Saturday 10th, May 2025
canara news

ಡಿಕೆಎಸ್.ಸಿ ಯಂಬೂ ಘಟಕ ಮಹಾಸಭೆ

Published On : 08 Mar 2020   |  Reported By : Rons Bantwal


ಮುಂಬಯಿ (ಯಂಬೂ),ಮಾ.06: ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್‌ ಯಂಬೂ ಘಟಕ ವಾರ್ಷಿಕ ಮಹಾಸಭೆಯು ಯಂಬೂವಿನಲ್ಲಿ ನಡೆಯಿತು. ಯಂಬೂ ಘಟಕ ಅದ್ಯಕ್ಷರಾದ ರಝಾಕ್ ಹಾಜಿ ಬೆಳ್ತಂಗಡಿ ಸಭಿಧ್ಯಕ್ಷತೆ ವಹಿಸಿದ್ದರು.

ಡಿ.ಕೆ.ಎಸ್.ಸಿ ಸಿಲ್ವರ್ ಜುಬುಲಿ ಸಮಿತಿ ಅದ್ಯಕ್ಷರಾದ ಸಯ್ಯಿದ್ ಮುಹಮ್ಮದ್ ತಂಙಳ್ ಉಚ್ಚಿಲ ಉದ್ಘಾಟಿಸಿದರು. ಕಾರ್ಯದರ್ಶಿ ಹೈದರ್ ಮೂಡಿಗೆರೆ ವಾರ್ಷಿಕ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು. ಚುನಾವಣಾಧಿಕಾರಿಯಾಗಿ ಆಗಮಿಸಿದ ಮಕ್ಕಾ ವಲಯ ಕಾರ್ಯದರ್ಶಿ ಇಕ್ಬಾಲ್ ಹೈದ್ರೋಸ್ ಮೂಡಿಗೆರೆ ಹಳೆಯ ಸಮಿತಿಯನ್ನು ವಜಾಗೊಳಿಸಿ ನೂತನ ಸಮಿತಿಯನ್ನು ರಚಿಸಿದರು.

ನೂತನ ಸಮಿತಿ ಅಧ್ಯಕ್ಷರಾಗಿ ಹಾಜಿ ಅಬ್ದುಲ್‌ ರಝಾಕ್ ಬೆಳ್ತಂಗಡಿ, ಪ್ರಧಾನ ಕಾರ್ಯದರ್ಶಿಯಾಗಿ ಹೈದರ್ ಮೂಡಿಗೆರೆ, ಕೋಶಾಧಿಕಾರಿಯಾಗಿ ಇಕ್ಬಾಲ್ ಅರಳ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ಹಸನ್ ಶರೀಫ್ ಸೂರಿಂಜೆ, ಉಪಾಧ್ಯಕ್ಷರಾಗಿ ಸಲೀಂ ಭಟ್ಕಳ ಹಾಗೂ ಆರೀಫ್ ಕೋಡಿ, ಜೊತೆ ಕಾರ್ಯದರ್ಶಿಯಾಗಿ ತೌಸೀಫ್ ನಿಟ್ಟೆ, ಲೆಕ್ಕ ಪರಿಶೋಧಕರಾಗಿ ಮುಹಮ್ಮದ್ ಇಕ್ಬಾಲ್ ಅಲ್ ಫಲಾಹ್ ಕ್ರಷ್ಣಾಪುರ, ಸಂಚಾಲಕರಾಗಿ ಹುಸೈನ್ ಕಾಪು, ಅಹ್ಮದ್ ಭಟ್ಕಳ ಹಾಗೂ ಆರೀಫ್ ಕಿನ್ನಿಗೋಳಿ ಹಾಗೂ ಕಾರ್ಯಕಾರಿ
ಸಮಿತಿ ಸದಸ್ಯರಾಗಿ ಸಲಾಮ್ ಕೆ.ಸಿ ರೋಡ್, ಮುಸ್ತಫಾ ಕರಾಯ, ಅಶ್ರಫ್ ಬಂಟ್ವಾಳ, ಅನ್ವರ್ ಉಳ್ಳಾಲ, ಝಮೀರ್ ಕನ್ನಂಗಾರ್, ಮುಸ್ತಫಾ ಮೂಡಬಿದ್ರೆ, ನಝೀರ್ ಬೆಳ್ತಂಗಡಿ, ಮುಹಮ್ಮದ್ ಅಲಿ ಚಿಕ್ಕಮಗಳೂರು, ಆಬಿದ್ ಪಡುಬಿದ್ರಿ ಇವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಡಿ.ಕೆ.ಎಸ್.ಸಿ ಬೆಳ್ಳಿಹಬ್ಬದ ಪ್ರಯುಕ್ತ 313 ಸದಸ್ಯತ್ವ ಅಭಿಯಾನ ಹಾಗೂ ಡಿ.ಕೆ.ಎಸ್.ಸಿ ಮಕ್ಕಾ ವಲಯದ ಅಧೀನದಲ್ಲಿ ಜಿದ್ದಾದಲ್ಲಿ ನಡೆಯುವ "ಫ್ಯಾಮಿಲಿ ಮುಲಾಖಾತ್- 2020" ಆಹ್ವಾನ ಪತ್ರ ಬಿಡುಗಡೆಗೊಳಿಸಲಾಯಿತು. ಸಭೆಯಲ್ಲಿ ಡಿ.ಕೆ.ಎಸ್.ಸಿ ಮದೀನಾ ಮುನವ್ವರ ಘಟಕದ ಅಧ್ಯಕ್ಷರಾದ ಮನ್ಸೂರ್ ಉಚ್ಚಿಲ, ಮುಹಮ್ಮದ್ ಅಲಿ ಪಾಣೆಮಂಗಳೂರು, ಇಕ್ಬಾಲ್ ಕುಪ್ಪೆಪದವು ಹಾಗೂ ಜಿದ್ದಾ ಘಟಕದ ಪ್ರ. ಕಾರ್ಯದರ್ಶಿ ಅಮಾನುಲ್ಲಾ ವಾಮಂಜೂರು ಮುಂತಾದವರು ಉಪಸ್ಥಿತರಿದ್ದರು. ಅಬ್ದುಲ್ ರಝಾಕ್ ಹಾಜಿ ಸ್ವಾಗತಿಸಿ, ಇಕ್ಬಾಲ್ ಕುಪ್ಪೆಪದವು ಧನ್ಯವಾದಗೈದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here