Saturday 5th, July 2025
canara news

ನ್ಯೂ ಮಾರ್ಕ್ ಸ್ಪೋಟ್ರ್ಸ್ ಆಂಡ್ ಕಲ್ಚರಲ್ ಕ್ಲಬ್,ಕೊಂಕಣ್ಸ್ ಬೆಲ್ಸ್ ಮತ್ತು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಆಶ್ರಯದಲ್ಲಿ ದುಬೈಯಲ್ಲಿ ರಕ್ತದಾನ ಶಿಬಿರ.

Published On : 17 Mar 2020   |  Reported By : Rons Bantwal


ದುಬೈ: ಮಾರ್ಚ್ 6 : ನ್ಯೂ ಮಾರ್ಕ್ ಸ್ಪೋಟ್ರ್ಸ್ ಆಂಡ್ ಕಲ್ಚರಲ್ ಕ್ಲಬ್ ಮಂಗಳೂರು ಮತ್ತು ಕೊಂಕಣ್ಸ್ ಬೆಲ್ಸ್ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಜಂಟಿ ಆಶ್ರಯದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವು ದಿನಾಂಕ 06/03/2020 ನೇ ಶುಕ್ರವಾರದಂದು ಯುನೈಟೆಡ್ ಅರಬ್ ಎಮಿರೇಟ್ಸ್ ನ ದುಬೈಯ ಲತೀಫಾ ಬ್ಲಡ್ ಡೊನೇಷನ್ ಸೆಂಟರ್ ನಲ್ಲಿ ಯಶಸ್ವಿಯಾಗಿ ನಡೆಯಿತು. ರಕ್ತ ದಾನ ಶಿಬಿರದಲ್ಲಿ ಒಟ್ಟು 70 ಮಂದಿ ಭಾಗವಹಿಸಿ ಹೆಸರು ನೋಂದಾಯಿಸಿದ್ದರು. ಕಾರಣಾಂತರಗಳಿಂದ 50 ಮಂದಿಗೆ ಮಾತ್ರ ರಕ್ತದಾನ ಮಾಡಲು ಸಾಧ್ಯವಾಯಿತು. ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ದುಬೈಯ ಲತೀಫಾ ಬ್ಲಡ್ ಡೊನೇಷನ್ ಸೆಂಟರ್ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು.

ಶಿಬಿರದಲ್ಲಿ ನೊಯೆಲ್ ಡಿ ಅಲ್ಮೈಡಾ,ಬಾಲ ಸಾಲಿಯಾನ್,ಕೊಂಕಣ್ಸ್ ಬೆಲ್ಸ್ ಅಧ್ಯಕ್ಷರಾದ ನೆಲ್ಸನ್ ಪಿಂಟೋ,ಪ್ರಧಾನ ಕಾರ್ಯದರ್ಶಿ ರೀನಾ ಮರೀನಾ ಗಲ್ಬಾವೊ ಮತ್ತು ಸದಸ್ಯರು ಹಾಗೂ ನ್ಯೂ ಮಾರ್ಕ್ ಸ್ಪೋಟ್ರ್ಸ್ ಆಂಡ್ ಕಲ್ಚರಲ್ ಕ್ಲಬ್ ಸದಸ್ಯರಾದ ರೋಶನ್,ಅನಿಲ್,ರಾಕೇಶ್ ಶೆಟ್ಟಿ, ಪ್ರವೀಣ್,ಭರತ್,ಯಶ್ ಕರ್ಕೇರಾ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ನಿರ್ವಾಹಕರಾದ ಸಿರಾಜುದ್ದೀನ್ ಪರ್ಲಡ್ಕ,ಮೆಹತಾಬ್ ಕೈಕಂಬ,ಇಝ್ಝು ದ್ದೀನ್ ದೇರಳಕಟ್ಟೆ,ಫಾರೂಕ್ ದೇರಳಕಟ್ಟೆ ಉಪಸ್ಥಿತರಿದ್ದರು. ರಕ್ತದಾನ ಶಿಬಿರಕ್ಕೆ ಮೆಗಾ ಸ್ಪೀಡ್ ಕಾರ್ಗೋ ಸರ್ವಿಸ್ ಮಾಲಕರಾದ ವಾಲ್ಟರ್ ಪಿರೇರಾ,ಶ್ರೀಮತಿ ಲೆತೀಸಿಯಾ ಪಿರೇರಾ ಮತ್ತು ಸೋಲಿಡ್ ರೋಕ್ ಅಡ್ವರ್ಟೈಸಿಂಗ್ ಮಾಲಕರಾದ ಕ್ರಿಸ್ಟೋಫರ್ ಹಾಗೂ ಅನ್ಸಾರ್ ಬಾರ್ಕೂರು ಸಂಪೂರ್ಣ ಸಹಕಾರವನ್ನು ನೀಡಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here