Saturday 10th, May 2025
canara news

ಕಾರ್ಕಳದಲ್ಲಿ ಮೈಕ್ ಬಳಸಿ ಊರಿಡೀ ಡಂಗುರ ಬಾರಿಸಿ ಗಾಬರಿ ಹುಟ್ಟಿಸಿದ ಪ್ರಸಂಗ ಮುಂಬಯಿವಾಸಿ ಗರ್ಭಿಣಿಯ ಆಗಮನಕ್ಕೆ ತವರೂರ ಸನ್ಮಾನ

Published On : 10 May 2020   |  Reported By : Rons Bantwal


ಮುಂಬಯಿ, ಮೇ.09: ಕಳೆದ ಸುಮಾರು ಒಂದುವರೆ ತಿಂಗಳಿನಿಂದ ಕೊರೋನಾಕ್ಕೆ ತತ್ತರಿಸಿರುವ ಮುಂಬಯಿವಾಸಿ ತುಳು ಕನ್ನಡಿಗರು ಒಮ್ಮೆ ತವರೂರು ತಲುಪಿ ನಿಟ್ಟಿಸಿರು ಬಿಡುವ ತವಕದಲ್ಲಿದ್ದು ಸರಕಾರಗಳ ಮೊರೆಹೋಗಿ ತವರೂರಿಗೆ ಕರೆಸಿಕೊಳ್ಳುವ ಹರಸಾಹದಲ್ಲಿದ್ದಾರೆ. ಅದೆಷ್ಟೋ ಜನಪ್ರತಿನಿಧಿ, ಜಿಲ್ಲಾಧಿಕಾರಿಗಳಿಗೆ ಮನವಿಗಳ ಮೇಲೆ ಮನವಿ ಮಾಡಿ ಸುಸ್ತಾಗಿ ಇದೀಗ ಜೀವನದಲ್ಲಿ ಬೇಸತ್ತು ಕನಿಷ್ಟ ದಯಾಮರಣಕ್ಕಾದರೂ ಒಪ್ಪಿಗೆ ನೀಡುವಂತೆ ತಮ್ಮ ಕೊನೆಯ ಆಸೆಯನ್ನು ಸರಕಾರದ ಮುಂದಿಟ್ಟಿದ್ದಾರೆ.

ಮುಂಬಯಿ ಕನ್ನಡಿಗರಲ್ಲಿ ಮಲತಾಯಿ ಧೋರಣೆ ತಾಳಿದ ಕರ್ನಾಟಕ ಸರಕಾರವು ಅನೇಕಾನೇಕ ಕಾರಣಗಳನ್ನು ಮುಂದಿಟ್ಟು ಹುಟ್ಟಿದ ಊರಿಗೆನೇ ಬರಲು ನಿರಾಕರಿಸುತ್ತಿದೆ. ಪದೇಪದೇ ಸರಕಾರ ನೀಡಿರುವ ಯಾವ ಆ್ಯಪ್‍ಗಳೂ ಉತ್ತರಿಸದ ಕಾರಣ ಇ-ಪಾಸ್ ಪಡೆಯುವಲ್ಲಿ ಗೊಂದಲಕ್ಕೆ ಸಿಲುಕಿದ ಜನರೀಗ ತಾಳ್ಮೆ ಕಳಕೊಂಡ ಕನ್ನಡಿಗರು ಆಗಿದ್ದಾಗಲಿ ಎಂದು ಸ್ವಂತಃ ವಾಹನಗಳನ್ನೇರಿ ಊರಿನತ್ತ ಪ್ರಯಾಣ ಬೆಳೆಸಿದ್ದಾರೆ. ಇವರನ್ನೆಲ್ಲಾ ಮಹಾರಾಷ್ಟ್ರ ಕರ್ನಾಟಕ ಗಡಿಭಾಗವಾದ ಬೆಳಗಾವಿ (ನಿಪ್ಪಾಣಿ) ಇಲ್ಲಿ ತಪಾಸಣೆ ನೆಪದಲ್ಲಿ ಹಿಡಿದಿಟ್ಟಿದ್ದಾರೆ.

ಆ ಪೈಕಿ ಕಾರ್ಕಳ ಮೂಲದ ದಯಾನಂದ ಶೆಟ್ಟಿ ಎಂಬವರು ತನ್ನ ಗರ್ಭಿಣಿ ಪತ್ನಿಯನ್ನು ಮಕ್ಕಳ ಸಹಿತ ಹುಟ್ಟೂರಿಗೆ ಹೊರಟು ನಿನ್ನೆ ನಿಪ್ಪಾಣಿಯಲ್ಲಿ ಬೆಳಿಗ್ಗೆ ಸಿಕ್ಕಾಕಿಕೊಂಡಿದ್ದರು. ದಯಾನಂದ್ ಮುಂಬಯಿಗೆ ಫೆÇೀನಾಯಿಸಿ ಎರ್ಮಾಳ್ ಹರೀಶ್ ಶೆಟ್ಟಿ ಅವರಲ್ಲಿ ಮಾತನಾಡಿಸಿ ತಕ್ಷಣ ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರನ್ನು ಕಾನ್ಫರೆನ್ಸ್‍ಗೆ ತಂದು ದಯಾನಂದ್ ಜೊತೆ ಮಾತನಾಡಿ ಅಧಿಕಾರಿಗಳಿಗೆ ತಿಳಿಸಿದರೂ ಸಂಜೆ ತನಕ ನಿಪ್ಪಾಣಿಯಲ್ಲೇ ಕಳೆಯುವುದು ಅನಿವಾರ್ಯವಾಯಿತು. ಕೊನೆಗೂ ರಾತ್ರಿ ಅಲ್ಲಿಂದ ಹೊರಟು ಇಂದಿಲ್ಲಿ (ಮೇ.09) ಬೆಳಿಗ್ಗೆ ಕಾರ್ಕಳದ ಸ್ವನಿವಾಸಕ್ಕೆ ತಲುಪಿದ್ದು ಶಾಸಕ ಸುನೀಲ್ ಕುಮಾರ್ ಕೂಡಾ ಅದೇ ವೇಳೆಗೆ ಭೇಟಿ ನೀಡಿದ್ದರು. ಅಷ್ಟರಲ್ಲೇ ಜಿಲ್ಲಾಡಳಿತ, ಆರೋಗ್ಯಾಧಿಕಾರಿಗಳು, ಪೆÇೀಲಿಸರು ಮುಂಬಯಿಯಿಂದ ಬಂದ ಈ ಪರಿವಾರವನ್ನು ಕ್ವಾರೈಂಟಾಯ್ನ್ ಮಾಡುವ ಬಗ್ಗೆ ಊರೀಡಿ ಘೋಷಣೆ ಕೂಗುತ್ತಾ (ಮೈಕ್ ಅನೌನ್ಸ್‍ಮೆಂಟ್) ನಮ್ಮನ್ನು ಕರೆದೊಯ್ದರು ಎಂದು ದಯಾನಂದ ಶೆಟ್ಟಿ ತಿಳಿಸಿದ್ದಾರೆ.

ಸರಕಾರ, ಜಿಲ್ಲಾಧಿಕಾರ, ಪೆÇೀಲಿಸರ ಆದೇಶ, ಅನುಮತಿಯಂತೆನೇ ಬಸುರಿ ಪತ್ನಿಯನ್ನು ಊರಿಗೆ ತಂದು ನಾವು ಬಂದದ್ದಾಯಿತು. ಆದರೆ ಜಿಲ್ಲಾಡಳಿತದ ಇಂತಹ ಕ್ರಮ ನಮಗೆ ಬಾರೀ ಸಂಕೋಚಕ್ಕೆ ಒಳಪಡಿಸಿ ಮಾನಸಿಕವಾಗಿ ಹಿಂಸಿಸಿದಂತಾಗಿದೆ. ಸಂಧಿಗ್ಧ ಕಾಲದಲ್ಲಿ ನಮಗೆ ಊರವರ ಇಂತಹ ಸುಖಾಗಮನ ಅನಿವಾರ್ಯವೇ ಎಂದು ಖೇದ ವ್ಯಕ್ತ ಪಡಿಸಿದ್ದಾರೆ. : ರೋನ್ಸ್ ಬಂಟ್ವಾಳ್

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here