Saturday 27th, April 2024
canara news

ಗಣ್ಯರನೇಕರ ಹರಸಾಹಸದ ಪ್ರಯತ್ನಕ್ಕೆ ಮಾನವೀಯತೆ ಮೆರೆದ ಜನಪ್ರತಿನಿಧಿಗಳು

Published On : 21 May 2020   |  Reported By : Rons Bantwal


ನಿಪ್ಪಾಣಿಯಿಂದ ತಡೆ ತೆರವು ; ಕರಾವಳಿಯ ಪ್ರಯಾಣಿಕರÀ ಬಿಡುಗಡೆ

ಮುಂಬಯಿ, ಮೇ.21: ಉಪನಗರದ ವಿೂರಾರೋಡ್‍ನಿಂದ ಕಳೆದ ಸೋಮವಾರ ಸಂಜೆ ಬಸ್ ಮೂಲಕ ಮಂಗಳೂರು ಕಡೆ ಹೊರಟು ತಡ ರಾತ್ರಿಯಿಂದ ಕರ್ನಾಟಕ ಮಹಾರಾಷ್ಟ್ರ ಗಡಿಭಾಗ ನಿಪ್ಪಾಣಿಯಲ್ಲಿ ತಡೆ ಹಿಡಿಯಲ್ಪಟ್ಟ ಗರ್ಭಿಣಿಯರು, ಮಹಿಳೆಯರು, ಮಕ್ಕಳನ್ನು ಸೇರಿದಂತೆ ಸುಮಾರು 30 ಮಂದಿ ಪ್ರಯಾಣಿಕರÀು ಬಿಡುಗಡೆ ಗೊಂಡಿರುವರು. ಗಣ್ಯರನೇಕರ ಅವಿರತ ಪ್ರಯತ್ನಕ್ಕೆ ಮಾನವೀಯತೆ ಮೆರೆದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕೊನೆಗೂ ಕರಾವಳಿ ಪ್ರಯಾಣಿಕರ ತಡೆಯನ್ನು ತೆರವು ಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗುಜರಾತ್, ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಮರಳಿರುವÀರಲ್ಲೇ ನೂರಾರು ಪಾಸಿಟಿವ್ ಪ್ರಕರಣಗಳು ಅಲ್ಲದೆ ಗರ್ಭಿಣಿಯಲ್ಲೂ ಪಾಸಿಟಿವ್ ಪತ್ತೆಯಾದ ಕಾರಣ ಸರಕಾರವು ಕಠಿಣ ಕ್ರಮಕೈಗೊಂಡ ಹಿನ್ನಲೆ ಮತ್ತು ಪ್ರಯಾಣಿಕರಲ್ಲಿ ಒಳನಾಡು ಕರ್ನಾಟಕ ಪ್ರವೇಶಿಸುವ ಪಾಸ್ ಇಲ್ಲದ ಕಾರಣವೂ ನಿಪ್ಪಾಣಿಯಲ್ಲಿ ತಡೆ ಹಿಡಿಯಲಾಗಿತ್ತು.

ಮುಂಬಯಿನ ಯುವೋದ್ಯಮಿ ರಿತೇಶ್ ಡಿ.ಪೂಜಾರಿ ತೆರೆಮರೆಯಲ್ಲಿದ್ದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ಸಂಸದ ಬಿಜೆಪಿ ರಾಜ್ಯಾದ್ಯಕ್ಷ ನಳಿನ್‍ಕುಮಾರ್ ಕಟೀಲ್, ಶಾಸಕರಾದ ಉಮನಾಥ ಕೋಟ್ಯಾನ್ (ಮೂಡಬಿದ್ರೆ), ಕೆ.ರಘುಪತಿ ಭಟ್ (ಉಡುಪಿ), ಸಿಎಂ ಕಾರ್ಯದರ್ಶಿ ರವಿ ಕುಮಾರ್ ಮತ್ತಿತರರ ಮೂಲಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಸಂಪರ್ಕಿಸಿ ಏಜೆಂಟರರನ್ನು ನಂಬಿ ಕರಾವಳಿಗೆ ಬಂದ ಪ್ರಯಾಣಿಕರು ಮೋಸ ಹೋದ ಬಗ್ಗೆ ತಿಳಿಸಿದ್ದರು. ಅಲ್ಲದೆ ಆಘಾತಗೊಂಡಿದ್ದರ ಬಗ್ಗೆ ಬಸ್ಸಿನಲ್ಲಿದ್ದ ಪ್ರಯಾಣಿಕರ ಅಳಲನ್ನು ಎಳೆಎಳೆಯಾಗಿ ಬಚ್ಚಿಟ್ಟು ಅಮಾಯಕ ಪ್ರಯಾಣಿಕರನ್ನು ದಂಡಿಸದೆ ಎಲ್ಲರಿಗೂ ತತ್‍ಕ್ಷಣವೇ ಊರಿಗೆ ತಲಪಿಸುವ ವ್ಯವಸ್ಥೆ ಮಾಡಬೇಕೆಂದು ನಮ್ರ ವಿನಂತಿಸಿದ್ದರು ಎನ್ನಲಾಗಿದೆ. ವಿಷಯವನ್ನು ಗಂಭೀರವಾಗಿ ಪಡೆದ ಸಚಿವ ಶ್ರೀನಿವಾಸ ಪೂಜಾರಿ ವಿಶೇಷ ಅನುಮತಿ ಮೇರೆಗೆ ಗಡಿ ದಾಟಲು ಅನುವು ಮಾಡಿಕೊಡಲು ಪ್ರತ್ಯಕ್ಷವಾಗಿ ತುರ್ತು ನೆರವಿಗೆ ಧಾವಿಸಿದ್ದರು ಮತ್ತು ಈ ಪ್ರಯಾಣಿಕರಿಗೂ ತಮ್ಮ ನಿಪ್ಪಾಣಿ ಅಲ್ಲಿನ ಆಪ್ತರ ಮೂಲಕ ಆಹಾರ ವ್ಯವಸ್ಥೆಗೈದು ನೈತಿಕ ಬಲತುಂಬಿ ಧೈರ್ಯಾನ್ನೀಡಿದ್ದರು ಎನ್ನಲಾಗಿದೆ.

ಸದ್ಯ ನಿಪ್ಪಾಣಿ ಬಾರ್ಡರ್ ವಲಸಿಗರ ಪಾಲಿನ ಯುದ್ಧಭೂಮಿಯಂತೆ ಪರಿಣಮಿಸಿದ ಕಾರಣ ಸುಮಾರು ಎರಡುವರೆ ದಿನಗಳಿಂದ ಸಿಕ್ಕಾಕಿಕೊಂಡಿರುವ ಪ್ರಯಾಣಿಕರನ್ನು ಶೀಘ್ರವಾಗಿ ಕರೆಸಿಕೊಳ್ಳುವಂತೆ ಉತ್ತರ ಮುಂಬಯಿ ಬಿಜೆಪಿ ಉಪಾಧ್ಯಕ್ಷ ಎರ್ಮಾಳ್ ಹರೀಶ್ ಶೆಟ್ಟಿ, ಮುಂಬಯಿನ ಯುವೋದ್ಯಮಿ ಮಹೇಶ್ ಶೆಟ್ಟಿ ತೆಲ್ಲಾರ್ ಅವರೂ ಶಾಸಕರಾದ ವಿ.ಸುನೀಲ್ ಕುಮಾರ್ (ಕಾರ್ಕಳ), ಲಾಲಾಜಿ ಮೆಂಡನ್ (ಕಾಪು), ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ (ಐಎಎಸ್), ಜಿಲ್ಲಾ ಅಧಿಕಾರಿಗಳು, ಉನ್ನತ ಪೆÇೀಲಿಸ್ ಅಧಿಕಾರಿಗಳ ಮನವೊಲಿಸಿದ್ದರು. ಈ ಮಧ್ಯೆ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ರೋನ್ಸ್ ಬಂಟ್ವಾಳ್, ವಿಜಯ ಕರ್ನಾಟಕ ಮಂಗಳೂರು ಆವೃತ್ತಿ ಸಂಪಾದಕ ಯು.ಕೆ ಕುಮಾರನಾಥ್, ವಿಜಯ ಕರ್ನಾಟಕ ಬೆಳಗಾವಿ ಆವೃತ್ತಿ ಸಂಪಾದಕ ಮಹಾಂತೇಶ್ ಪಾಟೀಲ್ ಇವರೂ ನಿಪ್ಪಾಣಿಯಲ್ಲಿನ ವಿವಿಧ ಅಧಿಕಾರಿಗಳನ್ನು ನಿರಂತರವಾಗಿ ಸಂಪರ್ಕಿಸುತ್ತಾ ಈ ಪ್ರಯಾಣಿಕರಿಗೆ ಭದ್ರತೆ, ಎಲ್ಲಾ ವ್ಯವಸ್ಥೆಗಳನ್ನಿತ್ತು ಶೀಘ್ರವೇ ಅವರವರ ಊರಿಗೆ ಕರೆಸಿಕೊಳ್ಳುವಂತೆ ಶ್ರಮಿಸಿರುವುದಾಗಿ ಪ್ರಯಾಣಿಕರು ತಿಳಿಸಿದ್ದಾರೆ.

ಸದ್ಯ ಬಿಡುಗಡೆಗೊಂಡು ತವರೂರು ಸೇರಿದ ಪ್ರಯಾಣಿಕರೆಲ್ಲರೂ ನಿಟ್ಟಿಸಿರು ಬಿಟ್ಟಿದ್ದು ಬಿಡುಗಡೆಗಾಗಿ ಸಹಕರಿಸಿ ಮಾನವೀಯತೆ ಮೆರೆದ ಗೀತಾಂಜಲಿ ಸುವರ್ಣ ಕಟಪಾಡಿ, ನಿಲೇಶ್ ಪೂಜಾರಿ ಪಲಿಮಾರು ಹಾಗೂ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಶ್ರಮಿಸಿದ ಸರ್ವರಿಗೂ ಪ್ರಯಾಣಿಕರು ಮತ್ತು ಕುಟುಂಬಸ್ಥರು ವಂದಿಸಿರುವುದಾಗಿ ರಿತೇಶ್ ಡಿ.ಪೂಜಾರಿ ತಿಳಿಸಿದ್ದಾರೆ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here