ಮುಂಬಯಿ, ಮೇ.17: ಮುಂಬಯಿಯ ನಗರದ ಪ್ರಸಿದ್ಧ್ದ ನಾಟ್ಯಾಲಯ ಅರುಣೋದಯ ಕಲಾ ನಿಕೇತನದ ಸ್ಥಾಪಕರಾದ ಸ್ವರ್ಗೀಯ ಗುರು ಎಂ.ಎನ್ ಸುವರ್ಣ ಅರವರ ಧರ್ಮಪತ್ನಿ, ಗುರು ಡಾ| ಮೀನಾಕ್ಷಿ ರಾಜು ಶ್ರೀಯಾನ್ ಇವರ ಮಾತೃಶಿ ಸುಶೀಲ ಮಾಹಬಲಾ ಸುವರ್ಣ (82.) ಕಳೆದ ಶನಿವಾರ ಹೃದಯಘಾತದಿಂದ ಚೆಂಬೂರು ಇಲ್ಲಿನ ಸ್ವಗೃಹದಲ್ಲಿ ನಿಧನ ಹೊಂದಿದರು.
ಮಂಗಳೂರು ಮೂಲ್ಕಿ ಹೆಜ್ಮಾಡಿ ಮೂಲತ: ಸುಶೀಲ ಅವರು ಪಿಟೀಲು ಮತ್ತು ವೀಣೆಯನ್ನು ವಿದ್ಯಾಥಿರ್üಗಳಿಗೆ ಕಲಿಸುತ್ತಾ ಅರುಣೋದಯ ಕಲಾ ನಿಕೇತನ ಸ್ಥಾಪನೆಯ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದ ಅರುಣೋದಯ ಕಲಾ ನಿಕೇತನದ ಅಮ್ಮ ಎಂದೇ ಪ್ರಸಿದ್ಧರಾಗಿದ್ದರು.
ಸಕ್ರಿಯ ಸೇವಾ ಕಾರ್ಯಕರ್ತರು, ಸಮಾಜ ಪರ ಚಿಂತಕರು, ಕಷ್ಟ ಕಾಲದಲ್ಲಿ ಕರೆ ಇಲ್ಲದೆಯೂ ಧಾವಿಸಿ ತನು ಮನ ಧನದ ನೆರವಿನೊಂದಿಗೆ ಸ್ಪಂದಿಸುತ್ತಿದ್ದ ಬೆಲೆ ಕಟ್ಟಲಾಗದ ಅಮೂಲ್ಯ ಮಹಿಳಾ ರತ್ನ ಎಂದೆಣಿಸಿದ್ದರು. ಸರ್ವರಲ್ಲೂ ಸಮಾನತೆಯಿಂದ ಕೂಡಿ ಬಾಳುವ ಬಾಳ್ವೆ ಪರಿಚಯಿಸಿದ ಅವರು ಕನ್ನಡ-ತುಳುನಾಡಿನ ಸಂಪ್ರದಾಯಗಳ ಆಚರಣೆಯನ್ನು,ಜಾನಪದ ಕಲಾ ಸಂಸ್ಕೃತಿಯನ್ನು ಅನಾವರಣ ಗೊಳಿಸಿದ್ದಾರೆ.
ಮೃತರು ಐವರು ಪುತ್ರರು, ಓವ9 ಪುತ್ರಿ, ಹೆಸರಾಂತ ಸಮಾಜ ಸೇವಕ ರಾಜು ಶ್ರೀಯಾನ್ ನಾವುಂದ (ಅಳಿಯ) ಸೇರಿದಂತೆ ಅಪಾರ ವಿದ್ಯಾಥಿರ್üಗಳನ್ನು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.