ಮುಂಬಯಿ, ಎ.06: ಕಾಷ್ಠಶಿಲ್ಪಿ, ಹವ್ಯಾಸಿ ಮದ್ದಳೆವಾದಕರಾಗಿ ಬೃಹನ್ಮುಂಯಿನಲ್ಲಿ ಹೆಸರಾಗಿದ್ದ ಉಡುಪಿ ಮಾರ್ಪಳ್ಳಿ ಮೂಲತ್‍ಅಃ ದಿ| ಮಂಜುನಾಥ್ ಆಚಾರ್ಯರ ಪತ್ನಿ, ಸಾಂತಾಕ್ರೂಸ್ ಪೂರ್ವದ ವಕೋಲ ಬ್ರಿಜ್ ಸನಿಹದ ನಿವಾಸಿ ಕಲ್ಯಾಣಿ ಎಂ.ಆಚಾರ್ಯ (86.) ಕಳೆದ ಭಾನುವಾರ ಸ್ವಗೃಹದಲ್ಲಿ ನಿಧನರಾದರು.
ಇಂಟೀರಿಯರ್ ಡೆಕೋರೇಟರ್ ಶ್ರೀನಿವಾಸ್ ಎಂ.ಆಚಾರ್ಯ ಸಹಿತ ನಾಲ್ವರು ಪುತ್ರರು ಹಾಗೂ ಓರ್ವ ಪುತ್ರಿ, (ಅಳಿಯ ಪತ್ರಕರ್ತ ಧನಂಜಯ ಮೂಡಬಿದರೆ) ಮತ್ತು ಬಂಧುಬಳಗ ಅಗಲಿದ್ದಾರೆ.