Saturday 10th, May 2025
canara news

ಆತ್ಮಕಲ್ಯಾಣದಿಂದ ಲೋಕ ಕಲ್ಯಾಣ: ಧರ್ಮಸ್ಥಳದಲ್ಲಿ ಧರ್ಮ ನಿರಂತರವಾಗಿದೆ.

Published On : 08 Jun 2020   |  Reported By : Rons Bantwal


ಉಜಿರೆ: ಸತ್ಯ ಅಹಿಂಸೆ, ಕರುಣೆ, ಕ್ಷಮೆ, ಪರೋಪಕಾರ, ದೀನ ದಲಿತರ ಸೇವೆ ಮೊದಲಾದ ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಬೇಕು. ಮನ-ವಚನ-ಕಾಯದಿಂದ ಪರಿಶುದ್ಧರಾಗಿ ಶ್ರದ್ಧಾ-ಭಕ್ತಿಯಿಂದ ನಿತ್ಯವೂ ಧರ್ಮದ ಅನುಷ್ಠಾನ ಮಾಡಬೇಕು. ಆತ್ಮ ಕಲ್ಯಾಣದಿಂದ ಲೋಕ ಕಲ್ಯಾಣವಾಗುತ್ತದೆ ಎಂದು ಪೂಜ್ಯ ಆಚಾರ್ಯ ಶ್ರೀ 108 ಮಹಾಸಾಗರ ಮುನಿ ಮಹಾರಾಜರು ಹೇಳಿದರು.

ಅವರು ಧರ್ಮಸ್ಥಳದಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಗುರುವಾರ ಮಂಗಲ ಪ್ರವಚನ ನೀಡಿದರು.

ದಯೆ ಇದ್ದಲ್ಲಿ ಧರ್ಮ ಇದೆ. ದಯೆಯೇ ಧರ್ಮದ ಮೂಲವಾಗಿದೆ. ಸರ್ವಧರ್ಮ ಸಮನ್ವಯ ಕೇಂದ್ರವಾದ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ನಿತ್ಯ ಮಾಡುತ್ತಿರುವ ಬಹುಮುಖಿ ಸಮಾಜಸೇವೆ ಹಾಗೂ ಧರ್ಮ ಪ್ರಭಾವನಾ ಕಾರ್ಯಗಳ ವಿಶ್ವಕ್ಕೆ ಮಾದರಿಯಾಗಿವೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಮುನಿಗಳ ದರ್ಶನ, ಸೇವೆ ಹಾಗೂ ಆಹಾರದಾನದಿಂದ ಕರ್ಮಗಳು ಕೊಳೆ ಕಳೆದು ಪುಣ್ಯ ಸಂಚಯವಾಗುತ್ತದೆ ಎಂದು ಅವರು ಹೇಳಿದರು.

ಪರಿಚಯ: ಮಹಾರಾಷ್ಟ್ರದಲ್ಲಿ 1943ರಲ್ಲಿ ಅತಗೊಂಡರಾಯ ಪಾಟೀಲ್ ಮತ್ತು ರುಕ್ಮಿಣಿ ದಂಪತಿ ಮಗನಾಗಿ ಜನಿಸಿದ ಇವರು 19ನೇ ವರ್ಷ ಪ್ರಾಯದಲ್ಲಿ ಕ್ಷುಲ್ಲಕ ದೀಕ್ಷೆ ಪಡೆದರು. ನಿತ್ಯವೂ ಜಪ,ತಪ, ಧ್ಯಾನ, ಸ್ವಾಧ್ಯಾಯದೊಂದಿಗೆ ಆತ್ಮಕಲ್ಯಾಣ ನಿರತರಾದ ಪೂಜ್ಯರು 9800 ಬಾರಿ ಉಪವಾಸವ್ರತ ಮಾಡಿದ್ದಾರೆ. ರಿದ್ಧಿ-ಸಿದ್ಧಿಯಲ್ಲಿ ಪರಿಣತರು.

ನಾಳೆ ಶನಿವಾರ ಧರ್ಮಸ್ಥಳದಿಂದ ಉಜಿರೆ, ವೇಣೂರು, ಮೂಡಬಿದ್ರೆಗಾಗಿ ಶಿರಸಿ ಮೂಲಕ ಪೂಜ್ಯರು ವಿಹಾರ ಮಾಡಲಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here