Saturday 5th, July 2025
canara news

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಕೊಳ್ಳಿರಿ: ಶಾಸಕ ರಾಜೇಶ್ ನಾಯ್ಕ್

Published On : 01 Jun 2020   |  Reported By : Rons Bantwal


ಬಂಟ್ವಾಳ ತಾಲೂಕಿನ ಆಶಾ ಕಾರ್ಯಕರ್ತೆಯರಿಗೆ ಚ್ಯವನಪ್ರಾಶ್ ಲೇಹ್ಯ ವಿತರಣೆ
(ರೋನ್ಸ್ ಬಂಟ್ವಾಳ್)


ಮುಂಬಯಿ (ಬಂಟ್ವಾಳ), ಮೇ.30: ಕರ್ನಾಟಕ ಸರಕಾರದ ಆಯುಷ್ಯ ಇಲಾಖೆಯ ವತಿಯಿಂದ ಕೊಡಮಾಡುವ ಆರ್ಯವೇದದಲ್ಲಿನ ಶ್ರೇಷ್ಟವಾದ ಚ್ಯವನಪ್ರಾಶ್ ಲೇಹ್ಯವನ್ನು ಬಂಟ್ವಾಳ ತಾಲೂಕಿನ ಆಶಾ ಕಾರ್ಯಕರ್ತೆಯರಿಗೆ ಇಂದಿಲ್ಲಿ ವಿತರಿಸಲಾಯಿತು.

ವೈದ್ಯಾಧಿಕಾರಿ ಡಾ| ಮಣಿಕರ್ಣಿಕ ಇವರ ನೇತೃತ್ವದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಶಾಸಕರ ಕಚೇರಿಯಲ್ಲಿ ಇಂದು ಸಾಂಕೇತಿಕವಾಗಿ ವಿತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬಂಟ್ವಾಳ ತಾಲೂಕಿನ ಆಶಾ ಕಾರ್ಯಕರ್ತೆಯರಿಗೆ ಶುಭಾರೈಸಿದರು.

ಚ್ಯವನಪ್ರಾಶ ಲೇಹ್ಯವು ಆರ್ಯುವೇದದಲ್ಲಿ ಉಲ್ಲೇಖವಾಗಿರುವಂತೆ ಶ್ರೇಷ್ಠ ರಸಾಯನ. ದೇಹದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ದಿವ್ಯೌಷದ. ಈಗಾಗಲೇ ಕೊರೊನಾ ವಿರುದ್ದ ಹಗಲಿರುಳು ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಉದ್ದೇಶದಿಂದ ಚ್ಯವನಪ್ರಾಶನವನ್ನು ವಿತರಿಸುವ ಉತ್ತಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಂಟ್ವಾಳ ತಾಲೂಕಿನಲ್ಲಿ ಇಂದಿನಿಂದ ಒಟ್ಟು 351 ಆಶಾ ಕಾರ್ಯಕರ್ತೆಯರಿಗೆ ವಿತರಿಸಲಾಗುವುದು ಎಂದು ಶಾಸಕ ರಾಜೇಶ್ ಉಳಿಪ್ಪಾಡಿಗುತ್ತು ತಿಳಿಸಿದರು.

ಚ್ಯವನಪ್ರಾಶದಲ್ಲಿ ನೆಲ್ಲಿಕಾಯಿ, ಅಮೃತಬಳ್ಳಿ, ಆಶ್ವಗಂಧ, ಯಷ್ಟಿಮಧು ಜೇನು ತುಪ್ಪ, ತುಪ್ಪ ಇತ್ಯಾದಿ ಜೀವನೀಯ ಅಷ್ಟವರ್ಗ ದ್ರವ್ಯಗಳನ್ನೊಳಗೊಂಡಿದ್ದು, ಆರೋಗ್ಯವಂತ ಮಾನವನ ಶರೀರದಲ್ಲಿ ಯಾವುದೇ ರೋಗ ಬಾರದಂತಹ ರೋಗನಿರೋಧಕ ಶಕ್ತಿಯನ್ನು ವೃದ್ದಿಸುವ ಔಷಧ ಎಂದು ಡಾ| ಮಣಿಕರ್ಣಿಕ ಅವರು ತಿಳಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here