Saturday 10th, May 2025
canara news

ಮುಂಬಯಿ ಕನ್ನಡ ಸಂಘ ಇದರ ಮಹಿಳಾ ವಿಭಾಗಧ್ಯಕ್ಷೆ ಡಾ| ರಜನಿ ವಿ.ಪೈ ಅವರಿಂದ ಪಡಿತರ ವಿತರಣೆ

Published On : 27 Apr 2020   |  Reported By : Rons Bantwal


ಮುಂಬಯಿ,ಎ.15: ಮುಂಬಯಿ ಉಪನಗರದ ಮುಲುಂಡ್ ಪ್ರದೇಶದಲ್ಲಿ ನೆಲೆಸಿ ರುವ ಸ್ಥಾನೀಯ ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಸದಾ ಶ್ರಮಿಸುತ್ತಿರುವ ಬಡ ಮತ್ತು ದಲಿತರ ಸೇವೆಯಲ್ಲಿ ತೊಡಗಿಸಿಕೊಂಡು ಹಲವಾರು ಸಮಾಜಮುಖಿ ಕಾಯಕಗÀಳಲ್ಲಿ ತೊಡಗಿಸಿ ಕೊಂಡಿರುವ ಹೆಸರಾಂತ ಸಮಾಜ ಸೇವಕಿ ಡಾ| ರಜನಿ ವಿ. ಪೈ ಬಾರೀ ಪ್ರಮಾಣದ ಪಡಿತರ, ದೈನಂದಿನ ಅತ್ಯವಶ್ಯಕ ವಸ್ತುಗಳನ್ನು ವಿತರಿಸಿ ಮಾನವೀಯತೆ ಮೆರೆಯುತ್ತಿದ್ದಾರೆ.

ಅಂಧೇರಿ ಪೂರ್ವದಲ್ಲಿನ ಕ್ಯಾನ್ಸರ್ ಪೀಡಿತ ಮಹಿಳೆಯೋರ್ವರಿಗೂ ಕಳೆದ ವಾರ ಆರೋಗ್ಯನಿಧಿಯನ್ನು ಒದಗಿಸಿ ಶಸ್ತ್ರಚಿಕಿತ್ಸೆಗೆ ಸಹಾಯಸ್ತ ನೀಡಿದ್ದು, ವಿಶೇಷವಾಗಿ ಚಾಳ್, ಕೊಳಚೆಪ್ರದೇಶಗಳಿಗೆ ಭೇಟಿ ನೀಡಿ ಅರ್ಹರನ್ನು ಕಂಡಿಡಿದು ನೆರವನ್ನು ನೀಡುತ್ತಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ಇಲ್ಲಿನ ಸಿದ್ಧಿ ಮೂಲತಃ ರಜನಿ ವಿನಾಯಕ ಪೈ ಹಲವಾರು ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸಮಾಜ ಸೇವೆ ಮೂಲಕ ಜನಾನುರೆಣಿಸಿದ್ದು, ಮಹಾನಗರದ ಹಿರಿಯ ಕನ್ನಡ ಸಂಸ್ಥೆಯಾದ ಮುಂಬಯಿ ಕನ್ನಡ ಸಂಘ (ಮಾಟುಂಗ) ಇದರ ಮಹಿಳಾ ವಿಭಾಗಧ್ಯಕ್ಷೆ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಮಾಜ ಸೇವೆಗಾಗಿ ಗೌರವ ಡಾಕ್ಟರೇಟ್, ಕರ್ನಾಟಕ ವಿಕಾಸ ರತ್ನ, ಸೌರಭ ರತ್ನ, ಬೆಂಗಳೂರು ರತ್ನ-2018 ಪ್ರಶಸ್ತಿ, ಕ್ರಿಯಾಶೀಲ ಕನ್ನಡತಿ, ಅಂತಾರಾಷ್ಟ್ರೀಯ ಗೋಲ್ಡನ್ ಅಚೀವ್ಮೆಂಟ್ ಪ್ರಶಸ್ತಿ, ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ-2019 ಹೀಗೆ ಅನೇಕ ಪುರಸ್ಕಾರ, ಗೌರವಗಳು ಪ್ರಾಪ್ತಿಯಾಗಿವೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here