Saturday 10th, May 2025
canara news

ದುಬಾಯಿ ಸಂಪರ್ಕಿಸಿದ ರೋನ್ಸ್ ಬಂಟ್ವಾಳ್-ರಕ್ಷಣೆಗೆ ಬಂದ ಪ್ರವೀಣ್‍ಶೆಟ್ಟಿ ವಕ್ವಾಡಿ

Published On : 27 Apr 2020


ಮುಂಬಯಿ,ಎ.26: ಶ್ರೀವತ್ಸವ ವಿ., ದುರ್ಗಾಪ್ರಸಾದ್ ಗೌಡ, ದೀಪಕ್ ಬನ್ನೂರು ಈ ಮೂವರು ಕೋವಿಡ್ 19ರ ಲಾಕ್‍ಡೌನ್‍ನಿಂದ ದುಬಾಯಿ (ಶಾರ್ಜಾ)ನಲ್ಲಿ ಸಂಕಷ್ಟಕ್ಕೊಳಗಾದ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ವಿಟ್ಲದ ಪತ್ರಕರ್ತ ನಿಶಾಂತ್ ಬಿಲ್ಲಂಪದವು ಇವರು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ರಾಜ್ಯ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಇವರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರು.

ಕೇವಲ ಐದಾರು ನಿಮಿಷಗಳಲ್ಲಿ ರೋನ್ಸ್ ತನ್ನ ದುಬಾಯಿ ಅಲ್ಲಿನ ಮಿತ್ರ ಅನಿಲ್ ಪಿಂಟೋ (ಐಕಳ, ಕಿನ್ನಿಗೋಳಿ) ಅವರನ್ನು ಸಂಪರ್ಕಿಸಿ ಕ್ಷಣಾರ್ಧದಲ್ಲೇ ಈ ಮೂವರ ಪೂರ್ಣ ಮಾಹಿತಿ ಕಲೆಹಾಕಿ ತತ್‍ಕ್ಷಣವೇ ಪರಮಾಪ್ತ ಕರ್ನಾಟಕ ಎನ್‍ಆರ್‍ಐ ಫೆÇೀರಂ-ಯುಎಇ ಅಧ್ಯಕ್ಷ ಪ್ರವೀಣ್‍ಕುಮಾರ್ ಶೆಟ್ಟಿ ವಕ್ವಾಡಿ ಅವರನ್ನು ಸಂಪರ್ಕಿಸಿ ವಿವರಿಸಿದ್ದÀರು. ಪ್ರವೀಣ್ ಶೆಟ್ಟಿ ಅವರು ಖುದ್ಧಾಗಿ ಅವರಲ್ಲಿ ಮಾತಾಡಿ ಯೋಗ ಕ್ಷೇಮ ವಿಚಾರಿಸಿ ಬಂಟ್ವಾಳ್‍ಗೆ ಪ್ರತಿಕ್ರಿಯಿಸಿ ಇವರ ರಕ್ಷಣೆ, ಪರಿಹಾರ ಮತ್ತು ಸಹಕಾರಕ್ಕೆ ನಾವಿದ್ದೇವೆ ಎಂದು ಭರವಸೆಯನ್ನಿತ್ತರು.

ಇದು ಯಾರೂ ಇಲ್ಲವೋ ಎಂಬಂತೆ ಭಯದಲ್ಲಿದ್ದವರಿಗೆ ಧೈರ್ಯ ತುಂಬುವಂತೆ ಮಾಡಿದೆ ರೋನ್ಸ್ ಹಾಗೂ ದುಬೈ ತಂಡ ಮಾಡಿರುವ ಕಾರ್ಯ ಶ್ರೇಷ್ಠವಾದ ಕಾರ್ಯಕ್ಕೆ ನಿಶಾಂತ್ ಬಿಲ್ಲಂಪದವು ಅಭಿವಂದಿಸಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here