Saturday 10th, May 2025
canara news

ಚಾರ್ಲ್ಸ್ ವಲೇರಿಯನ್ ಫ್ರಾಂಕ್ ಆಗ್ರಾರ್ ನಿಧನ

Published On : 12 May 2020


ಮುಂಬಯಿ,ಮೇ.11: ಬಂಟ್ವಾಳ ಬಿ ಕಸಬಾ ಆಗ್ರಾರ್ ಮೇಲಿನ ಪಣ್ಣಂಗಿಲ ಇಲ್ಲಿನ ಪೆÇಲ್ತೋಡಿ ನಿವಾಸಿ ಚಾರ್ಲ್ಸ್ ವಲೇರಿಯನ್ ಫ್ರಾಂಕ್ (73.) ಇಂದಿಲ್ಲಿ ಸೋಮವಾರ ರಾತ್ರಿ ಹೃದಯಾಘಾತದಿಂದ ಫಾದರ್ ಮುಲ್ಲರ್ಸ್ ಆಸ್ಪತ್ರೆ ಕಂಕನಾಡಿ ಮಂಗಳೂರು ಇಲ್ಲಿ ನಿಧನರಾದರು.

ಓರ್ವ ಪಶು ಪಾಲಕರಾಗಿದ್ದು ಪಶುವೈದ್ಯರಂತೆಯೇ ಪಶುಗಳ ಪ್ರಸವದಲ್ಲೂ ಪರಿಣತರಾಗಿದ್ದು ಆಸುಪಾಸಿನ ಪಶುಸಂಗೋಪಕರಿಗೆ ಸಹಕರಿಸುತ್ತಿದ್ದರು. ಹಾಲು ಉತ್ಪಾದಕರ ಸಂಘ ಮಂಡಾಡಿ ಬಂಟ್ವಾಳ ಇದರ ಅಧ್ಯಕ್ಷರಾಗಿ, ದಕ್ಷಿಣ ಕನ್ನಡ ಜಿಲ್ಲಾ ವಿದ್ಯುತ್ ಮತ್ತು ನದಿನೀರು ಬಳಕೆದಾರರ ಹಿತರಕ್ಷಣಾ ಸಮಿತಿ (ರಿ.) ಬಂಟವಾಳ ಇದರ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಕಂಬಳ ಕೋಣಗಳ ಓಟಗಾರ ಹಾಗೂ ಜಾನಪದ ಕ್ರೀಡೆ ಕಂಬಳದಲ್ಲಿ ನಿಪುಣನಾಗಿ ಅಪಾರ ಪರಿಶ್ರಮದಿಂದ ಪ್ರಗತಿಪರ ಕೃಷಿಕರೆಣಿದ್ದರು. ಸಮಾಜಮುಖಿ ಸೇವೆಗಳಲ್ಲಿ ಸದಾ ಮುಚೂಣಿಯಲಿದ್ದು ನಿಷ್ಠಾವಂತ ಸಮಾಜ ಸೇವಕರಾಗಿ ನಾಡಿನಾದಾದ್ಯಂತ ಜನಾನುರೆಣಿಸಿದ ಚಾರ್ಲ್ಸ್ ಇವರು ಸೈಂಟ್ ವಿಶೇಂತ್ ಪಾವ್ಲ್ ಸಭಾ ಲೊರೆಟ್ಟೋ ಘಟಕದ ಸ್ಥಾಪಕ ರೂವಾರಿ, ಅಧ್ಯಕ್ಷರಾಗಿದ್ದು ಸತತ 26 ವರ್ಷಗಳ ಅನುಪಮ ಸೇವೆ ಸಲ್ಲಿಸಿರುವರು.

ಮೃತರು ಪತ್ನಿ ಲತೀಷಿಯಾ ಚಾರ್ಲ್ಸ್ ಫ್ರಾಂಕ್, ಮಕ್ಕಳಾದ ಫಿಲಿಪ್ ಮಾರ್ಕ್, ಜೆಸಿಂತಾ ತಾರಾ / ರೋನ್ಸ್ ಬಂಟ್ವಾಳ್, ಅಸುಂತಾ/ ಮೆಲ್ವಿನ್, ರೋಶನ್ ದೀಪಕ್/ ವಿಲ್ಮಾ, ಅರುಣ್/ ಡೈಝಿ, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗ ಆಗಲಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here