Saturday 10th, May 2025
canara news

ಸಂಸದ ಗೋಪಾಲ ಸಿ.ಶೆಟ್ಟಿ ಅವರಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ

Published On : 31 May 2020   |  Reported By : Rons Bantwal


ವಲಸೆ ಕನ್ನಡಿಗರನ್ನು ಒಳನಾಡಿಗೆ ಸೇರಿಸದಿರುವ ಧೋರಣೆ ಸಲ್ಲದು ಎರ್ಮಾಳ್ ಹರೀಶ್

ಮುಂಬಯಿ, ಮೇ.30: ಮುಂಬಯಿ ಇಲ್ಲಿನ ಹಲವಾರು ತುಳು ಕನ್ನಡಿಗರ, ಸಾಮಾಜಿಕ ಮತ್ತು ಧಾರ್ಮಿಕ ಸಂಘಸಂಸ್ಥೆಗಳ ಪದಾಧಿಕಾರಿಗಳು, ಉದ್ಯಮಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳ ಸಭೆಯು ಇಂದಿಲ್ಲಿ ಉಪನಗರ ಕಾಂದಿವಿಲಿ ಪವನ್‍ಧಾಮ್‍ನಲ್ಲಿ ಉತ್ತರ ಮುಂಬಯಿ ಬಿಜೆಪಿ ಉಪಾಧ್ಯಕ್ಷ ಎರ್ಮಾಳ್ ಹರೀಶ್ ಶೆಟ್ಟಿ ಇವರ ನೇತೃತ್ವದಲಿ ನಡೆಸಲ್ಪಟ್ಟಿತು

ಮಹಾರಾಷ್ಟ್ರದಾದ್ಯಂತ ನೆಲೆಯಾಗಿದ್ದ ಕರ್ನಾಟಕದ ಜನತೆ ಲಾಕ್‍ಡೌನ್‍ನಿಂದಾಗಿ ಎದುರಿಸುತ್ತಿರುವ ವಿಷಮ ಸ್ಥಿತಿಯನ್ನು ಮನವರಿಸಲಾಗಿದ್ದು, ಕರ್ನಾಟಕ ಸರಕಾರದ ಮಲತಾಯಿ ಧೋರಣೆಯಿಂದ ಸಾವಿರಾರು ಸಂಖ್ಯೆಯ ಜನತೆ, ವಿಶೇಷವಾಗಿ ಅಪಾರ ಸಂಖ್ಯೆಯ ಹೊಟೇಲು ಕಾರ್ಮಿಕರು ಒಳನಾಡ ಹುಟ್ಟೂರಿಗೆ ತೆರಳಲು ಅಸಾಧ್ಯವಾಗಿ ಕನಿಷ್ಠ ದಿನ ಖರ್ಚಿಗೂ ಕಾಸಿಲ್ಲದೆ, ಒಪೆÇ್ಪತ್ತಿಗೆ ಊಟದ ವ್ಯವಸ್ಥೆಯೂ ಇಲ್ಲದೆ, ಮನೆ ಬಾಡಿಗೆಯನ್ನೂ ಪಾವಿಸದೆ ಕಂಗಾಲಾಗಿ ಪರಿಸ್ಥಿತಿ ಬಿಗಾಡಾಯಿಸಿ ಇತ್ತ ಹುಟ್ಟೂರಿಗೂ ಬರಲು ಅವಕಾಶ ಸಿಗದ ಕಾರಣ ಮಾನಸಿಕವಾಗಿ ನೊಂದು ಕಂಗೆಟ್ಟಿರುವ ಜನತೆಯ ಗೋಳಿನ ಜೀವನದ ಬಗ್ಗೆ ಮಾಹಿತಿ ಪಡೆಯಲಾಯಿತು.

ಸಭೆಯಲ್ಲಿ ನಮ್ಮ ಜನತೆಯ ಬಗ್ಗೆ ಸೂಕ್ತ ಕ್ರಮ ಕೈಕೊಂಡು ಕೂಡಲೇ ಮಹಾರಾಷ್ಟ್ರದಲ್ಲಿ ಸಿಲುಕಿರುವ ಜನರನ್ನು ಇಲ್ಲಿಂದ ಮುಕ್ತಗೊಳಿಸಿ ತಮ್ಮತಮ್ಮ ಊರಿಗೆ ಕರೆಸಿ ಕೊಳ್ಳುವಂತೆ ಅಥವಾ ಕರೆಸಿ ಕೊಳ್ಳುವಂತೆ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಮನವಿ ಮೂಲಕ ಗಮನಕ್ಕೆ ತರುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಎರ್ಮಾಳ್ ಹರೀಶ್ ಶೆಟ್ಟಿ ತಿಳಿಸಿದರು.

ಇದೀಗಲೇ ಹಲವಾರು ಸಂಘಸಂಸ್ಥೆಗಳು ತಮ್ಮ ಪರವಾಗಿ ಮನವಿಯನ್ನು ಎರ್ಮಾಳ್ ಹರೀಶ್ ಶೆಟ್ಟಿ ಮೂಲಕ ಸಂಸದ ಗೋಪಾಲ ಸಿ.ಶೆಟ್ಟಿ ಇವರಿಗೆ ಒಪ್ಪಿಸಿ ಮುಂಬಯಿ ವಲಸೆ ಕನ್ನಡಿಗರ ಬಗ್ಗೆ ತತ್‍ಕ್ಷಣವೇ ಮುಖ್ಯಮಂತ್ರಿ ಅವರೊಂದಿಗೆ ಮಾತನಾಡಿ ಇಲ್ಲಿನ ಕನ್ನಡಿಗರ ಕಷ್ಟಗಳಿಗೆ ಸ್ಪಂದಿಸುವಂತೆ ಹರೀಶ್ ಶೆಟ್ಟಿ ಅವರು ಸಂಸದ ಗೋಪಾಲ ಶೆಟ್ಟಿ ಅವರಲ್ಲಿ ಕೇಳಿಕೊಂಡು ಮನವಿ ಸಲ್ಲಿಸಿದರು.

ಗೋಪಾಲ ಶೆಟ್ಟಿ ಅವರು ಪ್ರತಿಕ್ರಿಯಿಸಿ ಈ ಬಗ್ಗೆ ಶೀಘ್ರಗತವಾಗಿ ಕರ್ನಾಟಕದ ಮುಖ್ಯಮಂತ್ರಿ ಅವರಲ್ಲಿ ಮಾತನಾಡಿ ಕೂಡಲೇ ಸೂಕ್ತವಾದ ವ್ಯವಸ್ಥೆ ಮಾಡಿಸಿ ಕೊಡುವ ಭರವಸೆ ನೀಡಿದರು. ವಿಶೇಷವಾಗಿ ಮುಂಬಯಿವಾಸಿ ಕರ್ನಾಟಕದ ವಲಸೆ ಕನ್ನಡಿಗರ ಬಗ್ಗೆ ಇಷ್ಟೊಂದು ಅನುಕಂಪ ತೋರಿಸಿ ಇಂತಹ ಪುಣ್ಯದ ಕೆಲಸಕ್ಕೆ ಮುಂದಾದ ಎರ್ಮಾಳ್ ಹರೀಶ್ ಅವರ ಕಾಳಜಿಯನ್ನು ಪ್ರಶಂಸಿಸಿದರು.

ಈ ಸಂದರ್ಭದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ, ಸಾಫಲ್ಯ ಸೇವಾ ಸಂಘ ಮುಂಬಯಿ ಇದರ ಅಧ್ಯಕ್ಷ ಶ್ರೀನಿವಾಸ ಪಿ.ಸಾಫಲ್ಯ, ಡಾ| ವಿರಾರ್ ಶಂಕರ್ ಶೆಟ್ಟಿ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸದಸ್ಯ ಕರುಣಾಕರ ಶೆಟ್ಟಿ ಮಾಳ, ಸಚ್ಚೀದಾನಂದ ಎಂ.ಶೆಟ್ಟಿ, ಚಂದ್ರಶೇಖರ್ ಪಾಲೆತ್ತಾಡಿ ಮತ್ತಿತರರು ಉಪಸ್ಥಿತರಿದ್ದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here