ಮುಂಬಯಿ (ಬಂಟ್ವಾಳ), ಮೇ.13: ಫಾದರ್ ಮುಲ್ಲರ್ಸ್ ಆಸ್ಪತ್ರೆ ಕಂಕನಾಡಿ ಮಂಗಳೂರು ಇಲ್ಲಿ ಕಳೆದ ಸೋಮವಾರ ಹೃದಯಾಘಾತದಿಂದ ನಿಧನರಾದ ಹಾಲು ಉತ್ಪಾದಕರ ಸಂಘ ಮಂಡಾಡಿ ಬಂಟ್ವಾಳ ಇದರ ಅಧ್ಯಕ್ಷರಾಗಿ, ದಕ್ಷಿಣ ಕನ್ನಡ ಜಿಲ್ಲಾ ವಿದ್ಯುತ್ ಮತ್ತು ನದಿನೀರು ಬಳಕೆದಾರರ ಹಿತರಕ್ಷಣಾ ಸಮಿತಿ (ರಿ.) ಬಂಟವಾಳ ಇದರ ಕಾರ್ಯಕಾರಿ ಸಮಿತಿ ಸದಸ್ಯ, ಜಾನಪದ ಕ್ರೀಡೆ ಕಂಬಳದ ನಿಪುಣ, ಕಂಬಳ ಕೋಣಗಳ ಓಟಗಾರ, ಪ್ರಗತಿಪರ ಕೃಷಿಕ ಚಾರ್ಲ್ಸ್ ವಲೇರಿಯನ್ ಫ್ರಾಂಕ್ ಇವರ ಅಂತ್ಯಕ್ರಿಯೆ ಇಂದಿಲ್ಲಿ ಬುಧವಾರ ನೆರವೇರಿತು.
ಚಾರ್ಲ್ಸ್‍ರ ಪಾರ್ಥೀವ ದೇಹವನ್ನು ಬಂಟ್ವಾಳ ಬಿ ಕಸಬಾ ಆಗ್ರಾರ್ ಮೇಲಿನ ಪಣ್ಣಂಗಿಲ ಇಲ್ಲಿನ ಪೆÇಲ್ತೋಡಿ ನಿವಾಸಕ್ಕೆ ತರುತ್ತಿದ್ದಂತೆಯೇ ಕರ್ನಾಟಕ ರಾಜ್ಯದ ಮಾಜಿ ಸಚಿವ ಬಿ.ರಮಾನಾಥ ರೈ, ಬೂಡಾ ಮಾಜಿ ಅಧ್ಯಕ್ಷ ಪಿಯೂಸ್ ಎಲ್.ರೋಡ್ರಿಗಸ್ ಸೇರಿದಂತೆ ಹಲವಾರು ಧುರೀಣರು ಆಗಮಿಸಿ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಅರ್ಪಿಸಿದರು. ಮತ್ತು ಫ್ರಾಂಕ್ ಪರಿವಾರಕ್ಕೆ ಸಾಂತ್ವಾನ ತಿಳಿಸಿದರು.
ಸಮಾಜಮುಖಿ ಸೇವೆಗಳಲ್ಲಿ ಸದಾ ಮುಚೂಣಿಯಲಿದ್ದು ನಿಷ್ಠಾವಂತ ಸಮಾಜ ಸೇವಕರಾಗಿ ನಾಡಿನಾದಾದ್ಯಂತ ಜನಾನುರೆಣಿಸಿ ಓರ್ವ ಪ್ರಗತಿಪರ ಕೃಷಿಕರಾಗಿದ್ದ ಚಾರ್ಲ್ಸ್ ಪಶು ಪಾಲಕರಾಗಿದ್ದೂ ಪಶುವೈದ್ಯರಂತೆಯೇ ಪಶುಗಳ ಪ್ರಸವದಲ್ಲೂ ಪರಿಣತರೆಣಿಸಿದ್ದರು. ಅಸುಪಾಸಿನ ಪಶುಸಂಗೋಪಕರು, ಕೃಷಿಕರೂ (ಸರಕಾರದ ಆದೇಶ ಉಲ್ಲಂಗಿಸದೆ ಸಾಮಾಜಿಕ ಅಂತರ ಕಾಪಾಡುವಂತೆ ಮಾಡಿದ ಮನವಿಯಂತೆ) ಆಗಮಿಸಿ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಅರ್ಪಿಸಿದರು.