Saturday 10th, May 2025
canara news

ಲಾಕ್‍ಡೌನ್‍ಗೆ ಮಣಿದ ಜನತೆಗೆ ಪಡಿತರ-ಅಗತ್ಯ ವಸ್ತುಗಳನ್ನು ವಿತರಿಸಿದ ಬಂಟರ ಸಂಘ ಅಂಧೇರಿ ಬಾಂದ್ರ ಪ್ರಾದೇಶಿಕ ಸಮಿತಿ-ಡಾ| ಆರ್.ಕೆ ಶೆಟ್ಟಿ

Published On : 15 Apr 2020   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಎ.15: ದೇಶದಾದ್ಯಂತ ಪಸರಿಸಿರುವ ಕೋವಿಡ್-19 ಸೋಂಕಿನ ಅರ್ಭಟವು ರಾಷ್ಟ್ರದ ಆಥಿರ್üಕ ರಾಜಧಾನಿ ಬೃಹನ್ಮುಂಬಯಿನಲ್ಲೂ ಭಾರೀ ಪ್ರಮಾಣದಲ್ಲಿ ತಾಂಡವವಾಡುತ್ತಿದ್ದು ಕೊರೊನಾ ಭಾದೆಯಿಂದ ಲಾಕ್‍ಡೌನ್‍ಗೆ ಮಣಿದÀ ಜನತೆ ಅತೀವವಾಗಿ ಸಂಕಷ್ಟಗಳನ್ನು ಎದುರಿಸುವಂತಾಗಿದೆÉ. ಆ ನಿಟ್ಟಿನಲ್ಲಿ ಸ್ಥಾನೀಯ ಜನತೆಗೆ ಬಂಟರ ಸಂಘ ಮುಂಬಯಿ ಇದರ ಅಂಧೇರಿ ಬಾಂದ್ರ ಪ್ರಾದೇಶಿಕ ಸಮಿತಿಯು ಅಂಧೇರಿ ಬಾಂದ್ರ ಪ್ರಾದೇಶಿಕ ಸಮಿತಿ ಅಧ್ಯಕ್ಷ ಡಾ| ಆರ್.ಕೆ ಶೆಟ್ಟಿ ಅವರ ದಕ್ಷ ಸಾರಥ್ಯ ಮತ್ತು ಮಾರ್ಗದರ್ಶನದಲ್ಲಿ ನೆರವಿನ ಹಸ್ತ ಚಾಚುತ್ತಾ ಹಗಲಿರುಳು ಶ್ರಮಿಸುತ್ತಿದೆ.

ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ ಮತ್ತು ಪದಾಧಿಕಾರಿಗಳ ಸಹಯೋದಲ್ಲಿ ಸಮಿತಿಯ ದತ್ತು ಸ್ವೀಕೃತ ಸುಮಾರು 28 ಕುಟುಂಬಗಳಿಗೆ ಅಕ್ಕಿ, ಗೋದಿಹಿಟ್ಟು, ಸಕ್ಕರೆ, ಚಹಾಹುಡಿ, ಬಿಸ್ಕತ್ತು, ಅಡುಗೆ ಎಣ್ಣೆ ದವಸಧಾನ್ಯ, ಆಲೂಗಡ್ಡೆ, ನೀರುಳ್ಳಿ ಇತ್ಯಾದಿಗಳೊಂದಿಗೆ ಒಂದು ತಿಂಗಳ ಸಂಪೂರ್ಣ ಪಡಿತರ ಮತ್ತು ದೈನಂದಿನ ದೈನಂದಿನ ಅತ್ಯವಶ್ಯಕ ವಸ್ತುಗಳ ಜೊತೆಗೆ ಮಾಸ್ಕ್, ಸ್ಯಾನಿಟೈಜ ್ಹರ್ ಇತ್ಯಾದಿಗಳನ್ನು ನೀಡಿತು. ಅಲ್ಲದೆ ಸ್ಥಾನೀಯ ಅನೇಕ ಬಡ ಕುಟುಂಬಗಳಿಗೂ ಪಡಿತರ ಮತ್ತಿತರ ಅಗತ್ಯ ಸಾಮಾನುಗಳನ್ನು ಮನೆಮನೆಗೆ ತಲುಪಿಸಿ ನೆರವಿನ ಸಹಾಯಸ್ತ ನೀಡಿತು.

ಇಂತಹ ಸಂಧಿಗ್ಧ ಸಮಯದಲ್ಲಿ ಯಾರೂ ಹಸಿವು ತಡೆದು ಬಾಳುವುದು ಅನಿವಾರ್ಯವಾಗಬಾರದು. ಈ ಕಷ್ಟಕರ ಕಾಲಘಟ್ಟದಲ್ಲಿ ಜಾತಿಮತ ಧರ್ಮ, ಪಕ್ಷಗಳನ್ನು ಮರೆತು ಒಬ್ಬರಿಗೊಬ್ಬರು ನೆರವು ಮಾಡಿ ಪುಣ್ಯಕ್ಕೆ ಭಾನಜರಾಗಬೇಕು. ಸೇವಾ ಮನೋಭಾವದಿಂದ ಮತ್ತೆ ಸಾಮರಸ್ಯದ ಬದುಕು ಸಾಧ್ಯವಾಗಿ ಸಮಗ್ರ ಭಾರತೀಯ ರ ಸಾಂಘಿಕ ಜೀವನಕ್ಕೆ ಮಣಿದು ಕೊರೊನಾ ಸೋಂಕು ಮರೆಯಾಗುವಲ್ಲಿ ಪ್ರತೀಯೊಬ್ಬ ಭಾರತೀಯರು ಶ್ರಮಿಸಬೇಕು ಎಂದು ಬಂಟರ ಸಂಘ ಅಂಧೇರಿ ಬಾಂದ್ರ ಪ್ರಾದೇಶಿಕ ಅಧ್ಯಕ್ಷ ಡಾ| ಆರ್.ಕೆ ಶೆಟ್ಟಿ ಸಹಪಾಟಿಗಳ ಸೇವಾ ಮನೋಭಾವಕ್ಕೆ ಪ್ರೇರೆಪಿಸಿದರು.

ಅಂಧೇರಿ ಪೂರ್ವದ ಸಬ್‍ವೇ, ಅರೇಮಿಲ್ಕ್ ಕಾಲೋನಿ ಅಲ್ಲಿನ ದೇವಸ್ಥಾನವೊಂದರಲ್ಲಿ, ಮರೋಲ್ ಎಂಐಡಿಸಿ ಈ ಮೂರು ಠಿಕಾಣಿಗಳಲ್ಲಿ ನಾವು ದೈನಂದಿನವಾಗಿ 2000ಕ್ಕೂ ಅಧಿಕ ಆಹಾರ ಪೆÇಟ್ಟಣಗಳನ್ನು ವಿತರಿಸಿ ಸೇವೆಯಲ್ಲಿದ್ದೇವೆ. ಕನಿಷ್ಟ ಆಹಾರ ಸಿಗದೆ ಅಕ್ಷರಶಃ ತತ್ತರಿಸಿಕೊಂಡ ಜನತೆಗೆ, ಕೂಲಿ ಕಾರ್ಮಿಕರಿಗೆ, ಅನಾಥರಿಗೆ, ಭಿಕ್ಷುಕರು ಮತ್ತು ನಿರ್ಗತಿಕರಿಗೂ ಒಪೆÇ್ಪತ್ತಿನ ಊಟ, ಫಲಹಾರದ ವ್ಯವಸ್ಥೆ ಅಂಧೇರಿ ಬಾಂದ್ರ ಪ್ರಾದೇಶಿಕ ಸಮಿತಿ ಮಾಡಿದೆ. ಆದರೆ ಯಾರೂ ಸಮೂಹವಾಗಿರದೆ ಸಾಮಾಜಿಕ ಅಂತರ ಕಾಪಾಡಿಕೊಂಡಿ ಫಲಾನುಭವ ಪಡೆಯಬೇಕು. ಸರಕಾರದ ಆಜ್ನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸೇವೆಯಲ್ಲಿನ ಪೆÇೀಲಿಸು, ಎಲ್ಲಾ ಅಧಿಕಾರಿಗಳಿಗೆ ಸಹಕರಿಸಬೇಕು ಎಂದೂ ಜನತೆಗೆ ದಿಶಾ ಕಾರ್ಯಕ್ರಮ ಮೂಲಕ ಉತ್ತಮ ಕೆಲಸ ಮಾಡಿ ಸಮಗ್ರ ಸಮಾಜಕ್ಕೆ ಆದರ್ಶಪ್ರಾಯರಾದ ಆರ್.ಕೆ ಶೆಟ್ಟಿ ಮನವಿ ಮಾಡಿ ಎಲ್ಲರೂ ಕೊರೋನಾ ವೈರಸ್ ತಡೆಗಟ್ಟುವಿಕೆಯ ಕೈಂಕರ್ಯದಲ್ಲಿ ತಮ್ಮಿಂದಾದ ಪ್ರಯತ್ನ ಮಾಡಬೇಕೆಂದರು.

ಪ್ರಾದೇಶಿಕ ಸಮಿತಿಯ ಉಪ ಕಾರ್ಯಾಧ್ಯಕ್ಷ ನ್ಯಾಯವಾದಿ ಆರ್.ಜಿ ಶೆಟ್ಟಿ, ಗೌರವ ಕಾರ್ಯದರ್ಶಿ ರವಿ ಆರ್.ಶೆಟ್ಟಿ, ಜೊತೆ ಕಾರ್ಯದರ್ಶಿ ರಮೇಶ್ ಡಿ.ರೈ ಕಯ್ಯಾರ್, ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗಧ್ಯಕ್ಷೆ ವನಿತಾ ವೈ. ನೋಂಡಾ, ಪ್ರಾದೇಶಿಕ ಸಮಿತಿಯ ಸಮಾಜ ಕಲ್ಯಾಣ ಸಮಿತಿಯ ಸಮಾಜ ಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷ ಪ್ರಭಾಕರ ಶೆಟ್ಟಿ ನಾನಯರ ಗರಡಿ, ನಿಧಿ ಸಂಗ್ರಹಣಾ ಸಮಿತಿ ಕಾರ್ಯಾಧ್ಯಕ್ಷ ಯಶವಂತ ಶೆಟ್ಟಿ, ಸದಸ್ಯತ್ವ ಸಮಿತಿ ಕಾರ್ಯಾಧ್ಯಕ್ಷ ಲಕ್ಷ್ಮಣ ಶೆಟ್ಟಿ ಮತ್ತಿತರ ಪದಾಧಿಕಾರಿಗಳು, ಸದಸ್ಯರನೇಕರು ಹಾಜರಾಗಿ ಸೇವೆಯಲ್ಲಿ ನಿರತರಾಗಿದ್ದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here