Saturday 10th, May 2025
canara news

ಸಂಸದ ಗೋಪಾಲ್ ಶೆಟ್ಟಿ ಮತ್ತು ಎರ್ಮಾಳ್ ಹರೀಶ್ ಶೆಟ್ಟಿ ಇವರ ಅವಿರತ ಪ್ರಯತ್ನದ ಫಲ ಮುಂಬಯಿ ಮಂಗಳೂರು ಮುಂಬಯಿ ಬಸ್ ಸಂಚಾರಕ್ಕೆ ಶೀಘ್ರವೇ ವ್ಯವಸ್ಥೆ

Published On : 04 May 2020   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಮೇ.03: ಉತ್ತರ ಮುಂಬಯಿ (ಬೋರಿವಿಲಿ) ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ್ ಸಿ.ಶೆಟ್ಟಿ (ಸಾಂತೂರು, ಉಡುಪಿ) ಇವರ ಅವಿರತ ಹೋರಾಟ ಮತ್ತು ಜನನಾಯಕ, ನಿಷ್ಠಾವಂತ ಸಾಮಾಜ ಸೇವಕ ಎರ್ಮಾಳ್ ಹರೀಶ್ ಶೆಟ್ಟಿ ಇವರ ನಿರಂತರ ಪ್ರಯತ್ನದ ಫಲವಾಗಿ ಇದೀಗ ಮುಂಬಯಿ ಮಂಗಳೂರು ಮುಂಬಯಿ ಬಸ್ ಸಂಚಾರಕ್ಕೆ ಕಾಲ ಸನ್ನಿಹಿತವಾಗಿದೆ.

ಸಂಸದ ಗೋಪಾಲ್ ಶೆಟ್ಟಿ ಅವರು ಕರ್ನಾಟಕದ ಒಳನಾಡ ಮತ್ತು ಹೊರನಾಡ ಸಚಿವರು, ಜನಪ್ರತಿನಿಧಿ, ಧುರೀಣರು, ಉನ್ನತಾಧಿಕಾರಿಗಳ ಮಾಹಿತಿ ಪಡೆದು ಇದೀಗಲೇ ತನ್ನ ನಿಯೋಗದೊಂದಿಗೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರನ್ನು ಭೇಟಿಮಾಡಿ, ರಾಜ್ಯದ ಮುಖ್ಯಮಂತ್ರಿ ಉದ್ಧಾವ್ ಠಾಕ್ರೆ ಅವರೊಂದಿಗೆ ಮಾತುಕತೆ ನಡೆಸಿದ್ದು, ಶೀಘ್ರವೇ ಮುಂಬಯಿ-ಮಂಗಳೂರು ಬಸ್ ಸಂಚಾರಕ್ಕೆ ವ್ಯವಸ್ಥೆ ನಡೆಸುವರೇ ಸಜ್ಜಾಗಿದ್ದಾರೆ. ಆದರೆ ಸರಕಾರದ ಷರತ್ತು ಅನ್ವಯದೊಂದಿಗೆ (ಗರ್ಭಿಣಿಯರು, ತೀವ್ರ ಅಸ್ವಸ್ಥರಿಗೆ, ಶಸ್ತ್ರಚಿಕಿತ್ಸೆಗೆ ಒಳಗಾಗುವ ಅತ್ಯವಶ್ಯಕ ವ್ಯಕ್ತಿಗಳಿಗೆ ವೈದ್ಯಕೀಯ ಪ್ರಮಾಣಪತ್ರ ಇದ್ದವರಿಗೆ ಮಾತ್ರ) ಕಳುಹಿಸಿ ಕೊಡುವ ಬಗ್ಗೆ ಚಿಂತಿಸಲಾಗಿದೆ. ಬಳಿಕ ಇತರೇ ರೋಗಿಗಳು, ವಿದ್ಯಾಥಿರ್üಗಳು, ನಿಧನ ಹೊಂದಿದವರ ಮನೆಮಂದಿ ಮತ್ತು ವಲಸೆ ಕಾರ್ಮಿಕರು, ಹೊಟೇಲು ಹಾಗೂ ಇನ್ನಿತರ ಕಾರ್ಮಿಕರಿಗೆ ಕ್ರಮವಾಗಿ ಅವಕಾಶ ಕಲ್ಪಿಸಲು ಚಿಂತಿಸಲಾಗಿದೆ. ಈ ಎಲ್ಲರಲ್ಲೂ ಆಧಾರ್ ಕಾರ್ಡ್, ಅಧಿಕೃತ ವಿಳಾಸಗಳ ದಾಖಲೆ ಪತ್ರಗಳು, ಅವಶ್ಯವಾಗಿದ್ದು ಒದಗಿಸುವ ಫೆÇೀರ್ಮ್‍ಗಳನ್ನು ತುಂಬಿಸಿದ ಬಳಿಕ ಅವುಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ ನಂತರವಷ್ಟೇ ಅವಶ್ಯಕವುಳ್ಳವರಿಗೆ ಮಾತ್ರ ಮೊದಲ ಪ್ರಾಶಸ್ತ್ಯ ನೀಡಿ ಕಳುಹಿಸಿ ಕೊಡುವ ಬಗ್ಗೆ ನಿರ್ಧರಿಸಲಾಗಿದೆ ಎಂದು ಎರ್ಮಾಳ್ ಹರೀಶ್ ತಿಳಿಸಿದ್ದಾರೆ.

ತನ್ನ ಸೂಚನೆಯಂತೆ ಪತ್ರಕರ್ತ ರೋನ್ಸ್ ಬಂಟ್ವಾಳ್ ಅವರು ಮಂಗಳೂರು ಮುಂಬಯಿ ಮಂಗಳೂರು ಸಂಚಾರದ ಪರವಾನಗಿ (ಪರ್ಮಿಟ್) ಇರುವ ಬಸ್ ಮಾಲಿಕರ ಮಾಹಿತಿ ಪಡೆದು ಒಪ್ಪಿಸಿದ್ದು ಇಂದಿಲ್ಲಿ ಸಂಸದರ ಕಚೇರಿಯಲ್ಲಿ ನಡೆಸಲಾದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಯಿತು. ಸುಪ್ರೀಮ್ ಪ್ರಯಾಣ ಸಂಸ್ಥೆ ಇದರ ಕೆ.ವಿ ಶೆಟ್ಟಿ ಬೋರಿವಿಲಿ ಅವರೊಂದಿಗೆ ದೀರ್ಘಾವಧಿಯ ಮಾತುಕತೆ ನಡೆಸಿದ ಸಂಸದ ಗೋಪಾಲ್ ಶೆಟ್ಟಿ ಅವರು ಸಂಪೂರ್ಣವಾಗಿ ಗಾಜುಗಳಿಂದ ಕೂಡಿದ ಸೂಪರ್ ಡಿಲಕ್ಸ್, ಸ್ಲೀಪರ್, ಬರ್ತ್ ಐಷಾರಾಮಿ ಮತ್ತು ಹವಾನಿಯಂತ್ರಣ ಬಸ್ಸುಗಳನ್ನು ಬಳಸದೇ (ಸಂಪೂರ್ಣ ನಿಷೇಧ) ಗಾಜುಗಳು ತೆರೆದಿಡಲ್ಪಟ್ಟ ಬರೇ ಸಾಮಾನ್ಯ ಬಸ್ಸುಗಳ ಬಳಕೆಯಷ್ಟೇ ಮಾಡುವ ಬಗ್ಗೆ, ದಿನವೊಂದಕ್ಕೆ ಎಷ್ಟು ಬಸ್‍ಗಳನ್ನು ಕಳುಹಿಸ ಬಹುದು, ಸಾಮಾಜಿಕ ಅಂತರ ಕಡ್ಡಾಯವಾಗಿ ಕಾಪಾಡಲೇ ಬೇಕಾಗುವುದರಿಂದ ಒಂದು ಬಸ್‍ನಲ್ಲಿ ಎಷ್ಟು ಪ್ರಯಾಣಿಕರನ್ನು ಒಯ್ಯಲುಸಾಧ್ಯ, ಸಾಮಾಜಿಕ ಅಂತರ ಕಾಪಾಡುವಿಕೆಗಾಗಿ ಎರಡು ಸೀಟುಗಳಲ್ಲಿ ಒಬ್ಬರೇ ಬಳಸುವ ಅನಿವಾರ್ಯತೆ ಬಗ್ಗೆ ತಿಳಿದುಕೊಂಡರು.

ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳೊಳಗಿನ ಸಂಚಾರದ ಹೊರ, ಒಳ ಪ್ರವೇಶದ ಅನುಮತಿ, ಉಭಯ ರಾಜ್ಯಗಳುದ್ದಕ್ಕೂ ರಸ್ತೆ ಸಾರಿಗೆ ಅಧಿಕಾರಿಗಳ ಅಥವಾ ಪೆÇೀಲಿಸರ ತಡೆಯುವಿಕೆ, ಇಬ್ಬರು ಚಾಲಕರು ಮತ್ತು ಓರ್ವ ಕ್ಲೀನರ್‍ನ ಭದ್ರತೆ, ಪದೇಪದೇ ಆರೋಗ್ಯ ತಪಾಸನೆ, ಅಂತರ ಕಾಪಾಡುವಿಕೆಯಿಂದಾಗಿ (ಅನಾವಶ್ಯಕ ಹೆಚ್ಚುವರಿ ಲಗೇಜ್‍ಗೆ ಅವಕಾಶ ಇಲ್ಲದೆ) ಎರಡು ಸೀಟುಗಳ ಮೊತ್ತ ಒಬ್ಬನೇ ಪ್ರಾಯಾಣಿಕನೇ ಭರಿಸುವ ಬಗ್ಗೆ, ಅಲ್ಲಲ್ಲಿ ನಡೆಸಲ್ಪಡುವ ಆರೋಗ್ಯ ಶೋಧನೆ (ಸ್ಕ್ರೀನಿಂಗ್) ನಿಮಿತ್ತ ಬಸ್ ಸಂಚಾರಕ್ಕೆ ಸುಮಾರು 24-28 ತಾಸುಗಳೂ ತಗಲಲಿದ್ದು, ಪ್ರಯಾಣದುದ್ದಕ್ಕೂ ಸ್ವತಃ ಆಹಾರ (ಉಟೋಪಚಾರ) ನೀರು ಅವರವರೇ ಕೊಂಡುಕೊಳ್ಳುವ, ಕರ್ನಾಟಕ ಮಹಾರಾಷ್ಟ್ರ ಗಡಿ ಪ್ರದೇಶವಾದ ನಿಪ್ಪಾಣಿಯಲ್ಲಿನ ವಿಶೇಷ ಭದ್ರತೆ ನಡೆಸುವ ಎಲ್ಲಾ ತಪಾಸನೆಗಳಿಗೆ ಸ್ಪಂದಿಸುವ ಮತ್ತಿತರ ಬಗ್ಗೆ ಕೆ.ವಿ ಶೆಟ್ಟಿ ತಿಳಿಸಿದರು.

ತಮ್ಮೂರುಗಳಿಗೆ ತಲುಪಿದಾಕ್ಷಣ ಉಡುಪಿ, ಮಂಗಳೂರು ಜಿಲ್ಲೆಗಳಲ್ಲಿನ ಜಿಲ್ಲಾಧಿಕಾರಿ, ಆರೋಗ್ಯಾಧಿಕಾರಿ, ಪೆÇೀಲಿಸು ಮುಖ್ಯಸ್ಥರು, ಜಿಲ್ಲಾಡಳಿತಗಳ ಆದೇಶಾನುಸಾರ ಸರಕಾರ ಒದಗಿಸುವ (ಕಾಲೇಜು ಸ್ಕೂಲ್, ಹಾಸ್ಟೇಲ್) ಪ್ರತೀಯೋರ್ವ ಪ್ರಯಾಣಿಕನಿಗೂ ಕನಿಷ್ಟ 14 ದಿನಗಳ ದಿಗ್ಬಂಧನ (ಕ್ವಾರನ್‍ಟಾಯ್ನ್) ಕಡ್ಡಾಯವಾಗಿದ್ದು ಇಂತಹ ಹಲವಾರು ಷರತ್ತುಗಳನ್ನು ಪ್ರಯಾಣಿಕರು ಸಹನೆಯಿಂದ ಚಾಚುತಪ್ಪದೆ ಪಾಲಿಸುಸುವಂತಿದ್ದರೆ ಮಾತ್ರ ಪ್ರಯಾಣಕ್ಕೆ ಅವಕಾಶ ಮಾಡಿಕೊಡುವ ಬಗ್ಗೆ ಚರ್ಚಿಸಲಾಗಿದೆ. ಕೆನರಾ ಪಿಂಟೋ ಟ್ರಾವೆಲ್ಸ್‍ನ ಮಾಲೀಕ ಸುನೀಲ್ ಪಾಯ್ಸ್, ಆನಂದ್ ಟ್ರಾವೆಲ್ಸ್‍ನ ಮಾಲೀಕ ಎ.ಎಂ ಡಿಸೋಜಾ,(ವ್ಯವಸ್ಥಾಪಕ ಮಾಥ್ಯೂ ಡಿಸಿಲ್ವಾ), ಸದರ್ನ್ ಟ್ರಾವೆಲ್ಸ್‍ನ ಮಾಲೀಕ ಕೆ.ಟಿ ರಾಜಶೇಖರ್ (ವ್ಯವಸ್ಥಾಪಕ ಬಾಲಕೃಷ್ಣ ರೈ), ಮರ್ಸಿ ಟ್ರಾವೆಲ್ಸ್‍ನ ಅಬ್ದುಲ್ ರಿಯಾಝ್ (ಮುನ್ನಾ) ಸೇರಿದಂತೆ ಇನ್ನಿತರ ಬಸ್ ಮಾಲಿಕರು ತಮ್ಮ ಸಹಯೋಗ ಇದೀಗಲೇ ವ್ಯಕ್ತ ಪಡಿಸಿದ್ದಾರೆ. ಸುಪ್ರೀಮ್ ಸಂಸ್ಥೆಯ ಕೆ.ವಿ ಶೆಟ್ಟಿ ಬೋರಿವಿಲಿನಿಂದ ದಿನಾ ಮಧ್ಯಾಹ್ನ ಸಾಧ್ಯವಾದಷ್ಟು ಬಸ್‍ಗಳ ವ್ಯವಸ್ಥೆ ಮಾಡುವ ಭರವಸೆ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಸರಕಾರ, ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಒಪ್ಪಿಗೆ ದೊರೆತಲ್ಲಿ ಶೀಘ್ರವಾಗಿ ಬಸ್ ಸಂಚಾರಕ್ಕೆ ಹಸಿರು ನಿಶಾನೆ ನೀಡಲಾಗುವುದು ಎಂದು ಎರ್ಮಾಳ್ ಹರೀಶ್ ತಿಳಿಸಿದ್ದಾರೆ.

ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್‍ಕುಮಾರ್ ಕಟೀಲ್, ಶಾಸಕರಾದ ಕೆ.ರಘುಪತಿ ಭಟ್, ವಿ.ಸುನೀಲ್ ಕುಮಾರ್, ಲಾಲಜಿ ಮೆಂಡನ್ ಮತ್ತಿತರ ಗಣ್ಯರ ಸಲಹೆ ಸೂಚನೆ ಪಡೆದು ಈ ಸೇವಾರಂಭಕ್ಕೆ ಹಗಲಿರುಳು ಶ್ರಮಿಸುತ್ತಿದ್ದು ಮಾಹಿತಿ ನಮೂನೆ (ಫೆÇರ್ಮ್)ಗಳನ್ನು ಶೀಘ್ರವೇ ವಿತರಿಸಲಾಗುವುದು. ಯಾರೂ ಅನಾವಶ್ಯಕವಾಗಿ ಆತುರ ಪಡದೆ ಅತ್ಯವಶ್ಯಕರಿಗೆ ಅವಕಾಶ ಮಾಡಿಕೊಟ್ಟು ಸಂಯಮದಿಂದ ಸಹಕರಿಸುವಂತೆ ಕೋರಲಾಗಿದೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here