Saturday 10th, May 2025
canara news

ಕೊರೊನಾ ಕಾಯಿಲೆಗೆ ರೋನಾಲ್ಡ್ ಡಿಮೆಲ್ಲೋ ಕಾರ್ಕಳ ವಿಧಿವಶ

Published On : 07 Apr 2020   |  Reported By : Rons Bantwal


ಮುಂಬಯಿ, ಎ.05: ದ ತಾಜ್ ಮುಂಬಯಿ ಉದ್ಯೋಗಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ಕಾರ್ಕಳ ತಾಲೂಕು ಕೆಮ್ಮಣ್ಣುಗುಂಡಿ (ರಾಮಸಮುದ್ರ್ರ) ಮೂಲತಃ ರೋನಾಲ್ಡ್ ಡಿಮೆಲ್ಲೋ (60.) ಕಳೆದ ಭಾನುವಾರ ಉಪನಗರ ನಲ್ಲಸೋಫರಾ ಪಶ್ಚಿಮದಲ್ಲಿನ ರಿದ್ಧಿ ವಿನಾಯಕ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕು ಪೀಡಿತರಾಗಿ ವಿಧಿವಶರಾದರು.

ಬೃಹನ್ಮುಂಬಯಿ ಕೊಲಬಾ ಇಲ್ಲಿನ ಪ್ರತಿಷ್ಠಿತ ತಾರಾ ಹೊಟೇಲು ತಾಜ್‍ಮಹಲ್ ಪ್ಯಾಲೇಸ್ ಇಲ್ಲಿ ಸುಮಾರು 40 ವರ್ಷಗಳಿಂದ ಕ್ಯಾಪ್ಟನ್ ಆಗಿ ಶ್ರಮಿಸುತ್ತಿದ್ದ ರೋನಾಲ್ಡ್ ಕಳೆದ ಮಾ.24ರಂದು ಅರ್ವತ್ತು ವರ್ಷಗಳನ್ನು ಪೂರೈಸಿದ್ದರು. ಇದೇ ಎಪ್ರಿಲ್ ಕೊನೆಯಲ್ಲಿ ವೃತ್ತಿ ನಿವೃತ್ತರಾಗಲಿದ್ದು ಇನ್ನು ಕೇವಲ 26 ದಿನಗಳ ಸೇವಾವಧಿಯಲ್ಲಿದ್ದರು. ಕೆಲವು ವರ್ಷಗಳಿಂದ ಕಿಡ್ನಿ ಕಾಯಿಲೆಗಾಗಿ ಡಯಾಲಿಸ್‍ಗೆ ಒಳಗಾಗಿದ್ದ ರೋನಾಲ್ಡ್ ಕಿಡ್ನಿ ಸಂಬಂಧಿ ವಿಚಾರವಾಗಿ ಬಾಂಬೇ ಹಾಸ್ಪಿಟಲ್‍ನಲ್ಲಿ ಚಿಕಿತ್ಸೆ ಪಡೆಯುತ್ತಿ ದ್ದರು. ಆದರೆ ಲಾಕ್‍ಡೌನ್‍ನಿಂದಾಗಿ ಕಳೆದ ವಾರ ಡಯಾಲಿಸ್‍ಗಾಗಿ ಇಲ್ಲಿನ ರಿದ್ಧಿ ವಿನಾಯಕ ಆಸ್ಪತ್ರೆಗೆ ತೆರಳಿದ್ದು, ಈ ಮಧ್ಯೆ ಕೊರೊನಾ ಸೋಂಕು ಕಂಡು ಬಂದಿದ್ದು ತತ್‍ಕ್ಷಣ ಐಸೋಲೇಟ್ ನಡೆಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಭಾನುವಾರ ರಾತ್ರಿಯೊಳಗೆ ಅಧಿಕಾರಿಗಳು ಅಂತ್ಯಕ್ರಿಯೆ ನೆರವೇರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೋಡೆಲ್ ಬ್ಯಾಂಕ್‍ನ ನಿರ್ದೇಶಕಿ, ಕಾರ್ಕಳ ಅತ್ತೂರು ಮೂಲತಃ ಮರಿಟಾ ಡಿಮೆಲ್ಲೋ (ಪತ್ನಿ), ಇಬ್ಬರು ಸುಪುತ್ರರನ್ನು ರೋನಾಲ್ಡ್ ಅಗಲಿದ್ದಾರೆ. ಪುತ್ರರಲ್ಲಿ ಹಿರಿಯವನು ಆಸ್ಟ್ರೇಲಿಯಾದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದು ಕಿರಿಯ ಪುತ್ರ (ಮನೆಯಲ್ಲಿ) ಜೊತೆಯಲ್ಲಿದ್ದು ಪತ್ನಿ ರೋನಾಲ್ಡ್ ಉಪಚಾರ ಕ್ಕಾಗಿ ಆಸ್ಪತ್ರೆಯಲ್ಲಿದ್ದರು. ಶಾಸನದ ಆದೇಶದಂತೆ ಇದೀಗ ಸ್ಥಳಿಯ ಉನ್ನತಾಧಿಕಾರಿಗಳು ಮತ್ತು ವೈದ್ಯಾಧಿಕಾರಿಗಳು ಇವರಿಬ್ಬರನ್ನು ಕ್ವಾರಂಟೈನ್ ಹೋಮ್ ನಡೆಸಲಿದ್ದಾರೆ. ಕಿರಿಯ ಪುತ್ರ ಮನೆಯಲ್ಲಿ ಓರ್ವನೇ ಇದ್ದ ಕಾರಣ ತನ್ನನ್ನೂ ಸ್ವನಿವಾಸದಲ್ಲಿ ಕ್ವಾರಂಟೈನ್ ನಡೆಸುವಂತೆ ಮರಿಟಾ ಡಿಮೆಲ್ಲೋ ಮನವಿ ಮಾಡಿರುವುದಾಗಿ ತಿಳಿದಿದೆ.

ವಸಾಯಿ ಕೊಂಕಣಿ ಅಸೋಸಿಯೇಶನ್ ಸಂಸ್ಥೆಯ ಸದಸ್ಯರಾಗಿದ್ದ ರೋನಾಲ್ಡ್ ಓರ್ವ ಸರಳ ಸಜ್ಜನಿಕಾ ವ್ಯಕ್ತಿತ್ವವುಳ್ಳವರಾಗಿದ್ದು ತೆರೆಮರೆಯ ಕೊಡುಗೈದಾನಿ, ಸಮಾಜ ಸೇವಕರೆಣಿಸಿ ಜನಾನುರಾಗಿದ್ದರು. ರೋನಾಲ್ಡ್ ನಿಧನಕ್ಕೆ ಮೊಡೇಲ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬ್ಲ್ಯು.ಡಿ'ಸೋಜಾ, ಸಂಸ್ಥಾಪಕಾಧ್ಯಕ್ಷ ಜೋನ್ ಡಿಸಿಲ್ವಾ ಕಾರ್ಕಳ, ನಿರ್ದೇಶಕ ಮಂಡಳಿ, ವಸಾಯಿ ಕೊಂಕಣಿ ಅಸೋಸಿಯೇಶನ್‍ನ ಪದಾಧಿಕಾರಿಗಳು ತೀವ್ರ ಸಂತಾಪ ವ್ಯಕ್ತ ಪಡಿಸಿ ಬಾಷ್ಪಾಂಜಲಿ ಕೋರಿ ಮೃತರ ಕುಟುಂಬಕ್ಕೆ ಸಾಂತ್ವಾನ ತಿಳಿಸಿದ್ದಾರೆ.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here