Saturday 10th, May 2025
canara news

ಶ್ರೀರಾಮ ಮಂದಿರ ವಡಲಾ ; ಗುಡಿಪಾಡ್ವ-ರಾಮ ನವಮಿ ಸಂಭ್ರಮ ರದ್ದು

Published On : 21 Mar 2020   |  Reported By : Rons Bantwal


ಮಾ.25-ಎ.02 ತನಕ ಸಾರ್ವಜನಿಕವಾಗಿ ಭಕ್ತರಿಗೆ ಪ್ರವೇಶ ನಿಷೇಧ

ಮುಂಬಯಿ, ಮಾ.20: ಕೊರೊನಾ ಮಮಾರಿ ಕರಿನೆರಳು ಜಗದ್ವ್ಯಾಪಿ ಪಸರಿಸಿದ್ದು ರಾಷ್ಟ್ರದಲ್ಲೂ ತಾಂಡವವಾಡುತ್ತಿರುವ ಹಿನ್ನಲೆಯಲ್ಲಿ ಮುಂಜಾಗÀರುಕಾ ಕ್ರಮವನ್ನಾಗಿಸಿ ಮಹಾರಾಷ್ಟ್ರದ ಅಯೋಧ್ಯನಗರ ಪ್ರಸಿದ್ಧಿಯ ಮುಂಬಯಿ ವಡಲಾ ಇಲ್ಲಿನ ಶ್ರೀರಾಮ ಮಂದಿರದಲ್ಲಿ (ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜಿವೋತ್ತಮ ಮಠ) ಮಾ.25ರಿಂದ ಎ.02 ತನಕ ಸಾರ್ವಜನಿಕವಾಗಿ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿದೆ.

ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜಿವೋತ್ತಮ ಮಠದ ಮಠಾಧೀಶ ಶ್ರೀಮದ್ ವಿದ್ಯಾಧಿರಾಜತೀರ್ಥ ಸ್ವಾಮೀಜಿ ಅವರ ಆದೇಶದಂತೆ ಮತ್ತು ಮಹಾರಾಷ್ಟ್ರ ಸರಕಾರದ ಆಜ್ಞೆಯಾನುಸಾರ ಮುನ್ನೆಚ್ಚರಿಕಾ ಕ್ರಮವಾಗಿ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿದೆ.

ಅದಲ್ಲದೆ ಮಾ.24ರಂದು ಜರುಗುವ ಗುಡಿಪಾಡ್ವ, ಎ.02ರಂದು ನೆರವೇರಲಿರುವ ಶ್ರೀ ರಾಮ ನವಮಿ ಸಂಭ್ರಮವನ್ನೂ ರದ್ದುಗೊಳಿಸಲಾಗಿದೆ. ಆದ್ದರಿಂದ ಭಕ್ತಾಭಿಮಾನಿಗಳು ಸಹಕರಿಸುವಂತೆ ಪರ್ತಗಾಳಿ ಮಠ ಮುಂಬಯಿ ಸಮಿತಿ ಕಾರ್ಯಾಧ್ಯಕ್ಷ ಮುಕುಂದ್ ಕಾಮತ್, ಕಾರ್ಯದರ್ಶಿ ಉಲ್ಲಾಸ್ ಕಾಮತ್ ಈ ಮೂಲಕ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here