ಮುಂಬಯಿ ಕನ್ನಡಿಗರಿಂದ ವ್ಯಾಪಕ ಆಕ್ರೋಶ-ತೀವ್ರ ಖಂಡನೆ
ಮುಂಬಯಿ, ಜೂ.06: ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವಿರೇಂದ್ರ ಹೆಗ್ಗಡೆ ಅವರು ಕರುನಾಡ ಮುಂಬಯಿ ಮಂದಿಯನ್ನು ಊರಿಗೆ ಆರು ತಿಂಗಳು ಬರಲೇಬೇಡಿ ಎಂಬುವುದನ್ನು ಮಾಧ್ಯಮದ ಮೂಲಕ ಕಠೋರವಾಗಿ ಹೇಳಿಕೆ ನೀಡಿದನ್ನು ಮುಂಬಯಿ ತುಳು ಕನ್ನಡಿಗರು ತೀವ್ರವಾಗಿ ಮತ್ತು ವ್ಯಾಪಕವಾಗಿ ಖಂಡಿಸಿದ್ದಾರೆ. ನಾವು ಮುಂಬಯಿಯಲ್ಲಿ ಕಷ್ಟಪಟ್ಟು ದುಡಿದು ನಮ್ಮ ಬದುಕನ್ನು ಕಟ್ಟಿಕೊಂಡು ನಮ್ಮೂರನ್ನು ಬೆಳಗಿಸಿದವರು ಅಗತ್ಯವಿದ್ದರೆ ಕೃಷಿ ಕೂಡ ಮಾಡುತ್ತೇವೆ ಅಥವಾ ವ್ಯಾಪಾರ ಕೂಡ ಮಾಡುತ್ತೇವೆ. ಆದರೆ ಸೋತು ಕುಳಿತು ಕೊಳ್ಳುವ ಜಾಯಮಾನದವರು ಮುಂಬಯಿ ತುಳುಕನ್ನಡಿಗರು ಖಂಡಿತ ಅಲ್ಲ. ಇನ್ನೊಮ್ಮೆ ಎದ್ದು, ಗೆದ್ದು ಬರುತ್ತೇವೆ ಇದಕ್ಕೆ ಮಂಜುನಾಥನ ಕೃಪೆ ಕೂಡ ನಮಗಿದೆ ಎಂದು ಮಹಾನಗರದ ನಾಮಾಂಕಿತ ಸಮಾಜ ಸೇವಕ, ಅಪ್ರÀತಿಮ ಸಂಘಟಕ ಎರ್ಮಾಳ್ ಹರೀಶ್ ಶೆಟ್ಟಿ ಪ್ರತಿಕಿಯಿಸಿದ್ದಾರೆ.
ಬೊಂಬಯಿನಿಂದ ಬಂದವರಿಂದ ಆದ ಸಮಸ್ಯೆ ಹೊರತು ಪಡಿಸಿ ಅವರು ಬರಬಾರದಿತ್ತು. ಸರಕಾರದಲ್ಲಿ ಎಷ್ಟು ಒತ್ತಡ ತಂದರು. ರಾಜಕಾರಣಿಗಳ ಮತ್ತು ಮಾಧ್ಯಮಗಳ ಮೇಲೂ ಒತ್ತಡ ತಂದÀು ಒತ್ತಡ ತಂದು ಊರಿಗೆ ಬಂದಿದ್ದಾರೆ. ಊರಿಗೆ ಬಂದು ಏನು ಮಾಡಿದ್ದಾರೆ..? ಏನೂ ಮಾಡಿಲ್ಲ. ಸುಮ್ಮನೆ ಊರಿಗೆ ಬರಬೇಕು ಅಂದು ಊರಿಗೆ ಬಂದಿದ್ದಾರೆ ಅಷ್ಟೇ. ಈಗ ಕೂತಿದ್ದಾರೆ. ಅವರೂ ಕ್ವಾರಂಟೈನ್‍ನಲ್ಲಿದ್ದಾರೆ. ಮನೆ ಸುತ್ತಲೂ ಕಾಯಿಲೆ ಹಬ್ಬಿದ್ದಾರೆ. ಹಾಗಾಗಿ ಈಗಲೂ ಬೊಂಬಯಿನವರಿಗೆ ಹೇಳುವುದು ನೀವು ಈಗ ಈ ಸಮಯದಲ್ಲಿ ಆರು ತಿಂಗಳು ಖಂಡಿತಾವಾಗಿ ಊರಿಗೆ ಬರಬೇದಿರಿ. ಇಲ್ಲಿ ಬಂದು ನಿಮಗೆ ಹಳ್ಳಿಯಲ್ಲಿ ಮಾಡಕ್ಕೇನಿಲ್ಲ. ವಿಷಯ ನಿಮಗೆ ಮರೆತು ಹೋಗಿದೆ. ವ್ಯವಹಾರ ಬೊಂಬಯಿಯಲ್ಲಿರುವುದು. ಯಾಕೆ ಬರ್ತೀರಿ..? ಅಲ್ಲೇ ಇದ್ದು ಬಿಡಿ. ಸ್ವಲ್ಪ ನಮಗೆ ನೆಮ್ಮದಿಯಿಂದ ಇರಕ್ಕೆಬಿಡಿ. ಬಾಕಿ ಜೀವನ ಮಾಮೂಲು, ನೆಮ್ಮದಿಯಿದ್ದರೆ ಒಳ್ಳೆಯದು ಎಂದು ಹೆಗ್ಗಡೆಯವರು ತಮ್ಮ ಮನದ ಮಾತುಗಳನ್ನು ವಾಹಿನಿವೊಂದರ ಮೂಲಕ ತಿಳಿಸಿದ್ದು ಇದು ಮುಂಬಯಿ ಅಲ್ಲಿನ ಅಪಾರ ಸಂಖ್ಯೆಯ ಭಕ್ತರ ಮತ್ತು ಸಮುದಾಯಗಳ ಮನಸ್ಸಿಗೆ ಘಾಸಿಯನ್ನುಂಟುಮಾಡಿದೆ ಎಂದು ಹರೀಶ್ ಶೆಟ್ಟಿ ತಿಳಿಸಿದ್ದಾರೆ.
ಧರ್ಮಾಧಿಕಾರಿಗಳು ಧರ್ಮದ ಮಾತನ್ನು ಆಡಬೇಕೇ ಹೊರತು ಓರ್ವ ಪೂಜ್ಯನೀಯ ಧರ್ಮಾಧಿಕಾರಿ ಆಗಿದ್ದು ಈ ರೀತಿಯ ಹೇಳಿಕೆಗಳನ್ನು ಮಾಧ್ಯಮಗಳ ಮೂಲಕ ತಿಳಿಪಡಿಸುವುದು ಸಮಂಜಸವಲ್ಲ ಮತ್ತು ಇವರಿಗೆ ಶೋಭೆ ತರುವಂತಹದ್ದಲ್ಲ. ಮುಂಬಯಿನ ಅಪಾರ ಸಂಖ್ಯೆಯ ಮಂದಿ ಮಂಜುನಾಥನ ಪರಮ ಭಕ್ತರು ಆದರೆ ನೀವು ಅವರೊಡನೆ ತೋರಿದ ತಾರತಮ್ಯ ಮಂಜುನಾಥ ಕೂಡ ಕ್ಷಮಿಸಲಾರನು. ನೀವು ಧರ್ಮಾಧಿಕಾರಿಯಾಗಿ ಧರ್ಮದ ಬಗ್ಗೆ ಮಾತನಾಡಿ ಸಾಮಾಜಿಕ ಒಗ್ಗಟ್ಟಿನ ಬಗ್ಗೆ ಹೇಳಿಕೆ ನೀಡಿ ಮಾನವೀಯತೆಯ ಹರಿಕಾರನಾಗುತ್ತಿದ್ದರೆ ಉತ್ತಮವಾಗಿತ್ತು. ಜನರು ಸಂಕಷ್ಟದಲ್ಲಿ ಇರುವಾಗ ನೀವು ಅವರಿಗೆ ಕೈಲಾದ ಸಹಾಯ ಮಾಡಬೇಕಿತ್ತು. ಅದು ಬಿಟ್ಟು ಪ್ರಚಾರದ ತಂತ್ರ ಧರ್ಮಾಧಿಕಾರಿ ಅವರಿಗೆ ಒಳ್ಳೆಯದಲ್ಲ ಎಂದು ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.
ಕೊರೊನ ಬಂದು ಮೂರು ತಿಂಗಳಾದರೂ ಇಷ್ಟರವರೆಗೆ ನೀವು ಮಾತನಾಡದೆ ಯಾಕೆ ಸುಮ್ಮನಿದ್ದಿರಿ.? ಇಂತಹ ಮನಸ್ಥಿತಿಯಲ್ಲಿ ನೀರಿರುವಾಗ ನಿಮ್ಮಿಂದ ನಾವು ಹೆಚ್ಚೇನೂ ನಿರೀಕ್ಷಿಸುವಂತಿಲ್ಲ. ಆದರೂ ಕೂಡ ಮುಂಬಯಿ ಮಂದಿಗೆ ಊರಿಗೆ ಬರಲೇಬೇಡಿ ಅನ್ನಲೂ ಯಾರಿಗೂ ಹಕ್ಕಿಲ್ಲ. ಯಾಕೆಂದರೆ ನಾವು ನಿಮ್ಮಲ್ಲಿ ಅಥವಾ ಕ್ಷೇತ್ರಕ್ಕೆ ಬಂದಿಲ್ಲ ನಾವು ನಮ್ಮ ಸ್ವಂತ ಪೂರ್ವಾರ್ಜಿತ ಅಥವಾ ನಾವೇ ಮಾಡಿದ ನಮ್ಮನಮ್ಮ ಮನೆಗೆ ಬಂದಿದ್ದು ಮತ್ತು ಬರುತ್ತಿದ್ದೇವೆ. ಇಲ್ಲಿ ಬರಲು ನಿಮ್ಮ ಅಪ್ಪನೆಯ ಅಗತ್ಯ ಖಂಡಿತ ಇಲ್ಲ ಎಂದು ನಿಮ್ಮ ಮಾತನ್ನು ನಾವು ಒಕ್ಕೊರಳಿನಿಂದ ಖಂಡಿಸುತ್ತೇವೆ.
ಧರ್ಮದಸ್ಥಳದಲ್ಲಿ ಕುಳಿತುಕೊಂಡು ಜನರು ಜನರನ್ನು ದೂರಮಾಡುವ ಕೆಲಸ ಮಾಡುವುದು ಖಂಡಿತ ಒಳ್ಳೆಯದಲ್ಲ. ಇದನ್ನು ಮಂಜುನಾಥ ಕೂಡ ನೋಡುತ್ತಿರಬಹುದು. ಯಾಕೆಂದರೆ ಅವನು ದಯಾಮಯ ಪ್ರತಿಯೊಬ್ಬರ ಕಷ್ಟ ಸಂಕಷ್ಟಗಳಿಗೆ ಸ್ಪಂದಿಸುವವ. ನಿಮ್ಮಂತೆ ಜನ ನೋಡಿ ಮಾತನಾಡುವ ಮಾತುಗಾರನಲ್ಲ. ತಾವು ಸಾಧ್ಯವಾದರೆ ಮುಂಬಯಿ ಮಂದಿಯ ಕಣ್ಣೀರನ್ನು ಒರೆಸುತ್ತಾ, ಸ್ವಲ್ಪ ಮಾನವೀಯತೆಯ ಕೆಲಸ ಮಾಡಿ. ಆದರೆ ಅವಿರತ ಶ್ರಮಿಗಳ ಮನಸ್ಸು ಕರಗಿಸುವ ಮಾತುಗಳನ್ನು ಆಡಬೇಡಿ ಎಂದೂ ಮುಬಯಿಗರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ನಿಮ್ಮ ಕಠೋರ ಮಾತುಗಳು ಮುಂಬಯಿ ಕನ್ನಡಿಗರ ಮನಸ್ಸನ್ನು ಘಾಸಿಗೊಳಿಸಿದೆ ನಾವು ಕೂಡ ಕನ್ನಡಿಗರೇ. ನಮ್ಮ ನಮ್ಮೊಳಗೆ ದಯವಿಟ್ಟು ತಾರತಮ್ಯ ಮಾಡದಿರಿ. ತನ್ನೂರಿಗೆ ಹೋಗಲಿಚ್ಫಿಸುವ ಉಳಿದ ಕನ್ನಡಿಗರ ಮನಗಳೂ ಕೂಡ ನಿಮ್ಮ ಮಾತಿನಿಂದ ನುಚ್ಚುನೂರಾಗಿವೆ. ಇಲ್ಲಿಯ ಕನ್ನಡಿಗರ ಜೀವನ ವಾಸ್ತವ್ಯತೆ, ಹಣಕಾಸು ಒತ್ತಡ, ಕಷ್ಟ ಸಂಕಷ್ಟಗಳ, ಭಾವನೆಗಳನ್ನು ಒಮ್ಮೆ ಅವಲೋಕಿಸಿ ನಂತರ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಿ. ಸಾವಿನ ಭಯದಲ್ಲಿ ಬದುಕುವ ವೇದನೆ ಎಷ್ಟು ಅಂತ ಮುಂಬಯಿ ಮಂದಿಯಲ್ಲಿ ಪ್ರಥಮತಃ ತಿಳಿಯಿರಿ. ಆವಾಗಲೇ ನಿಮಗೆ ಅವರ ಉತ್ತರದ ಬದಲು ಕಣ್ಣೀರ ಹೊಳೆ ಅರಿಯುವುದು. ಮಾತನಾಡುವ ಮಂಜುನಾಥನೇ ಇನ್ನಾದರೂ ಮಾತನಾಡು, ಮುಂಬಯಿ ಮಂದಿಯ ಕಷ್ಟಸುಖಗಳಿಗೆ ಸ್ಪಂದಿಸು. ನಿನ್ನದೇ ಮಕ್ಕಳನ್ನು ದಾರಿಗೆ ಹಾಕಬೇಡ. ಅವರೆಲ್ಲರ ಆಕಾಂಕ್ಷೆಗಳಿಗೆ ದಾರಿದೀಪವಾಗು. ಮಾತುಗಳ ರಾಜಕೀಯದಲ್ಲಿ ಕೊಚ್ಚಿ ಹೋಗುತ್ತಿರುವ ಜನರಿಗೆ ಸದ್ಬುದ್ಧಿಯನ್ನು ಕೊಡು. ಕೊರೊನ ಮಹಾಮಾರಿಯಿಂದ ಎಲ್ಲರನ್ನೂ ರಕ್ಷಿಸು ಎಂದು ಮಂಜುನಾಥನ ಮೊರೆಹೋಗಿದ್ದಾರೆ.