ಮುಂಬಯಿ (ಮೂಲ್ಕಿ), ಜೂ.10: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಚಿತ್ರಾಪು ಇಲ್ಲಿನ ಸ್ಮಶನಭೂಮಿಗೆ ಬೃಹನ್ಮುಂಬಯಿ ಅಲ್ಲಿನ ಹಿರಿಯ ತುಳು-ಕನ್ನಡಿಗ ರಾಜಕೀಯ ಧುರೀಣ, ಎನ್‍ಸಿಪಿ ಪಕ್ಷದ ಉತ್ತರ ಮಧ್ಯ ಜಿಲ್ಲಾ ನಿರೀಕ್ಷಕ ಲಕ್ಷ್ಮಣ ಸಿ.ಪೂಜಾರಿ ಚಿತ್ರಾಪು ಇವರು ಅತಾಧುನಿಕ ಸ್ಟೀಲ್‍ನ ಶವಪಲ್ಲಕ್ಕಿ ಕೊಡ ಮಾಡಿದರು.
ಕೆಲವು ವರ್ಷಗಳ ಹಿಂದೆ ಕೊಡಮಾಡಿದ್ದ ಹಲಸಿನ ಮರದ ಶವಪಲ್ಲಕ್ಕಿಯು ಇದೀಗ ಹಳೆಯದಾಗಿದ್ದ ಕಾರಣ ಇತ್ತೀಚೆಗೆ ಗ್ರಾಮಸ್ಥರ ವಿನಂತಿಯ ಮೇರೆಗೆ ತಮ್ಮ ಹಿರಿಯರಾದ ವೆಂಕು ಬಾಲು ಪೂಜಾರಿ ಚಿತ್ರಾಪು ಇವರ ಸ್ಮರಣಾರ್ಥವಾಗಿ ಸ್ಟಿಲ್ ಶವಪಲ್ಲಕ್ಕಿ ಕೊಡಮಾಡಿದ್ದು ಕಳೆದ ಭಾನುವಾರ ಲಕ್ಷ್ಮಣ ಪೂಜಾರಿ ಕುಟುಂಬಸ್ಥÀರು ಇದನ್ನು ಸ್ಮಶನಭೂಮಿಗೆ ಸಮರ್ಪಿಸಿದರು. ಚಿತ್ರಾಪು ಬಿಲ್ಲವ ಸಂಘ ಮುಂಬಯಿ ಸಂಚಾಲಿತ ಶ್ರೀ ವಿರೋಭ ಬಾಲಲೀಲಾ ಭಜನಾ ಮಂದಿರ ಚಿತ್ರಾಪು ಇದರ ಭಜನಾ ಮಂಡಳಿಯ ಪದಾಧಿಕಾರಿಗಳು ಹಾಗೂ ಮಹಿಳಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದು ಸ್ಟೀಲ್ ಶವಪಲ್ಲಕ್ಕಿ ಬರಮಾಡಿ ಕೊಂಡÀು ಪೂಜಾರಿ ಪರಿವಾರದ ಸೇವೆಯನ್ನು ಸ್ಮರಿಸಿದರು.
ಜಾತಿ ಮತ ಬೇಧವಿಲ್ಲದೆ ಚಿತ್ರಾಪು ಪರಿಸರದಲ್ಲಿ ಮೃತ್ಯುವಶರಾದ ಪಾಥಿರ್üೀವ ಶರೀರಗಳನ್ನು ರವಾನಿಸಿ ಶವ ಸಂಸ್ಕಾರಕ್ಕೆ ಅನುಕೂಲಕರವಾಗುವಲ್ಲಿ ಶವಪಲ್ಲಕ್ಕಿ ಉಪಯೋಗಿಸಲಾಗುವುದು. ಭಜನಾ ಮಂಡಳಿಯು ಇದರ ವ್ಯವಸ್ಥೆ ಮತ್ತು ಜವಾಬ್ದಾರಿ ವಹಿಸಲಿದ್ದಾರೆ ಎಂದು ಲಕ್ಷ್ಮಣ ಸಿ.ಪೂಜಾರಿ ತಿಳಿಸಿದ್ದಾರೆ.