ಮುಂಬಯಿ, ಮೇ.14: ಒಂದು ಶತಮಾನಕ್ಕೂ ಮಿಕ್ಕಿ ಮಹಾರಾಷ್ಟ್ರದಾದ್ಯಂತ ವಿಶೇಷವಾಗಿ ಮುಂಬಯಿ, ಪುಣೆ, ನಾಸಿಕ್ ಇನ್ನಿತರ ಮಹಾನಗರಗಳನ್ನು ಕರ್ಮಭೂಮಿಯನ್ನಾಗಿಸಿ ಕೊಂಡು ಬದುಕನ್ನು ಕಟ್ಟಿಕೊಂಡ ಕನ್ನಡಿಗರನ್ನು ತಮ್ಮ ಸ್ವಂತಃ ಹುಟ್ಟೂರ ಬಂಧುಗಳೇ ಮುಂಬಯಿಗರನ್ನು (ಅನಿವಾಸಿ ಕನ್ನಡಿಗರನ್ನು) ಕೋವಿಡ್ ರೋಗಿಗಳೆಂದು ಬಿಂಬಿಸಿ ತವರೂರಿಗೆ ಬರುವುದಕ್ಕೆ ಆಕ್ಷೇಪ ವ್ಯಕ್ತ ಪಡಿಸುತ್ತಿರುವುದು ಸರಿಯಲ್ಲ. ಮುಂಬಯಿವಾಸಿ ಕನ್ನಡಿಗರಿಗೆ ರಾಜ್ಯ ಸರಕಾರ ಹುಟ್ಟೂರಿನ ಜನತೆ ಆತ್ಮೀಯರಾಗಿ ಸ್ಪಂದಿಸುವಂತಾಗಲಿ ಎಂದು ಬೃಹನ್ಮುಂಬಯಿ ಅಲ್ಲಿನ ಹಿರಿಯ ತುಳು-ಕನ್ನಡಿಗ ರಾಜಕೀಯ ಧುರೀಣ, ಎನ್‍ಸಿಪಿ ಪಕ್ಷದ ಉತ್ತರ ಮಧ್ಯ ಜಿಲ್ಲಾ ನಿರೀಕ್ಷಕ ಹಾಗೂ ಎನ್‍ಸಿಪಿ ಮುಂಬಯಿ ಉಪಾಧ್ಯಕ್ಷ ಲಕ್ಷ ್ಮಣ ಸಿ.ಪೂಜಾರಿ ಚಿತ್ರಾಪು ತಿಳಿಸಿದ್ದಾರೆ.
ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ವಲಸೆ ತುಳುಕನ್ನಡಿಗರ ಸಹಾಯಕ್ಕೆ ಮಹಾರಾಷ್ಟ್ರದ ಎನ್‍ಸಿಪಿ ವರಿಷ್ಠ ನಾಯಕ ಶರದ್ ಪವಾರ್, ಉಪಮುಖ್ಯಮಂತ್ರಿ (ಎನ್‍ಸಿಪಿ ನಾಯಕ) ಅಜಿತ್ ಪವಾರ್ ತಮ್ಮ ಸಹಮತ ವ್ಯಕ್ತ ಪಡಿಸಿದೆ. ಅಪೇಕ್ಷಿತ ತುಳು-ಕನ್ನಡಿಗರನ್ನು ಅತೀ ಶೀಘ್ರವಾಗಿ ತಮ್ಮತಮ್ಮ ಊರಿಗೆ ಕಳುಹಿಸುವ ಮಾತುಕತೆ ಇದೀಗಲೇ ನಡೆಸಿದ್ದು ಅದಕ್ಕಾಗಿ ಮಹಾರಾಷ್ಟ್ರದ ಸಾರಿಗೆ ಸಚಿವ ಅನಿಲ್ ಪರಬ್ ಇವರು ಎಂಎಸ್‍ಆರ್‍ಟಿ ತನ್ನ ಸಹಮತ ವ್ಯಕ್ತಪಡಿಸಿ ಶೀಘ್ರವಾಗಿ ಮುಂಬಯಿ ಮಂಗಳೂರು, ಬೆಂಗಳೂರು ಇನ್ನಿತರ ನಗರಗಳಿಗೂ ನೇರ ಬಸ್ ಸಂಚಾರ ಆರಂಭಿಸುವಲ್ಲಿ ಸಿದ್ಧತೆ ನಡೆಸುತ್ತಿದೆ. ಈ ಬಗ್ಗೆ ಇಲ್ಲಿನ ಕನ್ನಡಿಗರ ಮುಖಂಡರಲ್ಲಿ ನಮ್ಮ ನಿರಂತರ ಮಾತುಕತೆ ನಡೆಯುತ್ತಿದೆ ಎಂದು ಲಕ್ಷ ್ಮಣ ಪೂಜಾರಿ ತಿಳಿಸಿದ್ದಾರೆ.
ಸದ್ಯ ಇಲ್ಲಿನ ಕನ್ನಡಿಗರಲ್ಲಿ ಇಂತಹ ಸೋಂಕಿತರ ಪ್ರಕರಣಗಳೇ ಇಲ್ಲ. ಆದ್ದರಿಂದ ಆಸಕ್ತ ಕನ್ನಡಿಗರನ್ನು ಅವರವರ ಊರಿಗೆ ಶೀಘ್ರವೇ ಬರಮಾಡಿ ಕೊಳ್ಳುವ ಪ್ರಯತ್ನ ಕರ್ನಾಟಕ ಸರಕಾರ ಮಾಡಬೇಕು. ಕಾಲ ಮಿಂಚಿದ ಮೇಲೆ ಚಿಂತಿಸಿ ಪ್ರಯೋಜನ ಆಗದು. ಕನ್ನಡಿಗರು ಊರಿಗೆ ತಲುಪಿದ ತಕ್ಷಣ ಇವರಿಗೆಲ್ಲರಿಗೂ ಒಂದುಪಕ್ಷ ಇಂತಹ ಸಾಂಕ್ರಮಿಕ ಸೋಂಕು ಕಾಣಿಸಿದ್ದಲ್ಲಿ ಅವರಿಗೆ ಆರೋಗ್ಯ ತಪಾಸಣೆ, ಕೋವಿಡ್ ಚಿಕಿತ್ಸೆ ನಡೆಸಲಿ ಇದಕ್ಕೆ ನಮ್ಮ ಯಾರದ್ದೇ ಅಡ್ಡಿವಿಲ್ಲ ಆದರೆ ಅಸ್ಪ್ರಶ್ಯರಂತೆ ಕಾಣದಿರಿ. ಇದು ನಿಮ್ಮಲ್ಲಿ ಮಾನವೀಯತೆಯ ಸ್ಪಂದನೆ ಎದ್ದು ಕಾಣಲಿ. ಕರ್ನಾಟಕ ಸರಕಾರ, ಜಿಲ್ಲಾಡಳಿತದ ಅನಿವಾಸಿ ಕನ್ನಡಿಗರಲ್ಲಿ ಮಲತಾಯಿ ಧೋರಣೆ ತೋರಿಸುತ್ತಿರುವ ಬಗ್ಗೆ ತಿಳಿಯಲಾಗುತ್ತಿದ್ದು, ಇದು ನಿಮ್ಮ ಬಂಧುಗಳಿಗೆ ನೀಡುವ ದೈಹಿಕ ಮತ್ತು ಮಾನಸಿಕ ಹಿಂಸೆಯೇ ಸರಿ ಎಂದು ಲಕ್ಷ ್ಮಣ ಪೂಜಾರಿ ಆರೋಪಿಸಿದ್ದಾರೆ. ಮುಂಬಯಿಗರೂ ಆದಷ್ಟು ಸಂಯಮದಿಂದ ಇದ್ದು ಶೀಘ್ರವೇ ಮಹಾರಾಷ್ಟ್ರ ಸರಕಾರ, ಜಿಲ್ಲಾಡಳಿತ ಒದಗಿಸುವ ಸೇವೆಗೆ ಸಹಕರಿ ಸುವಂತೆಯೂಲಕ್ಷ ್ಮಣ ಪೂಜಾರಿ ವಿನಂತಿಸಿದ್ದಾರೆ.