Saturday 20th, April 2024
canara news

ಶ್ರೀರಾಮ ಮಂದಿರ ವಡಲಾ ; ವಾರ್ಷಿಕ ಸಾರ್ವಜನಿಕ ಗಣೇಶೋತ್ಸವ ಮುಂದೂಡುವಿಕೆ

Published On : 27 May 2020   |  Reported By : Rons Bantwal


ಮುಂಬಯಿ, ಮೇ.26: ಮಹಾರಾಷ್ಟ್ರದಲ್ಲಿನ ಶ್ರೀಮಂತ ಗಣೇಶ ಎಂದೇ ಪ್ರಸಿದ್ಧಿಯ ವಡಾಲದ ಸುಪ್ರಸಿದ್ಧ ಗೋಕರ್ಣ ಪರ್ತಿ ಜೀವೋತ್ತಮ್ ಮಠದ ಶ್ರೀರಾಮ ಮಂದಿದಲ್ಲಿ ಜಿಎಸ್‍ಬಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ವಾರ್ಷಿಕವಾಗಿ ಆಚರಿಸಲ್ಪಡುವ ಗಣೇಶೋತ್ಸವ (ಚೌತಿ ಹಬ್ಬವನ್ನು) ಈ ಬಾರಿ ಕೊರೊನಾ ಮಹಾಮಾರಿ ಕರಿನೆರಳು ಜಗದ್ವ್ಯಾಪಿ ಪಸರಿಸಿದ ಹಿನ್ನಲೆಯಲ್ಲಿ ಸಾಮಾಜಿಕ ಸ್ವಸ್ಥ್ಯತಾ ಮುಂಜಾಗುರತಾ ಕ್ರಮವನ್ನಾಗಿಸಿ ಮುಂದೂಡಲಾಗಿದೆ ಎಂದು ಜಿಎಸ್‍ಬಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.

ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜಿವೋತ್ತಮ ಮಠದ ಮಠಾಧೀಶ ಶ್ರೀಮದ್ ವಿದ್ಯಾಧಿರಾಜತೀರ್ಥ ಸ್ವಾಮೀಜಿ ಅವರ ಆದೇಶದಂತೆ ಹಾಗೂ ಉಭಯ ಸರಕಾರಗಳ ಆಜ್ಞೆಯಾನುಸಾರ ಮುನ್ನೆಚ್ಚರಿಕಾ ಕ್ರಮವಾಗಿ 2020ನೇ ವಾರ್ಷಿಕ ಸಾರ್ವಜನಿಕ ಗಣೇಶೋತ್ಸವ ರದ್ದುಗೊಳಿಸಿ 2020ನೇ ಫೆಬ್ರವರಿಯ ಮಾಘೀ ಶುದ್ಧ ಚತುಥಿರ್üಯ ಗಣೇಶ ಜಯಂತಿಯ ಶುಭಾವಸರದಲ್ಲಿ ಆಚರಿಸಲು ವಿಶ್ವಸ್ಥ ಮಂಡಳಿ, ಸಂಯೋಜಕರು, ಸಂಚಾಲಕರು ಮತ್ತು ಸೇವಾಕರ್ತರು, ಸಮಾಜ ಬಾಂಧವರು ನಿರ್ಧಾರಿಸಿರುತ್ತಾರೆ.

ಆದ್ದರಿಂದ ನಾಡಿನ ಸಮಸ್ತ ಜನತೆ ಮತ್ತು ಸಮಾಜದ ಆರೋಗ್ಯ ಮತ್ತು ದೃಷ್ಠಿಯಿಂದ ಕೈಗೊಂಡಿರುವ ಈ ನಿರ್ಧಾರಕ್ಕೆ ಸಮಸ್ತ ಭಕ್ತ ಬಾಂಧವರು, ಹಿತೈಷಿಗಳು ಎಂದಿನಂತೆ ಸಹಕರಿಸುವಂತೆ ಪರ್ತಗಾಳಿ ಮಠ ಮುಂಬಯಿ ಸಮಿತಿ ಕಾರ್ಯಾಧ್ಯಕ್ಷ ಮುಕುಂದ್ ಕಾಮತ್, ಕಾರ್ಯದರ್ಶಿ ಉಲ್ಲಾಸ್ ಕಾಮತ್ ಈ ಮೂಲಕ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here