಸಿದ್ದರು.
ಪಂದ್ಯಾಟದಲ್ಲಿ ಕ್ರಿಕೆಟ್, ಪುರುಷರು ಮತ್ತು ಮಹಿಳೆಯರಿಗಾಗಿ ಬಾಕ್ಸ್ ಕ್ರಿಕೆಟ್, ಮಹಿಳೆಯರಿಗಾಗಿ ಥ್ರೋಬಾಲ್, ಮಕ್ಕಳಿಗಾಗಿ ಫನ್ ಗೇಮ್ಸ್ ಏರ್ಪಾಡಿಸಲ್ಪಟ್ಟಿದ್ದು ಕ್ರಿಕೆಟ್‍ನಲ್ಲಿ 11 ತಂಡಗಳು, ಪುರುಷರ ಬಾಕ್ಸ್ ಕ್ರಿಕೆಟ್‍ನಲ್ಲಿ 6 ತಂಡಗಳು, ಮಹಿಳೆಯರ ಬಾಕ್ಸ್ ಕ್ರಿಕೆಟ್‍ನಲ್ಲಿ 7 ತಂಡಗಳು, ಥ್ರೋಬಾಲ್‍ನಲ್ಲಿ 6 ತಂಡಗಳು ಪಾಲ್ಗೊಂಡವು. ಬ್ಯಾಂಕ್‍ನ ಉಪ ಪ್ರಧಾನ ಪ್ರಬಂಧಕ ಮಹೇಶ್ ಬಿ.ಕೋಟ್ಯಾನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ತೇಜಸ್ ಸೆಲೆವರಿಯಾ, ರುಚಿತ ಬರೂಟ್, ಸುದರ್ಶನ್ ಪವಾರ್ ಸ್ಪರ್ಧೆಗಳನ್ನು ನಿರ್ವಹಿಸಿದರು. ವೆಲ್ಫೇರ್ ಕ್ಲಬ್‍ನ ಗೌ| ಪ್ರ| ಕಾರ್ಯದರ್ಶಿ ರೇವತಿ ಪೂಜಾರಿ ವಂದನಾರ್ಪಣೆಗೈದರು.