Saturday 5th, July 2025
canara news

ಶೇಖರ್ ಅವಿೂನ್ ಜೋಕಟ್ಟೆ ನಿಧನ

Published On : 25 Apr 2020   |  Reported By : Rons Bantwal


ಮುಂಬಯಿ, ಎ.25: ಮಂಗಳೂರು ಬಜ್ಪೆ ಜೋಕಟ್ಟೆ ಇಲ್ಲಿನ ನಾಮಾಂಕಿತ ಸಮಾಜ ಸೇವಕ, ಕೊಡುಗೈದಾನಿ, ಉದ್ಯಮಿ, ಪಿಡಬ್ಲ್ಯುಡಿ ಗುತ್ತಿಗೆದಾರ, ಮಲಕಾರು ಇಟರ್‍ಲಾಕ್ ಸಿಸ್ಟಂ ಸಂಸ್ಥೆಯ ಮಾಲೀಕ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೇಸ್ (ಐ) ಪಕ್ಷದ ಮಾಜಿ ಕಾರ್ಯದರ್ಶಿ ಶೇಖರ್ ಅವಿೂನ್ (72.) ತೀವ್ರ ಹೃದಯಾಘಾತದಿ ಂದ ಇಂದಿಲ್ಲಿ ಶನಿವಾರ (ಎ.25) ಬೆಳಿಗ್ಗೆ ಜೋಕಟ್ಟೆಯಲ್ಲಿನ ಸ್ವನಿವಾಸದಲ್ಲಿ ವಿಧಿವಶರಾಗಿದ್ದಾರೆ.

ಶ್ರೀ ವಿಜಯ ವಿಠಲ ಭಜನಾ ಮಂದಿರ ಜೋಕಟ್ಟೆ ಇದರ ಮಾಜಿ ಅಧ್ಯಕ್ಷ, ಗೌರವ ಸಲಹಾಗಾರ, ಬಜ್ಪೆ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ, ಪೆÇರ್ಕೋಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ, ಹಿಂದು ರುದ್ರಭೂಮಿ ಕಳವಾರು ಜೋಕಟ್ಟೆ ಇದರ ಸ್ಥಾಪಕ ಸದಸ್ಯ, ತೋಕುರು ಕೋರ್ದಬ್ಬು ಸಮಿತಿ ಸದಸ್ಯ, ಪೇಜಾವರ ಬಿಲ್ಲವ ಸಂಘ ಬಜ್ಪೆ ಕರಂಬಾರು, ಬಜ್ಪೆ ಬಿಲ್ಲವ ಸಂಘ (ರಿ.), ಶ್ರೀ ಸ್ವಯಂ ಭೂಉಮಾಮಹೇಶ್ವರಿ ದೇವಸ್ಥಾನ ಇತಾದಿಗಳ ಸಕ್ರೀಯ ಸದಸ್ಯರಾಗಿದ್ದು ಹತ್ತುಹಲವಾರು ಸಂಸ್ಥೆಗಳು ಹಿಗೇ ಹಲವಾರು ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದು ಸಮಾಜಮುಖಿ ಸೇವೆಗಳಲ್ಲಿ ತೊಡಗಿಸಿ ಕೊಂಡು ಜನಾನುರಾಗಿದ್ದರು.

ಮೃತರು ಪತ್ನಿ ಚಂದ್ರಾವತಿ ಶೇಖರ್, ಎರಡು ಗಂಡು, ಒಂದು ಹೆಣ್ಣು ಸೇರಿದಂತೆ ಅಪಾರ ಬಂಧು-ಬಳಗ ಅಗಲಿದ್ದಾರೆ. ಶೇಖರ್ ನಿಧನಕ್ಕೆ ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ, ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಗೌರವಾಧ್ಯಕ್ಷರೂ ಮತ್ತು ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ, ಹಿರಿಯ ಉದ್ಯಮಿ ಕೆ.ಭೋಜರಾಜ್ (ಕುಳಾಯಿ) ಥಾಣೆ, ಕೆ.ನಾರಾಯಣ್ ಕುಳಾಯಿ, ಬಜ್ಪೆ ದೊಡ್ಡಿಕಟ್ಟೆ ಶ್ರೀ ಸ್ವಯಂ ಭೂಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರÀ ಎಲ್.ವಿ ಅವಿೂನ್, ಬಜ್ಪೆ ಬಿಲ್ಲವ ಸಂಘದ ಅಧ್ಯಕ್ಷ ವಸಂತ ಬಂಗೇರ, ಭಾರತ್ ಬ್ಯಾಂಕ್‍ನ ನಿರ್ದೇಶಕ ಪುರುಷೋತ್ತಮ ಎಸ್.ಕೋಟ್ಯಾನ್ ಮತ್ತಿತರ ಗಣ್ಯರು ತೀವ್ರವಾಗಿ ಸಂತಾಪ ವ್ಯಕ್ತ ಪಡಿಸಿ ಬಾಷ್ಪಾಂಜಲಿ ಅರ್ಪಿಸಿ ಶೇಖರ್ ಕುಟುಂಬಕ್ಕೆ ಸಾಂತ್ವನ ತಿಳಿಸಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here