ಗ್ರಾಮೀಣ ಭಾಗದ ವಿದ್ಯಾಥಿರ್üಗಳಿಗೆ ಅನುಕೂಲಕರ ಶಿಕ್ಷಣ ಸಂಸ್ಥೆ
ಮುಂಬಯಿ, ಜೂ.03: ಉಡುಪಿಯ ಅಷ್ಟ ಮಠಗಳಲ್ಲಿ ಒಂದಾದ ಸೋದೆ ಶ್ರೀ ವಾದಿರಾಜ ಮಠವು ಧಾರ್ಮಿಕ ಕ್ಷೇತ್ರಗಳಲ್ಲಿ ನಡೆಸಿರುವ ಅನನ್ಯವಾದ ಸೇವೆಯ ಜೊತೆಗೆ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿಯೂ ತನ್ನನ್ನು ಸಮಾಜಕ್ಕೆ ತೆರೆದುಕೊಂಡಿದೆ. ಸೋದೆ ಮಠದ ಶ್ರೀ ವಿಶ್ವೇಂದ್ರ ತೀರ್ಥ ಶ್ರೀಪಾದರು ಸ್ವಾತಂತ್ರ ಪೂರ್ವದಲ್ಲೇ ಉಡುಪಿ ಸಮೀಪದ ಇನ್ನಂಜೆ ಗ್ರಾಮದಲ್ಲಿ ಸನಿವಾಸಿ ಮಾದರಿಯಲ್ಲಿ ಪ್ರಾಥಮಿಕ ಹಾಗು ಪ್ರೌಢಶಾಲೆ ಸ್ಥಾಪಿಸಿ, ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಆ ಕಾಲದ ಅನೇಕ ವಿದ್ಯಾಥಿರ್üಗಳ ಉಜ್ವಲ ಭವಿಷ್ಯಕ್ಕೆ ದಾರಿದೀಪವಾಗಿದ್ದಾರೆ. ವಿಶ್ವೇಂದ್ರ ತೀರ್ಥರ ಬಳಿಕ ಪೀಠವನ್ನು ಅಲಂಕರಿಸಿದ ಶ್ರೀ ವಿಶ್ವೋತ್ತಮ ತೀರ್ಥ ಶ್ರೀಪಾದರು ತಮ್ಮ ಗುರುಗಳು ಸ್ಥಾಪಿಸಿದ ಸಂಸ್ಥೆಗಳನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದರು.
ಪ್ರಸ್ತುತ ಪೀಠಾಧಿಪತಿಗಳಾದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು, ತಮ್ಮ ಪೂರ್ವಾಚಾರ್ಯರು ಸ್ಥಾಪಿಸಿದ ವಿದ್ಯಾ ಸಂಸ್ಥೆಗಳನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದುದು ಮಾತ್ರವಲ್ಲದೆ, ಪ್ರಸ್ತುತ ಕಾಲಕ್ಕೆ ಗ್ರಾಮೀಣ ಭಾಗದ ವಿದ್ಯಾಥಿರ್üಗಳಿಗೆ ಅನುಕೂಲವಾಗುವ ಉದ್ದೇಶದಿಂದ ಶ್ರೀ ಮಧ್ವ ವಾದಿರಾಜ ತಾಂತ್ರಿಕ ವಿದ್ಯಾಲಯವನ್ನು ಉಡುಪಿಗೆ ಸಮೀಪದ ಬಂಟಕಲ್ ಎಂಬಲ್ಲಿ ಸ್ಥಾಪಿಸಿ ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ.
ಗ್ರಾಮೀಣ ಭಾಗದಲ್ಲಿದ್ದರೂ ವಿದ್ಯಾಥಿರ್üಗಳಿಗೆ ಜಾಗತಿಕ ಗುಣಮಟ್ಟದ ಶಿಕ್ಷಣ ನೀಡುತ್ತಾ ವಿದ್ಯಾಥಿರ್üಗಳ ಉತ್ತಮ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುತ್ತಿರುವ ಈ ವಿದ್ಯಾ ಸಂಸ್ಥೆಗೆ ಈಗ ದಶಮಾನದ ಸಂಭ್ರಮ. ಪ್ರಸ್ತುತ ವಿಷಮ ಪರಿಸ್ಥಿತಿಯಲ್ಲಿ ಹತ್ತು ವರ್ಷಗಳ ಸಾಧನೆಯನ್ನು ಮೆಲುಕು ಹಾಕುತ್ತಾ ಸಂಭ್ರಮದ ದಶಮಾನೋತ್ಸವವನ್ನು ವೈಭವೋಪೇತವಾಗಿ ಆಚರಿಸುವ ಬದಲು, ಸರಳವಾಗಿ ನಮ್ಮ ಸಂಸ್ಥೆಯು ಬೆಳೆದು ಬಂದ ರೀತಿಯನ್ನು ನಿಮ್ಮ ಮುಂದಿಡುವ ಪ್ರಯತ್ನ ಮಾಡುತ್ತೇವೆ. ಅಲ್ಲದೆ, ರಾಷ್ಟ್ರಾದ್ಯಂತ ಇರುವ ಲಾಕ್ ಡೌನ್ ಪ್ರಯುಕ್ತ ಶೈಕ್ಷಣಿಕ ಚಟುವಟಿಕೆಗಳು ಕಾಲೇಜಿನ ಆವರಣದಲ್ಲಿ ನಡೆಯದೆ ಇದ್ದರೂ, ವಿದ್ಯಾಥಿರ್üಗಳಿಗೆ ನಿರಂತರವಾಗಿ ಅಧ್ಯಯನದಲ್ಲೇ ಇರುವಂತೆ ಮಾಡುವ ಪ್ರಯುಕ್ತ ನಾವು ನಡೆಸಿದ ಪ್ರಯತ್ನಗಳು ಹಾಗೂ ಅದನ್ನು ವಿದ್ಯಾಥಿರ್üಗಳು ಸ್ವೀಕರಿಸಿದ ಪರಿ ಇವನ್ನೆಲ್ಲಾ ನಿಮ್ಮ ಮುಂದೆ ಇಡಲಿದ್ದೇವೆ.
ಸೋದೆ ವಾದಿರಾಜ ಮಠದಿಂದ ಪ್ರವರ್ತಿತವಾದ ಹಾಗೂ ನಿರಂತರವಾಗಿ ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿರುವ ಈ ಕಾಲೇಜಿನ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿದುಕೊಳ್ಳಲು ನಮ್ಮ ಸಂಸ್ಥೆಗೆ, ನಿಮಗೆ ಅನುಕೂಲವಾದ ಸಮಯದಲ್ಲಿ ಭೇಟಿ ಕೊಡಬಹುದು. ಹಾಗೆಯೇ ಈ ಕಾಲೇಜಿನ ಬಗ್ಗೆ ನಾವು ಕಳುಹಿಸುವ ನೈಜ ಮಾಹಿತಿಗಳನ್ನು, ನಿಮ್ಮ ಪರಿಚಯಸ್ಥ ಸಹೃದಯೀ ವಿದ್ಯಾಭಿಮಾನಿಗಳಲ್ಲಿ ಹಂಚಿಕೊಂಡು ಅವರು ಕೂಡ ನಮ್ಮ ಕಾಲೇಜಿನ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡಬಹುದು.
ಎಲ್ಲರೂ ಕೈಜೋಡಿಸಿದರೆ ವಿದ್ಯಾಸಕ್ತ ವಿದ್ಯಾಥಿರ್üಗಳಿಗೆ ಉತ್ತಮ ವಿದ್ಯಾಭ್ಯಾಸ ಒದಗಿಸುವ ವಿದ್ಯಾಸಂಸ್ಥೆಯನ್ನು ತೋರಿಸಿದ ಸಂತೃಪ್ತಿ ನಮಗಿರುತ್ತದೆ. ತನ್ಮೂಲಕ ಭವ್ಯ ಭಾರತದ ಉತ್ತಮ ಸತ್ಪ್ರಜೆಗಳನ್ನು ರೂಪಿಸಬೇಕೆಂಬ ಶ್ರೀ ವಿಶ್ವವಲ್ಲಭ ತೀರ್ಥರ ಕನಸು ನನಸಾಗುತ್ತದೆ.