ಮುಂಬಯಿ, ಮೇ.14: ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ ಸಿ. ಶೆಟ್ಟಿ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎರ್ಮಾಳ್ ಹರೀಶ್ ಶೆಟ್ಟಿ ಇವರ ನೇತೃತ್ವದಲ್ಲಿ ಇಂದಿಲ್ಲಿ ಗುರುವಾರ ವಿಶೇಷ ಬಸ್ಸಿನ ಮೂಲಕ ಎರ್ಮಾಳ್ ಹರೀಶ್ ಶೆಟ್ಟಿ ಇವರು15 ಜನರನ್ನು ಮಂಗಳೂರಿಗೆ ಉಚಿತವಾಗಿ ಕಳುಹಿಸಿ ಕೊಟ್ಟರು.
ಇವರೆಲ್ಲರೂ ವಿವಿಧ ಕಾರ್ಯದ ನಿಮಿತ್ತ ಊರಿನಿಂದ ಮುಂಬಯಿಗೆ ಬಂದು ಲಾಕ್ ಡೌನ್ ನಿಂದಾಗಿಸಿಲುಕಿಕೊಂಡಿದ್ಡದರು. ಈ ಪೈಕಿ 7 ಜನರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದರೆ, ಕೆಲವು ವಿಧ್ಯಾರ್ಥಿಗಳು, ಹೋಟೆಲ್ ಕಾರ್ಮಿಕರು, ದಾದಿಯರು ಒಳಗೊಂಡಿಉ.
ಬಸ್ ಬೊರಿವಲಿ ಪಶ್ಚಿಮದ ಲಿಂಕ್ ವಿವ್ಹ್ ಹೋಟೆಲ್ ನಿಂದ ಹೊರಟಿದ್ದು ಈ ಸಂದರ್ಭದಲ್ಲಿ ಸಂಸದ ಗೋಪಾಲ ಶೆಟ್ಟಿ, ಎರ್ಮಾಳ್ ಹರೀಶ್ ಶೆಟ್ಟಿ, ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮುಂಡಪ್ಪ ಪಯ್ಯಡೆ, ರವೀಂದ್ರ ಎಸ್. ಶೆಟ್ಟಿ, ಮಂಜುನಾಥ ಬನ್ನೂರು, ಪ್ರಕಾಶ್ ಶೆಟ್ಟಿ (ಎಲ್ಐಸಿ) ಸಚ್ಚಿದಾನಂದ ಶೆಟ್ಟಿ, ನೀಲೇಶ್ ಶೆಟ್ಟಿ, ಕಾರ್ತಿಕ್ ಹರೀಶ್ ಶೆಟ್ಟಿ, ಮಹೇಶ್ ಶೆಟ್ಟಿ ಪೊಯಿಸರ್, ಸಂಕೇಶ್ ಶೆಟ್ಟಿ ಮತ್ತಿರರು ಉಪಸ್ಥಿತರಿದ್ದು ಪ್ರಯಾಣಿಕರಿಗೆ ಗಶುಭ ಹಾರೈಸಿದರು.