Saturday 10th, May 2025
canara news

ಕೆನರಾ ಪಿಂಟೋ ಟ್ರಾವೆಲ್ಸ್‍ನ ಮಲ್ಟಿಎಕ್ಸೆಲ್ ಸ್ಲೀಪರ್ ಎಸಿ ಐ-ಶಿಫ್ಟ್ ನೂತನ ಐಷಾರಾಮಿ ಬಸ್‍ಗಳ ಮುಂಬಯಿ-ಮಂಗಳೂರು ಸಂಚಾರ ಆರಂಭ

Published On : 08 Mar 2020   |  Reported By : Rons Bantwal


ಮುಂಬಯಿ, ಮಾ.05: ಪ್ರಾದೇಶಿಕ ಮತ್ತು ಅಂತರ್‍ರಾಜ್ಯ ಪ್ರಯಾಣ ಸೇವೆಯಲ್ಲಿ ಸುಮಾರು ಏಳು ದಶಕಗಳ ನಿರಂತರ ಸೇವೆಯಲ್ಲಿ ತೊಡಗಿಸಿ ಕೊಂಡು ಪ್ರವಾಸಿಗರ ಸಂಚಾರಕ್ಕೆ ಹೆಸರಾಂತ ಕೆನರಾ ಪಿಂಟೋ ಟ್ರಾವೆಲ್ಸ್ ಇದೀಗ ಅತ್ಯಾಧುನಿಕ ದ ಸ್ಟಾರ್ಝ್ ಪ್ರೀಮಿಯಂ ವೊಲ್ವೋ ಬಿ11ಆರ್-14.95 ಮೀಟರ್ ಮಲ್ಟಿಎಕ್ಸೆಲ್ ಸ್ಲೀಪರ್ ಎಸಿ ಐ-ಶಿಫ್ಟ್ ಪ್ರತ್ಯೇಕ ಎಲ್‍ಸಿಡಿಗಳುಳ್ಳ 42-ಸ್ಲೀಪರ್ ಬರ್ತ್ ಐಷಾರಾಮಿ ಬಸ್‍ಗಳನ್ನು ಪ್ರಯಾಣಿಕರ ಸೇವೆಗೆ ಸಿದ್ಧಪಡಿಸಿದೆ. ಮಂಗಳೂರು ಮುಂಬಯಿ ಮಂಗಳೂರು ಮಾರ್ಗವಾಗಿ ಈ ನೂತನ ಐಷಾರಾಮಿ ಬಸ್‍ಗಳು ಸೇವೆಗೆ ಸಜ್ಜಾಗಿದ್ದು ಇಂದು ಮಂಗಳೂರುನಿಂದ ಮೊದಲ ಸಂಚಾರ ಆರಂಭಿಸಲಿದೆ.

ಕಳೆದ ಸುಮಾರು ಏಳು ದಶಕಗಳಿಂದ ಪ್ರಯಾಣಿಕರ ವಿಶ್ವಾಸರ್ಹ ಸೇವೆಯಲ್ಲಿ ಕೆನರಾ ಪಿಂಟೊ ಟ್ರಾವೆಲ್ಸ್ ಸಂಸ್ಥೆ ಪ್ರಯಾಣಿಕರ ಭರವಸೆಗೆ ಪಾತ್ರವಾಗಿದ್ದು ಇದೀಗ ಗ್ರಾಹಕ ಪ್ರಾಯಣಿಕರ ಅನುಕೂಲಕ್ಕಾಗಿ ಮಂಗಳೂರು ಮಿಲಾಗ್ರಿಸ್‍ನಿಂದ ಪ್ರತೀದಿನ ಅಪರಾಹ್ನ1.45 ಗಂಟೆಗೆ ಪ್ರಯಾಣ ಬೆಳೆಸಿ ಉಡುಪಿ, ಕುಂದಾಪುರ, ಭಟ್ಕಳ, ಬೆಳಗಾಂ ಮಾರ್ಗವಾಗಿ ಪುಣೆ, ಚೆಂಬೂರು, ಸಯಾನ್, ಅಂಧೇರಿ, ಬೋರಿವಿಲಿ, ದಹಿಸರ್ ಮಾರ್ಗವಾಗಿ ವಿೂರಾರೋಡ್ (ಸೀತಲ್‍ನಗರ್) ಸೇರಲಿದೆ. ಅಂತೆಯೇ ದಿನಾ ಮಧ್ಯಾಹ್ನ 12.15 ಗಂಟೆಗೆ ವಿೂರಾರೋಡ್‍ನಿಂದ (ಸೀತಲ್‍ನಗರ್) ಹೊರಟು ಅದೇ ಮಾರ್ಗವಾಗಿ ಮಂಗಳೂರು ಸೇರಲಿದೆ.

ನೂತನ ಬಸ್ಸುಗಳು ಇದೀಗಲೇ ಸೇವೆಯಲ್ಲಿ ಲಭ್ಯವಿದ್ದು ಅತ್ಯಾಧುನಿಕ ಈ ಬಸ್ಸ್‍ಗಳು ಎಂದಿನಂತೆಯೇ ಪ್ರಯಾಣಿಕರ ಸೇವೆಯಲ್ಲಿವೆ. ಕೆನರಾ ಪಿಂಟೊ ದೈನಂದಿನ ಸರ್ವಿಸ್‍ಗಳು ನಿಮ್ಮ ಸೇವೆಯಲ್ಲಿದ್ದು ಟಿಕೇಟು ಬುಕ್ಕಿಂಗ್‍ಗಾಗಿ ತಮ್ಮ ಸಮೀಪದ ಬಸ್ ಏಜೆಂಟರನ್ನು ಅಥವಾ ಮಂಗಳೂರು ಯಾ ಮುಂಬಯಿ ಇಲ್ಲಿನ ಕೆನರಾ ಪಿಂಟೊ ಕಛೇರಿಗಳನ್ನು ಸಂಪರ್ಕಿಸುವಂತೆ ಅಥವಾ WWW.CANARAPINTO.COM and www.eticketsfortravel.com ಇದಕ್ಕೆ ಲಾಗೀನ್ ಮಾಡಿ ತಮಗೆ ಅನುಕೂಲಕರವಾದ ಸೀಟುಗಳನ್ನು ಕಾಯ್ದಿರಿಸಿ ಸುಖಕರ ಪ್ರಯಾಣ ನಡೆಸುವಂತೆ ಕೆನರಾ ಪಿಂಟೊ ಸಂಸ್ಥೆಯ ಮಾಲೀಕ ಸುನೀಲ್ ಪಾಯ್ಸ್ ತಿಳಿಸಿದ್ದಾರೆ.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here