ಡಾ| ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಬಿನ್ನಹ
ಮುಂಬಯಿ, ಜೂ.08: ಕರ್ನಾಟಕದಾದ್ಯಂತ ಇದೀಗ ಕೋವಿಡ್ 19 ವ್ಯಾಪಕವಾಗಿ ಹರಡುತ್ತಿದ್ದು ಈ ನಿಟ್ಟಿನಲ್ಲಿ ಸಮಸ್ತ ಸಮುದಾಯದ ಜನತೆ ಎಚ್ಚೆತ್ತು ಈ ಸಾಂಕ್ರಾಮಿಕ ರೋಗ ಹರಡದಂತೆ ಸ್ವಯಂಪ್ರೇರಿತರಾಗಿ ತಮ್ಮ ಕರ್ತವ್ಯವನ್ನು ಪಾಲಿಸಿ ಆರೋಗ್ಯದಾಯಕ ಸಮಾಜ ನಿರ್ಮಾಣಕ್ಕೆ ಬದ್ಧರಾಗುವಂತೆ ಸ್ವಸ್ತಿಶ್ರೀ ಭಟ್ಟಾರಕ ನಗರ ಜೈನಪೇಟೆ ಜೈನಕಾಶಿ ಮಠದ ಡಾ| ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ಕೋರಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊರೋನಾ ವೈರಸ್ ಹರಡದಂತೆ ಪ್ರಕಟಿಸಿದ ಕರಪತ್ರ ಓದಿ ಅರ್ಥ ಮಾಡಿಕೊಂಡು ಸ್ವಯಂ ಕೈಗೊಳ್ಳಲೇ ಬೇಕಾದ ನಿಯಮವಳಿಗಳನ್ನು ನಾಡಿನ ಜನತೆ ತಪ್ಪದೆ ಪಾಲಿಸಬೇಕು. ದೇಶದ ನಾನಾ ಭಾಗಗಳಿಂದ ಬಂದ ನಮ್ಮ ನಾಡಿನ ಎಲ್ಲಾ ಹಿರಿಕಿರಿಯ ಬಾಂಧವರು ಕ್ವಾರಂಟೈನ್ ನಿಯಮವಳಿ ಕಡ್ಡಾಯವಾಗಿ ಪಾಲನೆ ಮಾಡುತ್ತಾ ಸಾಮಾಜಿಕ ಅಂತರ ಕಾಪಾಡಿ ಸೂಕ್ತವಾದ ಮಾಸ್ಕ್ ಧರಿಸಿ ಮಾರ್ಜಕ ಬಳಸಿ ಕೈ ಕಾಲು ಸ್ವಚ್ಚ ಗೊಳಿಸುತ್ತಾ ತಮ್ಮ ಜವಾಬ್ದಾರಿಯನ್ನು ಕಾಯ್ದು ಸಮಾಜದ ಹಿತ ಕಾಪಾಡುವಂತೆ ಸ್ವಸ್ತಿಶ್ರೀ ಚಾರುಕೀರ್ತಿ ಕರೆ ನೀಡಿದ್ದಾರೆ.
ಅನವಶ್ಯಕವಾಗಿ ಕಣ್ಣು, ಮೂಗು ಬಾಯಿಯನ್ನು ಆಗಾಗ ಸ್ಪರ್ಶಿಸದೆ ಅರೋಗ್ಯ ಸ್ಥಿರ ವಾಗುವಂತೆ ಎಚ್ಚರಿಕೆಯಿಂದ ಇದ್ದು ಅನಗತ್ಯವಾಗಿ ಹೊರಗಡೆ ಪ್ರಯಾಣ ಮಾಡುದನ್ನು ತಡೆಯಲ್ಲಿರಿಸಬೇಕು. ಮಕ್ಕಳನ್ನು ಬಯಲಲ್ಲಿ ಗುಂಪು ಗುಂಪಾಗಿ ಆಟ ಆಡಲು ಬಿಡುದು ನಾವೇ ರೋಗ ವನ್ನು ಆಹ್ವಾನಿಸಿದಂತೆ ಊರವರಾಗಲಿ ಪರ ಊರವರಾಗಲಿ ಕೊರೋನಾ ಪೀಡಿತ ರೋಗಿ ಗಳನ್ನು ಅಂತರ ಕಾಯ್ದು ಕೊಂಡು ಚಿಕಿತ್ಸೆಯನ್ನು ಧೈರ್ಯ ದಿಂದ ಎದುರಿಸುವಂತೆ ಸಾಕಷ್ಟು ಅಂತರ ಕಾಯ್ದು ಅವರ ಕುಟುಂಬ ಸದಸ್ಯರಿ ಗೆ ಧೈರ್ಯ ತುಂಬಬೇಕು. ಎಲ್ಲೆಂದರಲ್ಲಿ ತಿರುಗಾಡದಂತೆ ಎಚ್ಚರಿಕೆ ವಹಿಸುವುದು ಕೊರೋನಾ ರೋಗಿಗಳ ಉಪಚಾರ ಮಾಡುವವರನ್ನು ಗೌರವ ಹಾಗೂ ಪ್ರೀತಿ ವಾತ್ಸಲ್ಯಗಳಿಂದ ಕಾಣುವಂತೆ ಸಲಹಿದ್ದಾರೆ.
ರೋಗಿಯನ್ನು ವೈದ್ಯರು ದಾಧಿ ಯರು ಕೊರೋನಾ ರಕ್ಷಣಾ ದಳ ಹಾಗೂ ಸಾರ್ವಜನಿಕರು ಕರುಣೆ ಅನುಕಂಪ ದಿಂದ ನೋಡಿಕೊಳ್ಳಏಕು. ಕೊರೋನಾ ಎಂಬ ಮಹಾಮಾರಿಯನ್ನು ಶುದ್ಧ ಆಹಾರ ಶುದ್ಧ ನೀರು ಒಂದೆ ಕಡೆ ಅಂತರ ಕಾಯ್ದು ಮನೆಯಲ್ಲಿ ರುದರೊಂದಿಗೆ ರೋಗ ಹೊಡೆದೂಡಿಸ ಬಹುದು. ಸರಕಾರದ ನಿಯಮಗಳನ್ನು ಸರಕಾರಕ್ಕಾಗಿ ಕಾಯದೆ ಸರ್ವರಿಗೂ ಒಳಿತಾಗಲೆಂದು ಜನತಾ ಕರ್ಫ್ಯೂ ನಮಗೆ ನಾವೇ ಹೆರೋಣ ಕೊರೋನಾ ರೋಗಮುಕ್ತ ಭಾರತಕ್ಕೆ ಹಳ್ಳಿ ಪಟ್ಟಣ ಎನ್ನುವ ಬೇಧ ಮಾಡದೆ ಸರ್ವರ ಒಳಿತಿಗಾಗಿ ಪಣ ತೊಡೊಣ ಎಂದೂ ಡಾ| ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯರು ಈ ಮೂಲಕ ತಿಳಿಸಿದ್ದಾ