Saturday 10th, May 2025
canara news

ಭಾರತ್ ಬ್ಯಾಂಕ್‍ನ ಉಪ ಪ್ರಬಂಧಕ ರೋಹಿತಶ್ವ ಆರ್.ಸುವರ್ಣ ವಿಧಿವಶ

Published On : 23 Apr 2020   |  Reported By : Rons Bantwal


ಮುಂಬಯಿ, ಎ.23: ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್‍ನ ಉದ್ಯೋಗಿ, ಭಿವಂಡಿ (ಅಂಜುರ್‍ಪಾಟ) ಶಾಖೆಯ ಉಪ ಪ್ರಬಂಧಕ ರೋಹಿತಶ್ವ ಆರ್.ಸುವರ್ಣ (56.) ಇಂದಿಲ್ಲಿ ಗುರುವಾರ ಪೂರ್ವಾಹ್ನ ತೀವ್ರ ಹೃದಯಾಘಾತದಿಂದ ವಿಧಿವಶರಾದರು.

ಶಾಖೆಗೆ ಆಗಮಿಸಿ ಕರ್ತವ್ಯದಲ್ಲಿದ್ದಂತೆಯೇ ತೀವ್ರ ಎದೆನೋವು ಕಾಣಿಸಿಕೊಂಡು ಅಸ್ವಸ್ಥರಾದ ರೋಹಿತಶ್ವ ಅವರನ್ನು ಸಹೋದ್ಯೋಗಿಗಳು ತತ್‍ಕ್ಷಣವೇ ಸ್ಥಳಿಯ ಕಾಶೀನಾಥ್ ಪಾಟೀಲ್ ಆಸ್ಪತ್ರೆಗೆ ಸಾಗಿಸಿದ್ದು ಅಲ್ಲೇ ಕೊನೆಯುಸಿರೆಳೆದರು ಎಂದು ಮೂಲಗಳು ತಿಳಿಸಿವೆ.

ಉಡುಪಿ ಜಿಲ್ಲೆಯ ಪಲಿಮಾರು ಮೂಲತಃ ರೋಹಿತಶ್ವ ಅವರು ಹೊೈಗೆ ಬಿಲ್ಲವ ಸಂಘ ಪಲಿಮಾರ್, ಹೊೈಗೆ ಫ್ರೆಂಡ್ಸ್ ಪಲಿಮಾರ್, ಸಾರ್ವಜನಿಕ ಗಣೆಶೋತ್ಸವ ಸಮಿತಿ ಹೊೈಗೆ ಇದರ ಸ್ಥಾಪಕ ಸದಸ್ಯ, ಕೊಡುಗೈದಾನಿಯಾಗಿದ್ದು ಜನಾನುರಾಗಿದ್ದರು. ಮೃತರು ಪತ್ನಿ ಶ್ಯಾಮಲಾ ಆರ್.ಸುವರ್ಣ, ಸುಪುತ್ರ ರುಶಲ್ ಆರ್.ಸುವರ್ಣ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ತೆರೆಯ ಮರೆಯಲ್ಲೇ ಸಮಾಜ ಸೇವಕರಾಗಿ ಶ್ರಮಿಸಿದ್ದ ರೋಹಿತಶ್ವ ಸದ್ಯ ಡೊಂಬಿವಿಲಿಯಲ್ಲಿ ವಾಸವಾಗಿದ್ದರು.

ರೋಹಿತಶ್ವ ಆರ್.ಸುವರ್ಣ ನಿಧನಕ್ಕೆ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ, ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಎಸ್.ಶಾಂತಿ ಮತ್ತು ಸರ್ವ ಪದಾಧಿಕಾರಿಗಳು, ಭಾರತ್ ಬ್ಯಾಂಕ್‍ನ ಕಾರ್ಯಧ್ಯಕ್ಷ ಜಯ ಸಿ.ಸುವರ್ಣ, ಉಪಕಾರ್ಯಾಧ್ಯಕ್ಷೆ ನ್ಯಾಯವಾದಿ ರೋಹಿಣಿ ಜೆ.ಸಾಲ್ಯಾನ್, ನಿರ್ದೇಶಕರಾದ ವಾಸುದೇವ ಆರ್.ಕೋಟ್ಯಾನ್, ಎಲ್.ವಿ ಅವಿೂನ್, ಎನ್.ಟಿ ಪೂಜಾರಿ, ಗಂಗಾಧರ್ ಜೆ.ಪೂಜಾರಿ, ಭಾಸ್ಕರ್ ಎಂ.ಸಾಲ್ಯಾನ್ ಮತ್ತು ಸರ್ವ ನಿರ್ದೇಶಕರು, ನಿಕಟಪೂರ್ವ ಆಡಳಿತ ನಿರ್ದೇಶಕ ಸಿ.ಆರ್ ಮೂಲ್ಕಿ, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ, ಎಂಡಿ ವಿದ್ಯಾನಂದ ಎಸ್.ಕರ್ಕೇರಾ ಮತ್ತು ಸರ್ವ ಉನ್ನತಾಧಿಕಾರಿಗಳು, ಭಾರತ್ ಬ್ಯಾಂಕ್ ಆಫೀಸರ್ಸ್ ಅಸೋಸಿಯೇಶನ್, ಭಾರತ್ ಬ್ಯಾಂಕ್ ಎಂಪ್ಲಾಯಿಸ್ ಯೂನಿಯನ್ ಮತ್ತು ಭಾರತ್ ಬ್ಯಾಂಕ್ ಸ್ಟಾಫ್ ವೆಲ್ಫೇರ್ ಕ್ಲಬ್‍ನ ಪದಾಧಿಕಾರಿಗಳು, ಸರ್ವ ಸದಸ್ಯರು ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here