Saturday 20th, April 2024
canara news

ಅನಿವಾಸಿ ಸ್ಥಳೀಯರಿಗೆ ಕ್ವಾರಂಟೈನ್ ವ್ಯವಸ್ಥೆ : ಮಾಜಿ ಸಚಿವ ಯು.ಟಿ ಖಾದರ್

Published On : 24 May 2020   |  Reported By : Rons Bantwal


ಮಂಗಳೂರು ವಿಧಾನಸಭಾ ಕ್ಷೇತ್ರದ ಅಧಿಕಾರಿಗಳು ಜನಪ್ರತಿನಿಧಿಗಳ ಸಭೆ

ಮುಂಬಯಿ (ಉಳ್ಳಾಲ), ಮೇ.23: ಹೊರ ರಾಜ್ಯಗಳಿಂದ ಬರುವ ಮಂಗಳೂರು ವಿಧಾನಸಭಾ ಕ್ಷೇತ್ರದ ಮಂಗಳೂರು ತಾಲೂಕು ವ್ಯಾಪ್ತಿಯ 12 ಗ್ರಾಮಗಳ ಸ್ಥಳೀಯ ನಿವಾಸಿಗಳಿಗೆ ಸರಕಾರಿ ಕ್ವಾರಂಟೈನ್‍ಗೆ ಸಂಬಂಧಿಸಿದಂತೆ ದೇರಳಕಟ್ಟೆ ಜಂಕ್ಷನ್‍ನಲ್ಲಿರುವ ಬೆಳ್ಮ ಗ್ರಾಮ ಪಂಚಾಯತ್ ನೋಡೆಲ್ (ಸಹಾಯ) ಕೇಂದ್ರವಾಗಿ ಆರಂಬಿಸಿದ್ದು, ಈ ಪ್ರದೇಶದವರು ಜಿಲ್ಲೆಗೆ ಆಗಮಿಸಿ ಬೆಳ್ಮ ಗ್ರಾಮ ಪಂಚಾಯತ್ ಸಂಪರ್ಕಿಸಿದರೆ ಕ್ವಾರಂಟೈನ್ ಕೇಂದ್ರದ ಮಾಹಿತಿ ದೊರೆಯಲಿದೆ ಎಂದು ಶಾಸಕ, ಮಾಜಿ ಸಚಿವ ಯು.ಟಿ. ಖಾದರ್ ತಿಳಿಸಿದರು.

ಮಂಗಳೂರು ವಿಧಾನಸಭಾ ಕ್ಷೇತ್ರದ ಮಂಗಳೂರು ತಾಲೂಕಿಗೆ ಒಳಪಡುವ 12 ಗ್ರಾಮ ಪಂಚಾಯತ್‍ಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ತಾಲೂಕು ಪಂಚಾಯತ್ ಸದಸ್ಯರು, ಪಂಚಾಯತ್ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಮಂಗಳೂರು ವಿಧಾನಸಬಾ ಕ್ಷೇತ್ರದ ಕ್ವಾರಂಟೈನ್‍ಗೆ ಒಳಪಡುವ ಹೊರರಾಜ್ಯಗಳಿಂದ ಆಗಮಿಸುವ ಸ್ಥಳೀಯ ನಿವಾಸಿಗಳಿಗೆ ಕ್ವಾರಂಟೈನ್ ಮಾಹಿತಿ ಕೇಂದ್ರ ಮತ್ತು ಅದರ ನಿರ್ವಹಣೆ ಕುರಿತಂತೆ ಕರೆಯಲಾದ ಸಮಾಲೋಚಬಾ ಸ`Éಯಲ್ಲಿ ಮಾತನಾಡಿದರು.

ಹೊರ ಜಿಲ್ಲೆಗಳಿಂದ ಬರುವ ನಾಗರಿಕರಿಗೆ ಮನೆಯಲ್ಲೇ ಕ್ವಾರಂಟೈನ್‍ಗೆ ವ್ಯವಸ್ಥೆ ಮಾಡಲಾಗಿದೆ. ಹೋಮ್ ಕ್ವಾರಂಟೈನ್‍ನಲ್ಲಿರುವವರು ಸಣ್ಣ ಮಕ್ಕಳು ಮತ್ತು ಹಿರಿಯ ನಾಗರಿಕರಿಂದ ದೂರವಿರಬೇಕು ಇದರೊಂದಿಗೆ ಹೊರಗಡೆ ಸುತ್ತಾಡಿದರೆ ಪೆÇಲೀಸ್ ಪ್ರಕರಣ ದಾಖಲಾಗಿ ಸಂಪೂರ್ಣವಾಗಿ ಸರಕಾರಿ ಕ್ವಾರಂಟೈನ್‍ಗೆ ಒಳಪಡುವ ಸಾಧ್ಯತೆ ಇದ್ದು ಕ್ವಾರಂಟೈನ್‍ನಲ್ಲಿರುವವರು ಹೊರಗಡೆ ತಿರುಗಾಡದೆ ಶಿಸ್ತು ಕಾಪಾಡಿ ಎಂದರು.

ಹೊರ ರಾಜ್ಯಗಳಿಂದ ಬರುವ ನಾಗರಿಕರಿಗೆ ಈಗಾಗಲೇ ಕ್ವಾರಂಟೈನ್ ಕೇಂದ್ರ ಸ್ಥಾಪಿಸಲಾಗಿದ್ದು, 22 ಜನರು ಕ್ವಾರಂಟೈನ್‍ನಲ್ಲಿದ್ದಾರೆ. ಕೇವಲ ಮಹಿಳೆಯರು ಮಾತ್ರ ಇದ್ದರೆ ಅವರಿಗೆ ಕೊಣಾಜೆಯಲ್ಲಿರುವ ವಿವಿ ಮಹಿಳಾ ಹಾಸ್ಟೆಲ್‍ನಲ್ಲಿ ಕ್ವಾರಂಟೈನ್‍ಗೆ ವ್ಯವಸ್ಥೆ ಮಾಡಲಾಗುವುದು. ಉಳಿದಂತೆ ಈಗಾಗಲೇ ಖಾಸಗಿ ಹಾಸ್ಟೆಲ್, ಸರಕಾರಿ ಹಾಸ್ಟೆಲ್‍ಗಳನ್ನು ಗುರುತಿಸಿದ್ದು ಅಲ್ಲಿ ಕ್ವಾರಂಟೈನ್‍ಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ವ್ಯವಸ್ಥೆ ಮಾಡಿದ್ದು ಆಯಾಯ ಗ್ರಾಮ ಪಂಚಾಯತ್‍ನ ಅಧಿಕಾರಿಗಳು ಈ ಕ್ವಾರಂಟೈನ್ ಕೇಂದ್ರದ ಜವಾಬ್ದ್ದಾರಿ ವಹಿಸಿಕೊಳ್ಳಬೇಕು ಇದರೊಂದಿಗೆ ಹೊಸ ಕ್ವಾರಂಟೈನ್ ಕೇಂದ್ರಗಳನ್ನು ಗುರುತಿಸುವ ಕಾರ್ಯ ಆಯಾಯ ಗ್ರಾಮ ಪಂಚಾಯತ್‍ನ ಅಧಿಕಾರಿಗಳದ್ದು ಮತ್ತು ಜನಪ್ರತಿನಿಧಿಗಳದ್ದು. ಕ್ವಾರಂಟೈನ್ ಸಂzರ್ಭದಲ್ಲಿ ಆಹಾರಗಳಿಗೆ ಸ್ಥಳೀಯವಾಗಿ ಮತ್ತು ಪಂಚಾಯತ್‍ನಿಂದ ವ್ಯವಸ್ಥೆಯಿದ್ದರೂ ಮನೆಯಿಂದಲೂ ತರಿಸಿಕೊಳ್ಳುವ ಅವಕಾಶವಿದೆ. ಹೋಟೆಲ್ ಊಟ ಅವಶ್ಯವಿದ್ದಲ್ಲಿ ಮಾಂಸಹಾರಿ ಮತ್ತು ಸಸ್ಯಹಾರಿ ಹೋಟೆಲ್‍ಗಳನ್ನು ಗುರುತಿಸಲಾಗಿದ್ದು ಅಲ್ಲಿದಂಲೂ ಸ್ವಖರ್ಚಿನಲ್ಲಿ ಊಟ ತರಿಸಿಕೊಳ್ಳುವ ವ್ಯವಸ್ಥೆ ಮಾಡಲಾಗುವುದು ಒಟ್ಟಿನಲ್ಲಿ ಕ್ವಾರಂಟೈನ್‍ಗೆ ಒಳಪಡುವವರು ಯಾವುದೇ ಸಮಸ್ಯೆಗಳಿಲ್ಲದೆ ಉತ್ತಮ ರೀತಿಯಲ್ಲಿ ಕ್ವಾರಂಟೈನ್ ಆವಧಿಯನ್ನು ಪೂರ್ಣಗೊಳಿಸಲು ಸಹಕರಿಸಲಾಗುವುದು ಎಂದರು.

ಈ ಸಂzರ್ಭದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು, ಬೆಳ್ಮ ಗ್ರಾಮ ಪಂಚಾಯತ್ ವಿಜಯಾ ಕೃಷ್ಣಪ್ಪ, ಉಪಾಧ್ಯಕ್ಷ ಮಹಮ್ಮದ್ ಸತ್ತಾರ್, ನೋಡೆಲ್ ಅಧಿಕಾರಿ ನವೀನ್ ಹೆಗ್ಡೆ, ಮಂಜನಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಹಮ್ಮದ್ ಅಸೈ ಮತ್ತಿತರರು ಉಪಸ್ಥಿತರಿದ್ದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here