ಮುಂಬಯಿ (ಕಲ್ಯಾಣ್), ಮೇ.22: ಉಪನಗರದ ಕಲ್ಯಾಣ್‍ನಲ್ಲಿ ಸೇವಾ ನಿರತ ಓಂ ಶಕ್ತಿ ಮಹಿಳಾ ಸಂಸ್ಥೆಯು ಮುನ್ಸಿಪಾಲ್ ಆಸ್ಪತ್ರೆ ಕಲ್ಯಾಣ್ ಹಾಗೂ ರುಕ್ಮೀಣಿಭಾೈ ಆಸ್ಪತ್ರೆಗಳಿಗೆ ಮತ್ತು ಸ್ಥಾನೀಯ ಇನ್ನಿತರ ವೈದ್ಯರಿಗೆ ಸರ್ವೋತ್ಕೃಷ್ಟ ಸುಮಾರು 100 ಪಿಪಿಇ ಕಿಟ್ (ವೈಯಕ್ತಿಕ ರಕ್ಷಣಾ ಉಪಕರಣ ಪರಿಕರ -ಪರ್ಸನಲ್ ಪೆÇ್ರಟಕ್ಷನ್ ಇಕ್ವೀಪ್‍ಮೆಂಟ್‍ಗಳನ್ನು) ವಿತರಿಸಿದರು.
ಮುಖ್ಯ ವೈದ್ಯಕೀಯ ಅಧಿಕಾರಿ, ಡಾ| ಅಶ್ವಿನಿ ಪಾಟೀಲ್, ನಿದಾನ್ ಡೈನೋಜೆಸ್ಟಿಕ್ ಸೆಂಟರ್ ಕಲ್ಯಾಣ್ ಇದರ ಮುಖ್ಯಸ್ಥ, ಇಂಡಿಯನ್ ಮೆಡಿಕಲ್ ಅಸೋಸಿಯೇಶನ್‍ನ ಕಲ್ಯಾಣ್‍ನ ಕಾರ್ಯದರ್ಶಿ ಡಾ| ಪ್ರಶಾಂತ್ ಪಾಟೀಲ್ ಉಪಕರಣಗಳನ್ನು ಸ್ವೀಕರಿಸಿದ್ದು ಇವರೆಲ್ಲರ ಸಹಕಾರಕ್ಕೆ ಓಂ ಶಕ್ತಿ ಸಂಸ್ಥೆಯು ವಂದಿಸಿತು.
ಓಂ ಶಕ್ತಿ ಮಹಿಳಾ ಸಂಸ್ಥೆಯ ಸಂಸ್ಥಾಪಕಿ ಮತ್ತು ಗೌರವಾಧ್ಯಕ್ಷೆ ಚಿತ್ರ ರವಿರಾಜ್ ಶೆಟ್ಟಿ, ಕೋಶಾಧಿಕಾರಿ ಸುರೇಖಾ ಹರೀಶ್ ಶೆಟ್ಟಿ, ಜೊತೆ ಕೋಶಾಧಿಕಾರಿ ಕುಶಲ ಜಿ.ಶೆಟ್ಟಿ, ಸಮಾಜ ಕಲ್ಯಾಣ ಸಮಿತಿ ಸಂಚಾಲಕಿ ಶಶಿ ಪ್ರವೀಣ್ ಶೆಟ್ಟಿ ಮತ್ತು ಶ್ರೀಶ್ ರವಿರಾಜ್ ಶೆಟ್ಟಿ ಉಪಸ್ಥಿತರಿದ್ದÀರು.