ಮಗುವಿನ ಪರಿಪೂರ್ಣ ಜವಾಬ್ದಾರಿ ನಮ್ಮ ಹಿರಿಮೆ ಸಚಿವ ಏಕನಾಥ್ ಶಿಂಧೆ
(ರೋನ್ಸ್ ಬಂಟ್ವಾಳ್)
ಮುಂಬಯಿ, ಮೇ.26: ಉಪನಗರದ ಥಾಣೆಯಲ್ಲಿ ವಾಸಿಸುವ ಉತ್ತರ ಮೂಲದ ವೈಧಿಕ ಕುಟುಂಬ ಒಂದರಲ್ಲಿ ಕರೋನಾ ಮಹಾಮಾರಿ ಸಾಂಕ್ರಾಮಿಕ ರೋಗ ಪರಿಣಾಮ ಬೀರಿದ್ದು, ಈ ಪರಿವಾರದಲ್ಲಿ ತಂದೆ, ತಾಯಿ, ಅಜ್ಜ, ಅಜ್ಜಿಗೆ ಕೋವಿಡ್ ಸೋಂಕು ಬಾಧಿಸಿದ್ದರೂ ಅದೃಷ್ಟವಶಾತ್ ಅವರ 11 ತಿಂಗಳ ಮಗು ಪ್ರಿಯಾಂಕ್ಷಿ (ಮಗಳು) ಕರೋನಾ ಋಣಾತ್ಮಕವಾಗಿ ಕಂಡುಬಂದಿದೆ. ಕೋವಿಡ್ ಬಾದಿತ ಈ ಪರಿವಾರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದು ಮಗು ಮಾತ್ರ ಪರಿವಾರದಿಂದ ಏಕಾಂಗಿಯಾಗಿ ಉಳಿಯುವಂತಾಗಿತ್ತು.
ಶಿವಸೇನೆಯ ಬಾಲಾ ಮುದಲಿಯಾರ್ ಅವರ ಪತ್ನಿ, ಮಹಿಳಾ ವಿಬಾಗದ ಕಾರ್ಯಕರ್ತೆ ರೀನಾ ಮುದಲಿಯಾರ್ ಅವರು ವಿಷಯ ತಿಳಿದು ಸದ್ಯ ಈ ಮಗುವಿನ ಆರೈಕೆ ಮಾಡುತ್ತಿದ್ದಾರೆ. ಶಿವಸೇನೆಯ ಪ್ರಭಾವಿ ಧುರೀಣ, ತುಳು ಕನ್ನಡಿಗರಿಗೆ ಸದಾ ಸ್ಪಂದಿಸುತ್ತಿರುವ ಮಹಾರಾಷ್ಟ್ರ ರಾಜ್ಯದ ನಗರಾಭಿವೃದ್ಧಿ ಮತ್ತು ಲೋಕೋಪಯೋಗಿ ಹಾಗೂ ಥಾಣೆ ಜಿಲ್ಲಾ ಉಸ್ತುವರಿ ಸಚಿವ ಏಕನಾಥ್ ಶಿಂಧೆ ಅವರು ಮಗುವಿನ ಬಗ್ಗೆ ಅಪಾರವಾದ ಕಾಳಜಿ ವಹಿಸಿ ಪೆÇ್ರೀತ್ಸಹಿಸಿದ್ದಾರೆ.
ಮುದಲಿಯಾರ್ ಅವರ ಟಿಪ್ ಟಾಪ್ ಪ್ಲಾಜಾದಲ್ಲಿರುವ ನಿವಾಸಕ್ಕೆ ಸಚಿವ ಶಿಂಧೆ ಭೇಟಿ ನೀಡಿ ಕಂದಮ್ಮ ಪ್ರಿಯಾಂಕ್ಷಿಯ ಆರೋಗ್ಯ ಮತ್ತು ಪಾಲನಾ ಬಗ್ಗೆ ವಿಚಾರಿಸಿದರು. ಮಗು ಎಂದೂ ಅಪ್ಪಅಮ್ಮನ ಪ್ರೀತಿಯಿಂದ ವಂಚಿತವಾಗದೆಯೇ ಮಗುವಿನ ಪಾಲನೆಯನ್ನು ಸರಿಯಾಗಿ ನಿರ್ವಹಿಸಿ ಪೌಷ್ಟಿಕ ಆಹಾರ, ಸೂಕ್ತ ಔಷಧಿüಗಳÀು ಮತ್ತು ಆಟಿಕೆ ಇತ್ಯಾದಿಗಳನ್ನು ನೀಡಿ ಮನೆಮಂದಿಯಂತೆಯೇ ಪಾಲನೆ ಮಾಡುವಂತೆ ತಿಳಿಸಿದರು. ಯಾವುದೇ ಸಂದರ್ಭದಲ್ಲೂ ಮಗುವಿನಲ್ಲಿ ಯಾವುದೇ ಕೊರತೆ ಆಗದಂತೆ ಎಚ್ಚರವಹಿಸುವಂತೆ ಸಲಹಿ ಮುದಲಿಯಾರ್ ಪರಿವಾರದ ದಿಟ್ಟಹೆಜ್ಜೆಯನ್ನು ಪ್ರಶಂಸಿದರು. ಮಗುವಿನ ಪರಿಪೂರ್ಣವಾದ ಜವಾಬ್ದಾರಿ ನಮ್ಮ ಹಿರಿಮೆಯಾಗಿದೆ ಎಂದೂ ಏಕನಾಥ್ ಶಿಂಧೆ ಭರವಸೆ ನೀಡಿದರು.