Saturday 10th, May 2025
canara news

ಕಷ್ಟದ ಕಾಲದ ಸ್ಪಂದನೆ ತುಳುನಾಡ-ತುಳುವರ ಮಣ್ಣಿನ ಗುಣವಾಗಿದೆ

Published On : 16 May 2020   |  Reported By : Rons Bantwal


ಅನಿವಾಸಿ ಬಂಧುಗಳನ್ನು ಅಸ್ಪ ೃಶ್ಯರರಂತೆ ಕಾಣದಿರಿ-ಕೇಮಾರು ಸ್ವಾಮೀಜಿ

ಮುಂಬಯಿ (ಮೂಡುದಿರೆ), ಮೇ.15: ವಿಶ್ವದಾದ್ಯಂತ ತಾಂಡವವಾಡುತ್ತಿರುವ ಕೊರೋನಾ ಮಹಾ ಮಾರಿಯಿಂದ ಜನರಲ್ಲಿ ಭಯ, ಆತಂಕಗಳು, ಸಾಂಕ್ರಮಿಕರೋಗ, ಕಾಯಿಲೆ ಬಗ್ಗೆ ಅನುಮಾನಗಳು ಉಂಟಾಗಿರುವುದು ಸರ್ವೇ ಸಾಮಾನ್ಯ. ಆದರೆ ಕಷ್ಟಕಾಲದಲ್ಲಿನ ಜನತೆಗೆ ಪರೋಪಕಾರಗೈಯುವÀ ಸದ್ಗುಣ ನಮ್ಮ ತುಳುವರದ್ದಾಗಿದೆ. ಇದು ತುಳುನಾಡ ಮಣ್ಣಿನ ಗುಣವೂ ಆಗಿದ್ದರಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಅರ್ಥಾತ್ ತುಳುನಾಡು ಈ ಮಟ್ಟದ ಬೆಳವಣಿಗೆ, ವಿಶ್ವವ್ಯಾಪಿ ಪ್ರಸಿದ್ಧಿ ಪಡೆದಿದ್ದರೆ ಅದಕ್ಕೆ ಮೂಲ ಕಾರಣರೇ ನಮ್ಮ ಬಂಧುಗಳ ವಲಸೆ ಜೀವನ ಮತ್ತು ಅನಿವಾಸಿ ತುಳು ಕನ್ನಡಿಗರ ತ್ಯಾಗಮಯ ಬದುಕಾಗಿದೆ. ಇದನ್ನು ನಾವೆಲ್ಲರೂ ಮಗದೊಮ್ಮೆ ಪ್ರದರ್ಶಿಸಿ ಇದನ್ನು ಗೌರವ್ವಾನಿತ ಸ್ಥಾನದಲ್ಲಿ ಕಾಪಾಡಿ ಕೊಳ್ಳುವ ಅಗತ್ಯವಿದೆ ಎಂದು ಮೂಡಬಿದ್ರಿ ಕೇಮಾರು ಸಂದೀಪನಿ ಸಾಧನಾಶ್ರಮದ ಮಠಾಧೀಶ ಶ್ರೀ ಈಶ ವಿಠಲದಾಸ ಸ್ವಾಮೀಜಿ ಅಭಿಪ್ರಾಯ ಪಟ್ಟಿದ್ದಾರೆ.

ನಮ್ಮ ಹಿರಿಯರು ತಮ್ಮ ಜೀವನವನ್ನು ಅಡವಿಟ್ಟು, ಬಡತನ ನಿವಾರಿಸಿಕೊಳ್ಳುತ್ತಾ ಉದರ ಪೆÇೀಷಣೆಯ ಉದ್ದೇಶವಾಗಿಸಿ ಕೌಟುಂಬಿಕ ಬದುಕಿನ ಹಂಗು ತೊರೆದು ಕುಟುಂಬಸ್ಥರ ಬದುಕನ್ನು ಭದ್ರಗೊಳಿಸುತ್ತಾ ಬದುಕು ಕಂಡುಕೊಳ್ಳಲು ಮುಂಬಯಿ ಅಲ್ಲದೆ ದುಬಾಯಿಗಳಂತ ಗಲ್ಫ್‍ಗೂ ಸೇರಿದವರು. ಅವರ ಅವಿರತ ಶ್ರಮದಿಂದಾಗಿಯೇ ಇಂದು ನಮ್ಮೂರ ಬಂಧುಗಳ ಮುಂಜಿ ಮದುವೆ, ಬಯಕೆ ಇತ್ಯಾದಿಗಳನ್ನು ಗಮ್ಮತ್ತಾಗಿಸಿದ್ದಾರೆ. ಜೊತೆಗೆ ನಮ್ಮಲ್ಲಿನ ದೇವಸ್ಥಾನ, ಗೋಪುರ, ಗುಡಿ, ಶಾಲೆಕಾಲೇಜುಗಳು, ಶಾಲಾ ಅವರಣ, ವೇದಿಕೆಗಳು, ಬಸ್‍ಸ್ಟ್ಯಾಂಡ್ ನಿರ್ಮಾಣ, ಭೂತಕೋಲ ಇನ್ನಿತರ ಹತ್ತಾರು ಧಾರ್ಮಿಕ ಕೈಂಕರ್ಯಗಳ ಕೆಲಸಕ್ಕೂ ಇವರಿಂದಲೇ ಕಾಡಿಬೇಡಿ ಹಣ ಒಗ್ಗೂಡಿಸಿದ್ದನ್ನು ನಮ್ಮಜನತೆ ಏಕಾಏಕಿ ಮರೆಯುತ್ತಿರುವುದು ಸರಿಯಲ್ಲ. ಅವರೆಲ್ಲರೂ ನಮ್ಮ ಕರಳುಬಳ್ಳಿಯ ರಕ್ತ ಸಂಬಂಧಿಗಳು ಮತ್ತು ಬಂಧುಗಳೇ ಆಗಿದ್ದಾರೆ ಆದ್ದರಿಂದ ನಮ್ಮೂರ ಜನರು ಸ್ವಯಂಪ್ರೇರಿತರಾಗಿ ಇವೆಲ್ಲವನ್ನೂ ತಿದ್ದಿಕೊಂಡು ನಮ್ಮೆಲ್ಲರ ಅಭಿವೃದ್ಧಿಗೆ ಪ್ರೇರಕರೂ, ಪೆÇ್ರೀತ್ಸಹಕರಾದ ಅನಿವಾಸಿ ತುಳು ಕನ್ನಡಿಗರನ್ನು ವಿಶೇಷವಾಗಿ ಮುಂಬಯಿನಿಂದ ಬರುವ ಜನರ ಸಂಷ್ಟದ ದಿನಗಳ ಆಗಮನವನ್ನು ವಿರೋಧಿಸದೆ ಎಲ್ಲರನ್ನೂ ಸ್ವಯಂಪ್ರೇರಿತರಾಗಿ ಆಹ್ವಾನಿಸಿ ಆತ್ಮೀಯತೆಯಿಂದ ಗೌರವಯುತ -ವಾಗಿ ಸ್ವಾಗತಿಸಿ ಪುರಸ್ಕರಿಸಬೇಕು ಎಂದು ಕೇಮಾರುಶ್ರೀಗಳು ನಾಡಿನ ಸಮಸ್ತ ಜನತೆಗೆ ಕರೆಯನ್ನೀಡಿದ್ದಾರೆ.

ಈ ಹಿಂದೆಯೂ ಕೊಲೆರಾ, ದಡಾರಾ, ಸಾರ್ಸ್, ಪ್ಲೇಗ್‍ಗಳಂತಹ ಅದೆಷ್ಟೋ ಸಾಂಕ್ರಮಿಕ ರೋಗಗಳು ಬಂದು ಇತಿಹಾಸದ ಪುಟಗಳಲ್ಲಿ ಸೇರಿವೆ. ಕೊರೋನಾ ಅನ್ನುವುದು ಕೂಡಾ ಸ್ವಯಂಕೃತ ಅಪರಾಧವಲ್ಲ ಅದೊಂದು ವೈರಸ್‍ನಿಂದ ಬಂದಂತ ಮಹಾಮಾರಿ. ಆದ್ದರಿಂದ ಕರ್ಮಭೂಮಿಯನ್ನಾಗಿಸಿ ಬದುಕನ್ನು ಕಟ್ಟಿಕೊಂಡ ಅನಿವಾಸಿ ತುಳು ಕನ್ನಡಿಗರನ್ನು ತಮ್ಮ ಸ್ವಂತಃ ಹುಟ್ಟೂರ ಬಂಧುಗಳೇ ನಮ್ಮವರನ್ನೇ ಮಹಾಮಾರಿ ರೋಗಿಗಳೆಂದು ಬಿಂಬಿಸಿ ತವರೂರಿಗೆ ಬರುವುದಕ್ಕೆ ಆಕ್ಷೇಪ ವ್ಯಕ್ತ ಪಡಿಸುತ್ತಿರುವುದು ಸರಿಯಲ್ಲ. ಇವೆಲ್ಲವನ್ನೂ ಸಮಾಜಕಂಠಕ ಶಕ್ತಿಗಳು, ಸಾಮಾಜಿಕ ಮುಖಂಡರು ಸ್ವಯಂಪ್ರೇರಿತರಾಗಿ ತಿಳಿದು ಮೌಢÀ್ಯತೆ ಮುಕ್ತವಾಗಿಸಬೇಕಾಗಿದೆ. ಯಾವನೇ ಅನಿವಾಸಿಗರನ್ನು ಅಸ್ಪೃಶ್ಯರರು, ಭಯೋತ್ಪಧಕರು, ಉಗ್ರರು, ಕೊಲೆಗಾರರಂತೆ ತೀರಾ ಕೀಳುರೀತಿಯಲ್ಲಿ ಕಾಣುವುದು ಉಚಿತವಲ್ಲ. ನಮ್ಮವರ ಸಂಬಂಧಗಳ ಕನಿಷ್ಟ ಭಾವನಾತ್ಮಕತೆ ನಾವು ಗಾಢವಾಗಿ ತಿಳಿಯಲೇಬೇಕು ಇಲ್ಲವಾದರೆ ಸ್ವಲ್ಪ ದಿನಗಳಲ್ಲಿ ಕೊರೋನ ಮಾಯ ಆಗಬಹುದು ಆದರೆ ನಮ್ಮನಮ್ಮ ಮಧ್ಯೆಯೇ ಕೌಟುಂಬಿಕ, ಸಾಮಾಜಿಕ ಬಿರುಕು ಉದ್ಭವಿಸಿ ಇದು ಜೀವನದುದ್ದಕ್ಕೂ ಮಾಸಿ ಹೋಗದ ಕರಿ ನೆನಪುವಾಗಿ ಪರಿಣಮಿಸಬಲ್ಲದು. ಪರೋಪಕಾರ, ಕಷ್ಟದ ಕಾಲದಲ್ಲಿನ ಸ್ಪಂದನೆ ತುಳುವರ ಮತ್ತು ತುಳುನಾಡ ಮಣ್ಣಿನ ಗುಣವಾಗಿದೆ ಇದನ್ನೆಲ್ಲ ಇಂತಹ ಸಂಧಿಗ್ಧ ಕಾಲದಲ್ಲಿ ಮೆರೆದು ಅನಿವಾಸಿ ಬಂಧುಗಳನ್ನು ಗೌರವಿಸುವ ಅಗತ್ಯವಿದೆ ಎಂದೂ ಕೇಮಾರುಶ್ರೀಗಳು ಜನತೆಗೆ ಎಚ್ಚರಿಸಿದ್ದಾರೆ.

ಅವರೆಲ್ಲರೂ ಅವಿರತ ಶ್ರಮದಿಂದ ದುಡಿದ ಗಳಿಕೆಯ ಬಹುಭಾಗವನ್ನು ನಮಗೆ ತಂದುಕೊಟ್ಟ ಕಾರಣ ನಾವು ಇಂದು ಈ ಮಟ್ಟದಲ್ಲಿ ಬೆಳೆದಿರುವುದನ್ನು ಯೋಜಿಸಬೇಕು. ನಮ್ಮಂತಹ ಸಾಧುಸಂತರು ಮುಂಬಯಿಗೆ ಆಗಮಿಸುವ ವೇಳೆಗೆ ತಾವೆಲ್ಲರೂ ಬರಮಾಡಿ ಕೊಂಡು ಹಿಂದೆ ಕಳುಹಿಸಿ ಕೊಡುವ ಶ್ರದ್ಧೆಯೇ ನಮ್ಮೂರವರ ನಿಮ್ಮ ಕಳಕಳಿ ತೋರುವುದನ್ನೂ ನಾವು ಮರೆಯಬಾರದು. ಅನಿವಾಸಿಗರ ಪ್ರಾಮಾಣಿಕ, ಉದಾರತೆಯ ದೇಣಿಗೆ, ಮುಂಬಯಿ, ಗಲ್ಫ್‍ನ ಹಣದಿಂದಲೇ ನಮ್ಮ ನಾಡಿನ ಬಹುತೇಕ ಅಭಿವೃದ್ಧಿ ಸಾಧ್ಯವಾಗಿದೆ. ಆದ್ದರಿಂದ ಪರೋಪಕಾರಿಗಳಾಗಿ ನಮ್ಮನ್ನೆಲ್ಲಾ ಪೆÇ್ರೀತ್ಸಾಹಿಸಿದ ನಮ್ಮ ಬಂಧುಗಳಿಗೆ ಸ್ವಯಂಪ್ರೇರಿತರಾಗಿ ಸಹಕರಿಸಬೇಕು. ಭವಿಷ್ಯದ ದಿನಗಳಲ್ಲೂ ನಮ್ಮಲ್ಲಿನ ಪ್ರತೀಯೊಂದು ಕೆಲಸ, ಯೋಜನೆಗಳಿಗೂ ಈ ವಿದೇಶಿಗರ, ಅನಿವಾಸಿಗರ ಸಹಕಾರವೇ ವರವಾಗ ಬಲ್ಲದು. ಆದ್ದರಿಂದ ಇವರೆಲ್ಲರನ್ನೂ ಗೌರವಿಸಿ ಪ್ರೀತಿಯಿಂದ ಕಾಣುವ ಜವಾಬ್ದಾರಿ ಊರಿನ ಪ್ರತೀಯೋರ್ವರದ್ದಾಗಿದೆ. ಕ್ವಾರಂಟೈನ್ ಅಂದರೆ ಶಿಕ್ಷೆಯಲ್ಲ ತಮಗೂ ತಮ್ಮ ಪರಿವಾರಕ್ಕೂ ಈ ಬಗೆಗಿನ ತತ್ಸರ, ಮಲತಾಯಿ ಧೋರಣೆಗಳು ಸಲ್ಲದು.

ಅನಿವಾಸಿ ತುಳು ಕನ್ನಡಿಗರ ಅನಿಸಿಕೆಯಂತೆ ಕೊರೊನಾ ಮಾರಿಕ್ಕಿಂತ ಊರಿನ ಜನತೆ, ಜಿಲ್ಲಾಡಳಿತದ ಕಿರಿಕಿರಿ, ಅವಮಾನವೇ ನಮಗೆ ಬಹುದೊಡ್ಡ ಭೀತಿ, ಭಿಮಾರಿ ಆಗಿದೆ. ಊರಿನ ಜನತೆ, ಅಧಿಕಾರಿಗಳೇ ನಮ್ಮನ್ನೆಲ್ಲ ಅಸ್ವಸ್ಥರು (ರೋಗಿಗಳು) ಎಂದೇ ದೃಢಪಡಿಸಿ ಕೊಂಡು ಅವರೊಂದಿಗೆ ನಾವು ಜೊತೆಗೂಡಿ ಬಾಳಲು ನಿರಾಕರಿಸುತ್ತಿರುವುದೇ ಊರವರಲ್ಲಿನ ಸ್ವಾರ್ಥಕ್ಕೆ ಸಾಕ್ಷಿಯಾಗಿದೆ ಅನ್ನುತ್ತಿರುವುದು. ಸ್ವತಃ ಜನ್ಮವೆತ್ತ ತಂದೆತಾಯಿ, ಒಡಹುಟ್ಟಿದ ಅಣ್ಣತಮ್ಮ, ಅಕ್ಕತಂಗಿಯರಿಗೂ ನಾವು ಬೇಡವಾಗಿ ಪರಿಣಮಿಸಿದಂತಿದೆ ಅಂದಾಗ ನಮಗೂ ಬೇಸರ ಅಣಿಸುತ್ತಿದೆ. ಆದ್ದರಿಂದ ನಮ್ಮವರನ್ನೇ ನಾವೂ ಬೇರೆಯೇ ದೃಷ್ಟಿಕೋನದಿಂದ ಕಾಣುವುದು ಸರಿಯಲ್ಲ. ಆದರೆ ಇಂತಹ ಪರಿಸ್ಥಿತಿಯಲ್ಲಿ ನಾವೆಲ್ಲರೂ ಗಾಢವಾಗಿ ಚಿಂತನಶೀಲರಾಗಿ ವಿಚಾರ ವಿನಿಮಯ ಮಾಡಬೇಕಾಗಿದೆ. ಸದ್ಯ ಯಾರು ಯಾರನ್ನು ತಿದ್ದುವುದು ಅನ್ನುವುದೇ ಈಗ ಯಕ್ಷಪ್ರಶ್ನೆಯಾಗಿದೆ. ಜನರನ್ನು ಮನವರಿಸುವುದೇ ದೊಡ್ಡ ಸಾಧನೆಯಗುತ್ತಿದೆ ಎಂದೂ ಶ್ರೀಗಳು ವ್ಯಥೆ ವ್ಯಕ್ತಪಡಿಸಿದ್ದಾರೆ.

ಸರಕಾರ, ಜಿಲ್ಲಾಡಳಿತಗವೂ ಜನತೆಯ ಹಿತದೃಷ್ಟಿಯಿಂದ ಸ್ವಸ್ಥ ಸಮಾಜದ, ಆರೋಗ್ಯದ ಉದ್ದೇಶದಿಂದ ನಿಗಾ ಇರಿಸುವ ಸಲುವಾಗಿ ಸರಕಾರ ಕೈಗೊಂಡ ಕ್ರಮವಷ್ಟೇ ಕ್ವಾರಂಟೈನ್. ಆದ್ದರಿಂದ ಊರವರು (ಸಾರ್ವಜನಿಕರು) ವಿನಃ ಕಾರಣ ಭಯಪಟ್ಟು ಕೊಳ್ಳುವ ಅಗತ್ಯವಿಲ್ಲ. ಇವರೆಲ್ಲರೂ ದೇಶದ ಇತರ ರಾಜ್ಯಗಳಲ್ಲಿ ನೆಲೆಸಿ ಸದ್ಯ ಊರಿಗೆ ಬರುವವರ (ಇಲ್ಲವಾರದೂ ಎಪ್ರಿಲ್‍ನಿಂದ ಜೂನ್ ತನಕ ಇವರೆಲ್ಲರೂ ನಮ್ಮೊಂದಿಗೆನೇ ಸಂಭ್ರಮದಲ್ಲಿರುತ್ತಿದ್ದರು) ವಿರುದ್ಧ ಹರಿಹಾಯ್ದು ನಿಷ್ಠುರತನ ಕಟ್ಟಿ ಕೊಳ್ಳುವುದು ಸರಿ ಕಾಣದು. ಊರಿಗೆ ಆಗಮಿಸುವ ಅನಿವಾಸಿಗರೂ ಸ್ವಯಂ ಪ್ರೇರಿತರಾಗಿ ಸಂಯಮ ಕಾಪಾಡಿಕೊಂಡು ಕೇಂದ್ರ ಸರಕಾರವೇ ನೀಡಿರುವ ಆದೇಶಗಳನ್ನು ಪರಿಪಾಲಿಸಿ ಸರಕಾರ ಒದಗಿಸುವ ಕನಿಷ್ಟ ದಿನಗಳ ದಿಗ್ಬಂಧನಕ್ಕೆ ಬದ್ಧರಾಗಿ ಜಿಲ್ಲಾಡಳಿತದ ವ್ಯವಸ್ಥೆಗೆ ಸಹಕರಿಸುವಂತೆಯೂ ಕೇಮಾರುಶ್ರೀ ವಿನಂತಿಸಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here