ಮುಂಬಯಿ (ಬಂಟ್ವಾಳ), ಮೇ.15: ಜಿಲ್ಲೆಯಲ್ಲಿ ಈವರಗೆ ಐದು ಮಂದಿ ಕೊರೊನಾ ಸೊಂಕು ತಗುಲಿ ಸಾವನ್ನಪ್ಪಿದ್ದಾರೆ ಇದು ಅತ್ಯಂತ ದುಖಃಕರ ವಿಚಾರ, ಇಂತಹ ಘಟನೆಗಳು ಮುಂದಿನ ದಿನಗಳಗಲ್ಲಿ ಮರುಕಳಿಸಿದಿರಲಿ ಎಂದು ಮಂಗಳೂರು ಶಾಸಕ ಯು.ಟಿ ಖಾದರ್ ಅವರು ಹೇಳಿದರು.
ಖಾದರ್ ಅವರು ಪರಂಗಿಪೇಟೆ ಇಲ್ಲಿನ ಸೇವಾಂಜಲಿ ಪ್ರತಿಷ್ಠಾನ ಸಭಾಭವನದಲ್ಲಿ ಅವರ ವೈಯಕ್ತಿಕ ನೆಲೆಯಲ್ಲಿ ತುಂಬೆ, ಮೇರೆಮಜಲು, ಪುದು ಮತ್ತು ಕಳ್ಳಿಗೆ ಕ್ಲಸ್ಟರ್ ಮಟ್ಟದ ಅಂಗನವಾಡಿ ಕಾರ್ಯಕರ್ತೆ ಯರಿಗೆ, ಸಹಾಯಕಿಯರಿಗೆ ಹಾಗೂ ಅಕ್ಷರ ದಾಸೋಹದ ಅಡುಗೆ ಕೆಲಸಗಾರರಿಗೆ ಕಿಟ್ ವಿತರಿಸಿ ತಿಳಿಸಿ ಕೊರೊನಾ ಸೊಂಕು ಬಗ್ಗೆ ಅತ್ಯಂತ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ವಹಸಿ ಬೇಕು ಆದರೆ ಭಯಬೇಡ. ಎಲ್ಲರೂ ಸೇರಿ ಕೊರೊನಾ ವಿರುದ್ದ ಹೋರಾಡಬೇಕಾಗಿದೆ ಈ ಸಂದರ್ಭದಲ್ಲಿ ನಮಗಾಗಿ ಸೇವೆ ಮಾಡುತ್ತಿರುವ ಎಲ್ಲಾ ಸೇವಕರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.
ಪುದು ಗ್ರಾ.ಪಂ.ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಅಧ್ಯಕ್ಷ ತೆ ವಹಸಿದ್ದು, ಮಾಜಿ ಜಿ.ಪಂ.ಸದಸ್ಯ ಉಮ್ಮರ್ ಫಾರೂಕ್ ಪ್ರಸ್ತಾವಿಕವಾಗಿ ಮಾತನಾಡಿ ಕೊರೊನಾ ಸಂಕಷ್ಟದ ಅವಧಿಯಲ್ಲಿ ಸಮಾಜದ ಎಲ್ಲಾ ವರ್ಗದ ಜನರಿಗೆ ಮತ್ತು ಕೊರೊನಾ ವಾರಿಯರ್ಸ್ ಗಳಿಗೆ ಮಂಗಳೂರು ಶಾಸಕ ಯು.ಟಿ.ಖಾದರ್ ಅವರು ವೈಯಕ್ತಿಕ ನೆಲೆಯಲ್ಲಿ ಕಿಟ್ ವಿತರಿಸಿದ್ದಾರೆ . ಸಂಕಷ್ಟದ ಅವಧಿಯಲ್ಲಿ ಯಾರಿಗೂ ತೊಂದರೆ ಯಾಗಬಾರದು ಎಂಬುದೇ ಅವರ ಉದ್ದೇವಾಗಿದೆ ಎಂದರು.
ಈ ಸಂದರ್ಭದಲ್ಲಿ ಸೇವಾಂಜಲಿ ಟ್ರಸ್ಟ್ ನ ಸಂಚಾಲಕ ಕೃಷ್ಣ ಕುಮಾರ್ ಪೂಂಜಾ, ಉದ್ಯಮಿ ಮಹಾಬಲ ರೈ, ಗ್ರಾ.ಪಂ ಸದಸ್ಯ ಭಾಸ್ಕರ್ ರೈ, ಮೊಹಮ್ಮದ್ ಮೋನು ಫರಂಗಿಪೇಟೆ, ಫೈಝಲ್ ಅಮ್ಮೆಮ್ಮರ್, ವೃಂದ ಪೂಜಾರಿ ಮೇರಮಜಲು ಗ್ರಾ. ಪಂ ಮಾಜಿ ಅಧ್ಯಕ್ಷರು, ಇಮ್ತಿಯಾಜ್ ತುಂಬೆ ಮುಡಿಪು ಬ್ಲಾಕ್ ಅಧ್ಯಕ್ಷ, ಮಜೀದ್ ಪೆರಿಮಾರ್ ಯುವ ಕಾಂಗ್ರೆಸ್ ಮುಖಂಡರು ಪುದು, ಸಮೀಜ್ ಫರಂಗಿಪೇಟೆ ಸಾಮಾಜಿಕ ಜಾಲತಾಣದ ಮುಖಂಡರು, ಇಸ್ಮಾಯಿಲ್ ಹತ್ತು ಮೈಲು, ಅಂಗನವಾಡಿ ಮೇಲ್ವಿಚಾರಕಿ ಸುಜಾತಾ, ಅಂಗವಾಡಿ ಕಾರ್ಯಕರ್ತರ ಅಧ್ಯಕ್ಷೆ ರವಿಕಲಾ, ಪಂಚಾಯತ್ ಸದಸ್ಯ ಇಕ್ಬಾಲ್ ಸುಜೀರ್, ಅಷ್ವಧ್ ಫರಂಗಿಪೇಟೆ, ಬಂಟ್ವಾಳ ಪುರಸಭೆ ಸದಸ್ಯ ಜನಾರ್ಧನ್ ಚೆಂಡ್ತಿಮಾರ್ ಉಪಸ್ಥಿತರಿದ್ದು, ಮೇರೆಮಜಲು ಗ್ರಾ.ಪಂ ಸದಸ್ಯೆ ವೃಂದಾ ಪೂಜಾರಿ ಸ್ವಾಗತಿಸಿ ವಂದಿಸಿದರು.