ಪ್ರಯಾಣಕ್ಕೆ ಹಸಿರು ನಿಶಾನೆಗೈದು ಶುಭಪ್ರಯಾಣ ಹಾರೈಸಿದ ಸಂಸದ ಗೋಪಾಲ್ ಶೆಟ್ಟಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಮೇ.11: ಕಳೆದ ಸುಮಾರು 50 ದಿನಗಳಿಂದ ಸಂಪೂರ್ಣವಾಗಿ ನಿಷೇಧಿಸಲ್ಪಟ್ಟ ಮುಂಬಯಿ ಮಂಗಳೂರು ಬಸ್ ಪ್ರಯಾಣ (ಸಾರ್ವಜನಿಕವಾಗಿ) ಉತ್ತರ ಮುಂಬಯಿ (ಬೋರಿವಿಲಿ) ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ್ ಸಿ.ಶೆಟ್ಟಿ (ಸಾಂತೂರು, ಉಡುಪಿ) ಇವರ ಅವಿರತ ಹೋರಾಟ ಮತ್ತು ಜನನಾಯಕ, ನಿಷ್ಠಾವಂತ ಸಾಮಾಜ ಸೇವಕ ಎರ್ಮಾಳ್ ಹರೀಶ್ ಶೆಟ್ಟಿ ಇವರ ನಿರಂತರ ಪ್ರಯತ್ನದ ಫಲವಾಗಿ ಕೊನೆಗೂ ಇಂದಿಲ್ಲಿ ಆರಂಭ ಗೊಂಡಿತು. ಗೋಪಾಲ್ ಶೆಟ್ಟಿ ಅವರು ಹಸಿರು ನಿಶಾನೆ ಸೂಚಿಸಿ ಶುಭಪ್ರಯಾಣ ಹಾರೈಸಿದರು.
ಬಂಟ್ಸ್ ಸಂಘ ಮುಂಬಯಿ ಇದರ ನೂತನ ಯೋಜನಾ ಸಮಿತಿ ಕಾರ್ಯಾಧ್ಯಕ್ಷ ಮುಂಡಪ್ಪ ಎಸ್.ಪಯ್ಯಡೆ ಅವರು ಪ್ರಯಾಣಿಕರಿಗೆ ಹಣ್ಣುಹಂಪಲು ನೀಡಿ, ಎರ್ಮಾಳ್ ಹರೀಶ್ ಶೆಟ್ಟಿ ಅವರು ಬಿಸ್ಕತ್ತು, ಉಚಿತವಾಗಿ ಆಹಾರಪೆÇಟ್ಟಣಗಳನ್ನು ನೀಡಿ ಎಲ್ಲರಿಗೂ ಪ್ರಯಾಣಕ್ಕೆ ಶುಭಾರೈಸಿದರು. ಮೀರಾರೋಡ್‍ನಿಂದ ಯಾನ ಆರಂಭಿದ ಬಸ್ ದಹಿಸರ್ ಮಾರ್ಗವಾಗಿ ಬೋರಿವಿಲಿ, ಅಂಧೇರಿ, ಸಾಂತಕ್ರೂಜ್, ಸಯಾನ್, ಚೆಂಬೂರು, ವಾಶಿ, ಪುಣೆ ಮಾರ್ಗವಾಗಿ ಬೆಳಗಾವಿ, ಭಟ್ಕಳ, ಕುಂದಾಪುರ, ಉಡುಪಿ ಮೂಲಕ ಮಂಗಳೂರು ಸೇರಲಿದೆ ಎಂದು ವ್ಯವಸ್ಥಾಪಕರು ತಿಳಿಸಿದರು.
ಈ ಸಂದರ್ಭದಲ್ಲಿ ಸುಪ್ರೀಮ್ ಪ್ರಯಾಣ ಸಂಸ್ಥೆ ಇದರ ಕೆ.ವಿ ಶೆಟ್ಟಿ ಬೋರಿವಿಲಿ, ಹರೀಶ್ ವಿ.ಶೆಟ್ಟಿ, ಮಂಜುನಾಥ ಬನ್ನೂರು, ಪ್ರಕಾಶ್ ಎ.ಶೆಟ್ಟಿ (ಎಲ್‍ಐಸಿ), ಅಜಿತ್ ಆರ್.ಶೆಟ್ಟಿ, ಕಾರ್ತಿಕ ಹರೀಶ್ ಶೆಟ್ಟಿ, ವಿಜಯ್ ಶೆಟ್ಟಿ, ನಿಕೇಶ್ ಶೆಟ್ಟಿ, ಶಿವ ಶೆಟ್ಟಿ, ವಿಶ್ಯ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.
ಗೋಪಾಲ್ ಶೆಟ್ಟಿ ಮಾತನಾಡಿ ಕೇಂದ್ರ ಸರಕಾರದ ಆದೇಶದಂತೆ ಹವಾನಿಯಂತ್ರಣ ಬಸ್ಸುಗಳನ್ನು ಬಳಸದೇ ಗಾಜುಗಳು ತೆರೆದಿಡಲ್ಪಟ್ಟ ಬರೇ ಸಾಮಾನ್ಯ ಬಸ್ಸುಗಳ ಬಳಕೆಯಷ್ಟೇ ಮಾಡಿ ಪ್ರಯಾಣಕ್ಕೆ ಅನುವು ಮಾಡಿ ಕೊಟ್ಟಿದ್ದೇವೆ. ಸಾಮಾಜಿಕ ಅಂತರ ಕಾಪಾಡುವಿಕೆಗಾಗಿ ಎರಡು ಸೀಟುಗಳಲ್ಲಿ ಒಬ್ಬರೇ ಬಳಸುತ್ತಾ ಒಂದು ಬಸ್ ನಲ್ಲಿ ಬರೇ 20 ಪ್ರಯಾಣಿಕರನ್ನಷ್ಟೇ ಕಳುಹಿಸಿ ಕೊಡಲಾಗುತ್ತಿದೆ. ಊರಿಗೆ ತಲುಪಿದ ಬಳಿಕ ಪ್ರತೀಯೋರ್ವ ಪ್ರಯಾಣಿಕನಿಕರ ಕ್ವಾರನ್‍ಟಾಯ್ನ್ ಕಡ್ಡಾಯದ ಬಗ್ಗೆ ಕರ್ನಾಟಕ ಸರಕಾರ ಮತ್ತು ಅಲ್ಲಿನ ಜಿಲ್ಲಾಡಳಿತವೇ ನಿರ್ಧಾರಿಸಲಿದೆ. ಸದ್ಯ ಸರಕಾರ ತೆಗೆದುಕೊಂಡ ನಿರ್ಣಾಯಗಳಂತೆ ಎಲ್ಲಾ ವ್ಯವಸ್ಥೆಗಳು ನಡೆಯಲಿದ್ದು ಕ್ರಮೇಣ ಎಲ್ಲವೂ ಅನುಕೂಲಕರವಾಗಿ ಮಾರ್ಪಡಗಲಿದೆ ಎಂದರು.
ಇದು ಗೋಪಾಲ್ ಶೆಟ್ಟಿ ಮತ್ತು ಎರ್ಮಾಳ್ ಹರೀಶ್ ಅವರ ಭಾರೀ ಹೋರಾಟ, ಪ್ರಯತ್ನದ ಫಲವೇ ಈ ಬಸ್ ಸೇವೆಯಾರಂಭವಾಗಿದೆ. ಬಹಳಮಂದಿ ಇಲ್ಲಿಗೆ ಬಂದು ಸಿಲುಕಿ ಕೊಂಡವರು, ಒಬ್ಬಂಟಿಗರಾಗಿ ಇದ್ದವರು ತಮ ತವರೂರಿಗೆ ಹೋಗುವ ಪ್ರಯತ್ನ,ಆಶಯದಲ್ಲಿದ್ದರು ಈ ಆಶಯ ಇಂದು ಈಡೇರಿದೆ. ಊರಿನ ಸಂಸದರು, ಶಾಸಕರೊಂದಿಗಿನ ನಿರಂತರ ಸಂಪರ್ಕದ ಬಳಿಕ ಈ ಯಾನಕ್ಕೆ ಮುಹೂರ್ತವಾಗಿದೆ. ಮುಂದಿಅ ದಿನಗಳಲ್ಲಿ ವಲಸೆ ಜನರ ಆಶಯ ಈಡೇರುವ ತನಕ ನಿರಂತರವಾಗಿ ಈ ಪ್ರಯಾಣ ಸಾಗಲಿ ಎಂದು ಮುಂಡಪ್ಪ ಪಯ್ಯಡೆ ತಿಳಿಸಿದರು.
ಎರ್ಮಾಳ್ ಹರೀಶ್ ಮಾತನಾಡಿ ಕರ್ನಾಟಕ ಸರಕಾರ, ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಒಪ್ಪಿಗೆ ದೊರೆತಲ್ಲಿ ಶೀಘ್ರವಾಗಿ ಹೆಚ್ಚುವರಿ ಬಸ್ ಸಂಚಾರ ಆರಂಭಿಸಲಾಗುವುದು. ಇದೀಗಲೇ ಕೆ.ವಿ ಶೆಟ್ಟಿ ಬೋರಿವಿಲಿ ಅವರ ಮಾರ್ಗದರ್ಶನದಂತೆ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಮುಂದೆ ಹೆಚ್ಚುವರಿ ಬಸ್‍ಗಳನ್ನು ಆನಂದ್ ಟ್ರಾವೆಲ್ಸ್‍ನ ಎ.ಎಂ ಡಿಸೋಜಾ, ಸದರ್ನ್ ಟ್ರಾವೆಲ್ಸ್‍ನ ಕೆ.ಟಿ ರಾಜಶೇಖರ್, ಕೆನರಾ ಪಿಂಟೋ ಟ್ರಾವೆಲ್ಸ್‍ನ ಸುನೀಲ್ ಪಾಯ್ಸ್, ಮರ್ಸಿ ಟ್ರಾವೆಲ್ಸ್‍ನ ಅಬ್ದುಲ್ ರಿಯಾಝ್ (ಮುನ್ನಾ) ಸೇರಿದಂತೆ ಇನ್ನಿತರ ಬಸ್ ಮಾಲಿಕರು ವ್ಯವಸ್ಥೆ ಮಾಡಿಕೊಡುವುದಾಗಿ ಸಹಯೋಗ ವ್ಯಕ್ತ ಪಡಿಸಿದ್ದಾರೆ. ಒಂದೆರಡು ದಿನಗಳ ಬಳಿಕ ಗರ್ಭಿಣಿಯರು, ತೀವ್ರ ಅಸ್ವಸ್ಥರು, ಶಸ್ತ್ರಚಿಕಿತ್ಸೆಗೆ ಒಳಗಾಗುವ ವ್ಯಕ್ತಿಗಳಿಗೆ ಮೊದಲ ಆದ್ಯತೆ ನೀಡಿ ಕ್ರಮೇಣ ಎಲ್ಲರಿಗೂ ಹೋಗುವ ವ್ಯವಸ್ಥೆ ಕೈಗೊಳ್ಳಲಾಗುವುದು. ಆದರೆ ಕರ್ನಾಟಕ ಸರಕಾರದ sevಚಿsiಟಿಜhu.ಞಚಿಡಿಟಿಚಿಣಚಿಞಚಿ.gov.iಟಿ ಮೂಲಕ ಇ-ಪಾಸ್ ಮತ್ತು ವೈದ್ಯಕೀಯ ತಪಾಸಣಾ ಸರ್ಟಿಫಿಕೇಟ್, ಆಧಾರ್‍ಕಾರ್ಡ್ ಎಲ್ಲರಲ್ಲೂ ಕಡ್ಡಾಯವಾಗಿರ ತಕ್ಕದ್ದು. ಬಾಕಿ ವ್ಯವಸ್ಥೆಗೆ ನಮ್ಮ ಸೇವಾಕರ್ತರು ಸಹಕರಿಸಲಿದ್ದಾರೆ. ಸದ್ಯ ಪ್ರಯಾಣಿಕರಿಗೆ ನಾವೇ ಆಹಾರ,ಫಲವಸ್ತು, ನೀರು ನೀಡುತ್ತಿದ್ದೇವೆ. ಪ್ರಯಾಣಿಕರು ಯಾರೂ ಅವಸರ ಪಡದೆ ಸಂಯಮ ಕಾಪಾಡಿಕೊಳ್ಳುವುದು ಅತ್ಯವಶ್ಯಕ. ತಮಗೆ ಒದಗುವ ಇತರ ಯಾವುದೇ ಸಂಚಾರದ ಮೂಲಕವೂ ಪ್ರಯಾಣಿಸಿದರೂ ನಿಗದಿತ ಸ್ಥಾನ ತಲುಪಿದ ಬಳಿಕವೂ ಸರಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸ್ವಾಸ್ಥ ಸಮಾಜಕ್ಕೆ ಸಹಕರಿಸುವಂತೆ ಕೋರಿದರು.