ಮುಂಬಯಿ, ಮೇ.23: ಗುಜರಾತ್‍ನ ಹಿರಿಯ ಹೊಟೇಲು ಉದ್ಯಮಿ, ಸಂಘಟಕ, ಜನಪ್ರಿಯ ಸಮಾಜ ಸೇವಕ ಜಯರಾಮ ಶೆಟ್ಟಿ ಸುರತ್ಕಲ್ ಮಂಗಳೂರು (82.) ಕಳೆದ ಶುಕ್ರವಾರ ರಾತ್ರಿ ಬರೋಡಾ ಇಲ್ಲಿನ ಎಲ್ಲೋರಾ ಪಾರ್ಕ್‍ನ ಕುಸುಮಾ ನಿವಾಸ್ ಸ್ವಗೃಹದಲ್ಲಿ ನಿಧಿವಶರಾದರು.
ಕೊಡುಗೈದಾನಿಯೂ ಆಗಿದ್ದ ಇವರು ತುಳು ಸಂಘ ಬರೋಡಾ ಇದರ ಸ್ಥಾಪಕ ಅಧ್ಯಕ್ಷ, ಕರ್ನಾಟಕ ಸಂಘ ಬರೋಡಾ ಅಧ್ಯಕ್ಷ, ಆಲ್ ಇಂಡಸ್ಟ್ರೀಸ್ ಕ್ಯಾಟರಿಂಗ್ ಅಸೋಸಿಯೇಶನ್ ಅಧ್ಯಕ್ಷರಾಗಿ ವಿವಿಧ ಸಂಘಸಂಸ್ಥೆಗಳಲ್ಲಿ ಸಕ್ರೀಯರಾಗಿ ಸೇವೆ ಸಲ್ಲಿಸಿ ಜನಾನುರೆಣಿಸಿದ್ದರು. ಕಳೆದ ಡಿಸೆಂಬರ್‍ನಲ್ಲಿ ಚೆಂಬೂರು ಕರ್ನಾಟಕ ಸಂಘ ಜರುಗಿಸಿದ ವಾರ್ಷಿಕ ಸಾಹಿತ್ಯ-ಸಂಸ್ಕೃತಿ, ಸಮ್ಮಾನ ಸಂಭ್ರಮ `ಸಾಹಿತ್ಯ ಸಹವಾಸ' ಕಾರ್ಯಕ್ರಮದಲ್ಲಿ ಸಂಘದ ವಾರ್ಷಿಕÀ `ಅರಾಟೆ ನಾಗಮ್ಮ ಶೇಷಪ್ಪ ಪೂಜಾರಿ ಸ್ಮಾರಕ' ಪ್ರಶಸ್ತಿ ಪ್ರದಾನಿಸಿ ಜಯರಾಮ್ ಶೆಟ್ಟಿ ಇವರಿಗೆ ಗೌರವಿಸಿತ್ತು.
ಮೃತರು ಪತ್ನಿ ಕುಸುಮಾ ಶೆಟ್ಟಿ ಮೂರು ಸುಪುತ್ರಿಯರು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದಿಲ್ಲಿ ಶನಿವಾರ ಪೂರ್ವಾಹ್ನ ಬರೋಡಾ ಇಲ್ಲಿನ ವಾಡಿವಡಿ ಇಲ್ಲಿನ ಸ್ಮಶಾನಭೂಮಿಯಲ್ಲಿ ನೆರವೇರಿದ್ದು ತುಳು ಸಂಘ ಬರೋಡಾ ಅಧ್ಯಕ್ಷ ಶಶಿಧರ ಬಿ.ಶೆಟ್ಟಿ, ಗೌರವಾಧ್ಯಕ್ಷ ದಯಾನಂದ ಬೋಂಟ್ರ, ಗೌ| ಪ್ರ| ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಹೊಟೇಲು ಉದ್ಯಮಿ ಸುಧಾಕರ್ ಶೆಟ್ಟಿ, ಕರ್ನಾಟಕ ಸಂಘ ಬರೋಡಾ ಅಧ್ಯಕ್ಷ ನರಸಿಂಹನ್ ಮೂರ್ತಿ ಮತ್ತಿತರ ಪದಾಧಿಕಾರಿಗಳು, ಗಣ್ಯರನೇರು ಪಾಲ್ಗೊಂಡು ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಅರ್ಪಿಸಿದರು. ತುಳು ಸಂಘ ಅಹ್ಮದಾಬಾದ್ ಗೌರವಾಧ್ಯಕ್ಷ ಮೋಹನ್ ಸಿ.ಪೂಜಾರಿ, ಎಸ್ಕೆ ಹಳೆಯಂಗಡಿ ಸೇರಿದಂತೆ ಹಲವಾರು ಗಣ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ.