ಮುಂಬಯಿ (ಬಂಟ್ವಾಳ), ಜೂ.10: ಜಾಗತಿಕವಾಗಿ ಪಸರಿಸಿದ್ದ ಕೋವಿಡ್ ಸಾಂಕ್ರಮಿಕ ರೋಗದಿಂದಾಗಿ ಜನರಲ್ಲಿ ಶಾಲಾ ಪ್ರಾರಂಭದ ಬಗ್ಗೆ ಪರವಿರೋಧಗಳು, ಚರ್ಚೆಗಳು ನಡೆಯುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರದ ಸಂಚಾಲಕ ಡಾ| ಕಲ್ಲಡ್ಕ ಪ್ರಭಾಕರ ಭಟ್ ಪ್ರತಿಕ್ರಿಯಿಸಿ ಈ ಶೈಕ್ಷಣಿಕ ವರ್ಷದಲ್ಲಿ ಶಾಲೆ ಪ್ರಾರಂಭಿಸುವುದು ಬೇಡ ಎಂದು ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದಾರೆ.
ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ಪೆÇೀಷಕರ ಸಭೆ-ಶಾಲಾ ಪ್ರಾರಂಭದ ಬಗ್ಗೆ ಪೆÇೀಷಕರ ವಿಶೇಷ ಸಭೆ ಇಂದಿಲ್ಲಿ ಆಯೋಜಿಸಲಾಗಿದ್ದು, ಸಭೆಯಲ್ಲಿ ಈ ವರ್ಷ ಶಾಲಾರಂಭ ಬೇಡವೇ ಬೇಡ ಎಂಬ ನಿರ್ಧಾರಕ್ಕೆ ಬರಲಾಯಿತು.
ಕೊರೋನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ಆರಂಭ ಮಾಡುವುದರಿಂದ ಶಾಲಾಡಳಿತ ಮಂಡಳಿ, ಮಕ್ಕಳು, ಪಾಲಕರು, ಶಿಕ್ಷಕರು ಹಾಗೂ ಶಿಕ್ಷಕೇತರ ವೃಂದದಲ್ಲಿ ಭಿನ್ನಾಭಿಪ್ರಾಯಗಳು ಮೂಡಿವೆ. ಇದೊಂದು ಸಾಂಕ್ರಮಿಕ ರೋಗವಾಗಿದ್ದ ಕಾರಣ ಶಾಲಾರಂಭಕ್ಕೆ ಇದು ಸೂಕ್ತ ಸಮಯವಲ್ಲ ಮತ್ತು ಸಮಂಜಸವೂವಲ್ಲ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಹಾಗಾಗಿ ಮುಂದಿನ ವರ್ಷವೇ ಶಾಲೆ ಪ್ರಾರಂಭಿಸಿ ಎಂದು ಡಾ| ಕಲ್ಲಡ್ಕ ಭಟ್ ಹೇಳಿದ್ದಾರೆ. ಇದರ ಜೊತೆಯಲ್ಲಿ ಶಾಲಾ ಶುಲ್ಕದ ನೆಪದಲ್ಲಿ ಶಾಲಾ ಮತ್ತು ಕಾಲೇಜುಗಳಿಂದ ಸುಲಿಗೆ ನಡೆಯುವಂತಹದ್ದು ಅಮಾನವೀಯ ಎಂದೂ ಡಾ| ಪ್ರಭಾಕರ ಭಟ್ ಅಭಿಪ್ರಾಯ ಪಟ್ಟಿದ್ದಾರೆ.