Thursday 4th, June 2020
canara news

ಸೇವಾಸಿಂಧು ಇ-ಪಾಸ್ ವಿನಃ ಕರ್ನಾಟಕಕ್ಕೆ ಪ್ರಯಾಣಿಸದಿರಿ ಮುಂಬಯಿ ಪ್ರಯಾಣಿಕರಿಗೆ ಸಂಸದ ಗೋಪಾಲ್ ಸಿ.ಶೆಟ್ಟಿ ಕಿವಿಮಾತು

Published On : 21 May 2020   |  Reported By : Rons Bantwal


ಮುಂಬಯಿ, ಮೇ.21: ಒಳನಾಡ ಜನತೆಯ ಆರೋಗ್ಯ ಮತ್ತು ಸಾಮಾಜಿಕ ಸ್ವಸ್ಥತೆಯನ್ನು ಕಾಪಾಡುವ ಹಿತದೃಷ್ಠಿಯಿಂದ ಸರಕಾರವು ಕಠಿಣ ಕ್ರಮಕೈಗೊಂಡ ಹಿನ್ನಲೆಯಲ್ಲಿ ಸದ್ಯ ಕರ್ನಾಟಕ ಸರಕಾರವು ಮಹಾರಾಷ್ಟ್ರದಿಂದ (ಮುಂಬಯಿ) ಒಳನಾಡು ಪ್ರವೇಶಿಸುವ ವಲಸೆಗಾರರು ಅಥವಾ ಅನಿವಾಸಿಗರಿಗೆ ಅವಕಾಶÀ ತಡೆಹಿಡಿದಿದೆ. ಆದ್ದರಿಂದ ಮಹಾರಾಷ್ಟ್ರದಲ್ಲಿನ ವಿಶೇಷವಾಗಿ ಮುಂಬಯಿ, ಪುಣೆಯಿಂದ ಕರ್ನಾಟಕಕ್ಕೆ ತೆರಳಲು ಇಚ್ಫಿಸುವವರು ಯಾವುದೇ ಕಾರಣಕ್ಕೂ ಸೇವಾಸಿಂಧು ಇ-ಪಾಸ್ ಇಲ್ಲದೆ ಪ್ರಯಾಣ ಬೆಳಸದಂತೆ ಉತ್ತರ ಮುಂಬಯಿ ಲೋಕಸಭಾ ಸಂಸದ ಗೋಪಾಲ್ ಸಿ.ಶೆಟ್ಟಿ ಇಲ್ಲಿನ ಸಮಗ್ರ ಕನ್ನಡಿಗರಲ್ಲಿ ಮನವಿ ಮಾಡಿದ್ದಾರೆ.

   

 Gopal C.Shetty (MP)                         Yermal  Harish Shetty

ಗರ್ಭಿಣಿಯರು, ತೀವ್ರ ಅಸ್ವಸ್ಥರು, ಶಸ್ತ್ರಚಿಕಿತ್ಸೆಗೆ ಒಳಗಾಗುವ ರೋಗಿಗಳು, ಮನೆಮಂದಿ ಮರಣ ಹೊಂದಿದಂತಹ ಅತ್ಯವಶ್ಯಕತೆಗೆ ಸರಕಾರದ ಷರತ್ತು ಅನ್ವಯದೊಂದಿಗೆ ವಿಶೇಷ ಅನುಮತಿ ಪಡೆದ್ದಲ್ಲಿ ಮಾತ್ರ ಪ್ರಯಾಣಿಸÀಲು ಅವಕಾಶ ಕಲ್ಪಿಸಲಾಗುವುದು ಎಂದು ಕರ್ನಾಟಕ ಸರಕಾರದ ಸಚಿವರು, ಜನಪ್ರತಿನಿಧಿಗಳು, ಉನ್ನತಾಧಿಕಾರಿಗಳು ಮಹಾರಾಷ್ಟ್ರದಲ್ಲಿನ ಕನ್ನಡಿಗ ಜನಪ್ರತಿನಿಧಿ, ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಉತ್ತರ ಮುಂಬಯಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎರ್ಮಾಳ್ ಹರೀಶ್ ಶೆಟ್ಟಿ ತಿಳಿಸಿದ್ದಾರೆ.

ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಮರಳಿರುವÀರಲ್ಲೇ ನೂರಾರು ಕೋವಿಡ್ ಪಾಸಿಟಿವ್ ಪ್ರಕರಣಗಳು ಅಲ್ಲದೆ ಗರ್ಭಿಣಿಯಲ್ಲೂ ಪಾಸಿಟಿವ್ ಪತ್ತೆಯಾದ ಕಾರಣ ಪ್ರಯಾಣಿಕರಲ್ಲಿ ಒಳನಾಡು ಕರ್ನಾಟಕ ಪ್ರವೇಶಿಸುವ ಇ-ಪಾಸ್ ಕಾರಣಾಂತರದಿಂದ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಆದರೂ ಕಳೆದ ಸೋಮವಾರ ಬಸ್ ಮೂಲಕ ಕರಾವಳಿ ಕಡೆ ಬಂದ ತಂಡ ಸೇರಿದಂತೆ ಅಪಾರ ಸಂಖ್ಯೆಯ ಪ್ರಯಾಣಿಕರು ಇ-ಪಾಸ್ ಇಲ್ಲದೇ ಕರ್ನಾಟಕ ಮಹಾರಾಷ್ಟ್ರ ಗಡಿಭಾಗ ನಿಪ್ಪಾಣಿಯಲ್ಲಿ ಜಮಾಯಿಸಿ ಎಡವಟ್ಟು ಮಾಡಿದ್ದರು. ಆದ್ದರಿಂದ ನಿಪ್ಪಾಣಿ ಗಡಿಭಾಗ ವಲಸಿಗರ ಪಾಲಿನ ಯುದ್ಧಭೂಮಿಯಾಗಿ ಪರಿಣಮಿಸಿತ್ತು. ಅಧಿಕಾರಸ್ಥರಿಗೆ ಕರುನಾಡ ಬಂಧುಗಳಾದ ಪ್ರಯಾಣಿಕರ ತಡೆಯನ್ನು ತೆರವು ಗೊಳಿಸುವುದು ತುಂಬಾ ಕಷ್ಟಕರವಾಗಿತ್ತು. ಆದಕಾರಣ ಮುಂದೆ ಎಲ್ಲರೂ ಸಂಯಮದಿಂದ ಸಹಕರಿಸುವಂತೆ ಕರ್ನಾಟಕ ಸರಕಾರ ಜನತೆಗೆ ಮನವಿ ಮಾಡಿದೆ. ವಲಸೆ ಕಾರ್ಮಿಕರು, ಆಸಕ್ತ ಕನ್ನಡಿಗರನ್ನೆಲ್ಲರನ್ನೂ ಹಂತಹಂತವಾಗಿ ಸರಕಾರವೇ ವ್ಯವಸ್ಥಿತವಾಗಿ ತವರೂರಿಗೆ ಕರೆಸಿ ಕೊಳ್ಳುವ ವ್ಯವಸ್ಥೆ ಶೀಘ್ರಗತಿಯಲ್ಲಿ ಮಾಡಲಿದೆ. ಆದ್ದರಿಂದ ಯಾರೂ ಹತಾಶರಾಗದೆ ನೂತನ ಸೇವೆಗಳು ಜಾರಿಗೆ ಬರುವ ತನಕ ಎಲ್ಲರೂ ತಾಳ್ಮೆಯಿಂದ ಇರುವಂತೆಯೂ ಕೋರಿದ್ದಾರೆ. ಎಲ್ಲರೂ ಏಕಾಏಕೀ ಊರಿಗೆ ಹೊರಟರೆ ವ್ಯವಸ್ಥೆಗಳನ್ನು ಮಾಡುವಲ್ಲೂ ಕಷ್ಟವಾಗಲಿದೆ ಆದ್ದರಿಂದ ಯಾರೂ ಅಸಮಾಧಾನ ವ್ಯಕ್ತ ಪಡಿಸದೆ ಸಂಪೂರ್ಣವಾಗಿ ಸಹಕಾರ ನೀಡುವಂತೆಯೂ ಎರ್ಮಾಳ್ ಹರೀಶ್ ಶೆಟ್ಟಿ ಮನವಿ ಮಾಡಿದ್ದಾರೆ.

ತವರೂರಿಗೆ ಹೋಗಲಿಚ್ಛಿಸುವ ಸರ್ವರೂ ಹೊರಡುವ ಮುನ್ನ ಇದ್ದಲ್ಲಿಂದಲೇ ಭಾರತ ಸರಕಾರದ ಆರೋಗ್ಯಸೇತು ಆ್ಯಪ್‍ನಲ್ಲಿ ಮತ್ತು ಕರ್ನಾಟಕ ಸರಕಾರದ ಸೇವಾಸಿಂಧು ಆ್ಯಪ್‍ನಲ್ಲಿಯೂ ತಮ್ಮ ಕುಟುಂಬದ ಎಲ್ಲಾ ಸದಸ್ಯರ ಹೆಸರುಗಳನ್ನು ಕಡ್ಡಾಯವಾಗಿ ನೋಂದಾಯಿಸಿ ಕೊಳ್ಳಲೇ ಬೇಕು. ಆ ಮುಖೇನ ಸೇವಾಸಿಂಧು ಇ-ಪಾಸ್ ಹೊಂದಿರತಕ್ಕದ್ದು. ಇದರ ವಿನಃ ಯಾರೂ ಎಲ್ಲಿಗೂ ಪ್ರಯಾಣಿಸಲಾಗದು. ಈ ಎರಡು ಮಹತ್ವದ ಹಂತಗಳನ್ನು ಪೂರೈಸದೆ ತಾವು ಎಲ್ಲಿಂದಲೂ (ಮುಂಬಯಿ) ಊರಿನತ್ತ ಹೊರಟರೆ ಮಹಾರಾಷ್ಟ್ರ-ಕರ್ನಾಟಕದ ಗಡಿ ಪ್ರದೇಶ ನಿಪ್ಪಾಣಿಯಲ್ಲಿ ಖಂಡಿತಾವಾಗಿ ತಡೆಹಿಡಿಯಲ್ಪಡುವಿರಿ. ಆವಾಗ ಯಾವುದೇ ರಾಜಕೀಯ ನೇತಾರರು, ಜನಪ್ರತಿನಿಧಿಗಳು ಅಥವಾ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಿ ಏನೂ ಪ್ರಯೋಜನ ಆಗದು ಎಂದೂ ಎರ್ಮಾಳ್ ಹರೀಶ್ ಸಲಹಿದ್ದಾರೆ.
More News

 ಸ್ವಾಸ್ಥ ್ಯ ಸಮಾಜದ ಹೊಣೆ ಎಲ್ಲಾ ನಾಗರಿಕರದ್ದು : ರೋಲ್ಫಿ ಡಿಕೊಸ್ಟಾ
ಸ್ವಾಸ್ಥ ್ಯ ಸಮಾಜದ ಹೊಣೆ ಎಲ್ಲಾ ನಾಗರಿಕರದ್ದು : ರೋಲ್ಫಿ ಡಿಕೊಸ್ಟಾ
ಟ್ರೆಸ್ಸಿ ಡೋಲ್ಫಿ ಮಾರ್ಟಿಸ್ ನಿಧನ
ಟ್ರೆಸ್ಸಿ ಡೋಲ್ಫಿ ಮಾರ್ಟಿಸ್ ನಿಧನ
ಕವತ್ತಾರು ಬಾಲಗುತ್ತು ಅನಿತಾ ಬಿ.ಶೆಟ್ಟಿ ನಿಧನ
ಕವತ್ತಾರು ಬಾಲಗುತ್ತು ಅನಿತಾ ಬಿ.ಶೆಟ್ಟಿ ನಿಧನ

Comment Here