Saturday 20th, April 2024
canara news

ಧ್ವನಿ ಪ್ರತಿಷ್ಠಾನದ ಸಮಗ್ರ ಹೊತ್ತಿಗೆಗೆ ಲೇಖಕರಿಂದ ಬರಹಗಳಿಗೆ ಆಹ್ವಾನ

Published On : 27 May 2020   |  Reported By : Rons Bantwal


ಮುಂಬಯಿ, ಮೇ.26: ಮುಂಬಯಿನಲ್ಲಿ 1985 ರಲ್ಲಿ ಅಸ್ತಿತ್ವಕ್ಕೆ ಬಂದ ಧ್ವನಿ ಪ್ರತಿಷ್ಠಾನ ತನ್ನ 35ನೇ ವಾರ್ಷಿಕೋತ್ಸವನ್ನು ಇತ್ತೀಚೆಗೆ ಕನ್ನಡಪ್ರಭ ಪತ್ರಿಕೆಯ ಪ್ರಧಾನ ಸಂಪಾದಕ ರವಿ ಹೆಗ್ಡೆ, ಪ್ರಖ್ಯಾತ ಹಿರಿಯ ಕವಿ ಡಾ| ಹೆಚ್.ಎಸ್ ವೆಂಕಟೇಶ್ ಮೂರ್ತಿ ಹಾಗೂ ಸಂಘಟಕ ಶ್ರೀನಿವಾಸ ಕಪ್ಪಣ್ಣ ಅವರ ಉಪಸ್ಥಿತಿಯಲ್ಲಿ ದುಬೈಯಲ್ಲಿ ಆಚರಿಸಿತು.

ಧ್ವನಿ 2002ರಿಂದ ಅಂದರೆ ಸುಮಾರು ಕಳೆದ ಎರಡು ದಶಕಗಳಿಂದ ದುಬೈಯಲ್ಲಿ ನಿರಂತರವಾಗಿ ನೆರವೇರಿಸುತ್ತಾ ಬಂದಿರುವ ಕನ್ನಡ ಸಾಹಿತ್ಯ ಹಾಗು ರಂಗ ಚಟುವಟಿಕೆಗಳನ್ನು ದಾಖಲಾಯಿಸುವ ಸಲುವಾಗಿ ವಿವಿಧ ಲೇಖಕರ ಬರಹಗಳುಳ್ಳ ಒಂದು ಸಮಗ್ರ ಹೊತ್ತಿಗೆಯನ್ನು ಪ್ರಕಟಿಸುವ ಸಿದ್ಧತೆಯಲ್ಲಿದೆ.

ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯಾರ್ ಸಮನ್ವಯಕರಾಗಿ ಇರುವ ಈ ಹೊತ್ತಿಗೆಗೆ ಮನೋಹರ ತೋನ್ಸೆ ಸಂಪಾದಕರಗಿದ್ದು ಗೋಪೀನಾಥ್ ರಾವ್, ಈರ್ಶದ್ ಮೂಡುಬಿದ್ರಿ, ಸುಧಾಕರ ರಾವ್ ಪೇಜಾವರ, ಶ್ರೀಮತಿ ಗೋಪಿಕಾ ಮಯ್ಯ, ರಜನಿ ಭಟ್ ಅವರು ಸಂಪಾದಕೀಯ ಮಂಡಲಿಯಲ್ಲಿದ್ದಾರೆ. ಕಳೆದ ಎರಡು ದಶಕಗಳಿಂದ ಧ್ವನಿ ಬಳಗದೊಡನೆ ಸತತ ಒಡನಾಟದಲ್ಲಿ ಇರುವವರು ತಮ್ಮ ಲೇಖನವನ್ನು ಇ-ಮೇಯ್ಲ್ dhwanipratishthan@gmail.com ಇದಕ್ಕೆ ನೇರವಾಗಿ ಕಳುಹಿಸಬಹುದು. ಅಧಿಕ ಮಾಹಿತಿಗಾಗಿ Prakash Rao Payyar, P.O.Box:8508 Dubai United Arab Emirates: +971 50 6976081 ಇವರಿಗೆ ಅಥವಾ 01.06.2020 ಯ ಒಳಗೆ ಸಂಪಾದಕ ಮಂಡಳಿಯ ಸದಸ್ಯರನ್ನು ಸಂಪರ್ಕಿಸ ಬಹುದು ಎಂದು ಧ್ವನಿ ಪ್ರತಿಷ್ಠಾನದ ವಕ್ತಾರರು ಈ ಮೂಲಕ ತಿಳಿಸಿದ್ದಾರೆ.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here