ಒಬ್ಬರನ್ನು ಕಂಡರೆ ಇನ್ನೊಬ್ಬರು ದ್ವೇಷಿಸುವ ಈ ಸಮಾಜದಲ್ಲಿ ತನ್ನೆಲ್ಲಾ ಸ್ವಾರ್ಥವನ್ನು ಬಿಟ್ಟು,ಜಾತಿ ಮತ ಧರ್ಮವನ್ನು ಮರೆತು ಎಲ್ಲರೂ ಸರಿಸಮಾನವಾಗಿ ಬದುಕಬೇಕು ಎಂಬ ಆಶಯದೊಂದಿಗೆ ತನ್ನಿಂದಾದ ಸಹಾಯವನ್ನು ಮಾಡುತ್ತ ಕಷ್ಟದಲ್ಲಿರುವವರಿಗೆ ಹೆಗಲಿಗೆ ಹಗಲನ್ನು ಕೊಟ್ಟು ಅದೆಷ್ಟೂ ಮಂದಿಗೆ ತನ್ನ ಪುಟ್ಟ ಏಂಜೇಲ್ ಪೌಂಡೇಶನ್ ಎಂಬ ಸಂಸ್ಧೆಯನ್ನು ಕಟ್ಟಿಕೊಂಡು ಬಡಜೀವಗಳಿಗೆ ಆಶ್ರಯವಾಗಿ ನಿಂತಿರುವ ಉಡುಪಿ ಕಲ್ಯಾಣಪುರದ ಏಂಜೇಲ್ ಪೌಂಡೇಶನ್ ನ ಸಂಸ್ಧಾಪಕ ರೋಬರ್ಟ್ ಡಿಸೋಜ ಅವರು.
`
ಇದೀಗ ಕಲ್ಲಮುಂಡ್ಕೂರಿನ ಸಮೀಪದ ಅಭಯ ಪಂಜಾಡಿ ಎಂಬಲ್ಲಿನ ಬಡ ಕುಟುಂಬದ ಗಣೇಶ್ ಪೂಜಾರಿ ಹಾಗೂ ಸಹೋದರರಿಗಾಗಿ ಏಂಜೇಲ್ ಪೌಂಡೇಶನ್ ಕಲ್ಯಾಣಪುರ ಹಾಗೂ ದಾನಿಗಳ ಸಹಾಯದಿಂದ ರೋಬರ್ಟ್ ರವರು ಸುಮಾರು 5.30 ಲಕ್ಷ ರೂ ವೆಚ್ಚದಲ್ಲಿ ಮನೆಯನ್ನು ನಿರ್ಮಿಸಿ ಕೊಟ್ಟಿದ್ದಾರೆ.ಮನೆ ಹಸ್ತಾಂತರ ಕಾರ್ಯಕ್ರಮವು ಸೋಮವಾರ ದಿವಸ ನಡೆದಿದ್ದು ಹಸ್ತಾಂತರ ಕಾರ್ಯಕ್ರಮದಲ್ಲಿ ಗಣೇಶ್ ಪೂಜಾರಿ ಹಾಗೂ ಸಹೋದರರಿಗೆ ಮನೆಯನ್ನು ಹಸ್ತಾಂತರಿಸಿ ಬಳಿಕ ಮಾತನಾಡಿದ ಅವರು ಉಡುಪಿ ಕಲ್ಯಾಣಪುರ ಏಂಜೇಲ್ ಪೌಂಡೇಶನ್ ನ ಸಂಸ್ಧಾಪಕ ರೋಬರ್ಟ್ ಅವರು ಸಮಾಜದಲ್ಲಿ ಮನುಷ್ಯ ಧರ್ಮ ವೆಂಬುವುದು ಶಾಶ್ವತವಾದ ಧರ್ಮವಾಗಿದೆ.ಮನುಷ್ಯ ಧರ್ಮ ವೆನೆಂಬುದನ್ನು ಅರಿತು ಬಾಳಿದರೆ ಸಮಾಜವು ಬದಲಾವಣೆಯತ್ತ ಸಾಗ ಬಹುದು. ಏಂಜಲ್ಸ್ ಫೌಂಡೇಶನ್ ಈಗಾಗಲೇ ಸರಿಯಾದ ಸೂರಿನ ವ್ಯವಸ್ಥೆ ಇಲ್ಲದೆ ಇರುವಂತಹ ಹಲವು ಬಡ ಕುಟುಂಬಗಳಿಗೆ ಮನೆಗಳನ್ನು ನಿರ್ಮಿಸಿ ಕೊಟ್ಟಿದೆ.ಇಂತಹ ಕಾರ್ಯ ಪೌಂಡೇಶನ್ ನಿಂದ ಇನ್ನು ಕೂಡ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಏಂಜಲ್ಸ್ ಫೌಂಡೇಶನ್ ನ ಉಪಾಧ್ಯಕ್ಷ ರೋನಾಲ್ಡ್ ಸುವಾರಿಸ್,ಉಡುಪಿ ಜಿಲ್ಲಾ ಗವರ್ನರ್ ಎನ್.ಎಮ್ ಹೆಗಡೆ,ಲಯನ್ಸ್ ಕ್ಲಬ್ ಮುಂಡ್ಕೂರು ಇದರ ಮಾಜಿ ಸದಸ್ಯ ಡಾ.ರಾಜರಾಮ್ ರೈ,ಮೂಡಬಿದಿರೆ ಉದ್ಯಮಿ ಚಂದ್ರಹಾಸ ಸನೀಲ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.