Saturday 10th, May 2025
canara news

ನಮ್ಮವರು ಕೊರೋನಾ ಬಂತೆದ್ದು ತಮ್ಮೂರಿಗೆ ಓಡಿಬರುತ್ತಿರುವುದಲ್ಲ

Published On : 12 Jun 2020   |  Reported By : Rons Bantwal


ತವರು ಮನೆಗೆ ಆಗಮಿಸುವವರನ್ನು ಅರ್ಥೈಸಿ ಬಾಳೋಣ: ಡಾ| ಪ್ರಭಾಕರ ಭಟ್

ಮುಂಬಯಿ (ಬಂಟ್ವಾಳ), ಜೂ.11: ಮುಂಬಯಿ-ಗಲ್ಫ್‍ವಾಸಿ ತುಳುಕನ್ನಡಿಗರು ಕೊರೋನಾ ಬಂತೆದ್ದು ಓಡಿ ತಮ್ಮೂರಿಗೆ ಬರುತ್ತಿರುವುದಲ್ಲ. ಶತಮಾನದ ಇತಿಹಾಸ ತಿಳಿಸುವಂತೆ ವಾರ್ಷಿಕವಾಗಿ ಎಪ್ರಿಲ್‍ನಿಂದ ಜೂನ್ ತಿಂಗಳ ತನಕ ಇವರೆಲ್ಲರೂ ತಮ್ಮ ಪರಿವಾರ ಸಹಿತ ಹುಟ್ಟೂರಲ್ಲೇ ಕಳೆಯುವಂತಹದ್ದು ಸ್ವಾಭಾವಿಕವಾಗಿದೆ. ಇದು ನಮ್ಮವರೆಲ್ಲರೂ ಒಪ್ಪಿಕೊಳ್ಳುವಂತಹ ಸತ್ಯವೇ ಸರಿ ಎಂದು ಅಖಂಡ ಕರ್ನಾಟಕದ (ವಿಶೇಷವಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಉಡುಪಿ) ಜನತೆಗೆ ಆರ್‍ಎಸ್‍ಎಸ್ ಮುಖಂಡ ಡಾ| ಪ್ರಭಾಕರ ಭಟ್ ಕಲ್ಲಡ್ಕ ಮನವರಿಸಿದ್ದಾರೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಬುದ್ಧಿವಂತರ, ಸಹೃದಯಿ, ಕಷ್ಟಕ್ಕೆ ಸ್ಪಂದಿಸುವ, ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ರಾಜಕೀಯವಾಗಿ ಪ್ರಸಿದ್ಧಿ ಪಡೆದಿರುವ ಜಿಲ್ಲೆ. ಕಳೆದ ಸುಮಾರು ಮೂರು ತಿಂಗಳಿಂದ ನಮ್ಮ ಜನರು ದೇಶ-ವಿದೇಶಗಳಲ್ಲಿ ಸಿಲುಕಿ ತೊಂದರೆಗೆ ಒಳಗಾಗಿದ್ದಾರೆ. ಕೆಲವು ಜನ ಕೆಲಸ ಕಳೆದುಕೊಂಡು, ಇನ್ನು ಕೆಲವರು ಕೊರೋನ ವ್ಯಾಪಿಸುತ್ತಿರುವಾಗ ನಮ್ಮ ಊರಲ್ಲಿ ಹೆಚ್ಚಿನ ರಕ್ಷಣೆ ಸಿಗಬಹುದೆಂಬ ಆಶಯದಿಂದ ನೂರಾರು ಮಂದಿ ತಮ್ಮ ಮನೆಗೆ (ತವರು ಮನೆಗೆ) ಮರಳಿದ್ದಾರೆ. ಇನ್ನಷ್ಟು ಮಂದಿ ಬರಲು ತಯಾರಿಯಲ್ಲಿದ್ದಾರೆ. ಕಳೆದ ಮೂರು ತಿಂಗಳಿಂದ ಕೆಲಸವಿಲ್ಲದೆ ಕೈಯಲ್ಲಿ ಇದ್ದ ಹಣವನ್ನೂ ಕಳೆದುಕೊಂಡು ಸಮಸ್ಯೆಯಲ್ಲಿದ್ದಾರೆ. ಇಂತಹ ತವರು ಮನೆಗೆ ಧಾವಿಸುವ ಅನಿವಾಸಿ ತುಳುಕನ್ನಡಿಗರನ್ನು ಅರ್ಥೈಸಿ ನಾವೆಲ್ಲರೊಂದೆ ಎಂಬ ಭಾವಮೂಡಿಸಿ ಸಹೋದರತ್ವ, ಭಾವೈಕ್ಯದಿಂದ ಬಾಳೋಣ ಎಂದೂ ಡಾ| ಪ್ರಭಾಕರ ಭಟ್ ತಿಳಿಸಿದ್ದಾರೆ.

ಮುಂಬಯಿ ಅಲ್ಲಿನ ವ್ಯವಸ್ಥೆ ಮತ್ತೆ ಸಹಜತೆಗೆ ಮರಳಲು ಒಂದಿಷ್ಟು ಸಮಯ ಹಿಡಿಯಬಹುದು. ಈ ಸಂದರ್ಭದಲ್ಲಿ ಅವರ ಮನಸ್ಥಿತಿ ಹೇಗಿರಬಹುದು? ನಾವು ಅರ್ಥ ಮಾಡಿ ಕೊಂಡಿದ್ದೇವೆಯೇ ! ಊರಿಗೆ ಬರುತ್ತಿರುವ ಆ ನಮ್ಮ ಬಂಧುಗಳನ್ನು ಬರುವುದು ಬೇಡ ಅನ್ನುವುದು ಸರಿಯೇ? ನಮಗೆ ಆ ಹಕ್ಕು ಇದೆಯೇ ? ಅವರು ಬರುತ್ತಿರುವುದು ಅವರ ಮನೆಗೆ. ಇಂದಲ್ಲ ನಾಳೆ ಬರಲೇಬೇಕಾದೆಡೆಗೆ! ಆ ನಮ್ಮ ಸಹೋದರ ಸಹೋದರಿಯರನ್ನು ಅಸ್ಪೃಶ್ಯ ಮನೋಭಾವದಿಂದ ಕಾಣುವುದು ಸರಿಯಲ್ಲ. ಅವರು ಸರಕಾರದ ಸೂಚನೆಗಳನ್ನು ಪಾಲಿಸಿಕೊಂಡೇ ಬರುತ್ತಾರೆ. ಇಲ್ಲೂ ಅದೇ ರೀತಿ ಪಾಲಿಸುವಂತೆ ನೋಡಿ ಕೊಳ್ಳಬೇಕಾಗಿದೆ ಅಷ್ಟೇ ಎಂದೂ ಡಾ| ಭಟ್ ಕಲ್ಲಡ್ಕ ಕಿವಿಮಾತುಗಳನ್ನಾಡಿದ್ದಾರೆ.

ನಾವೆಲ್ಲರೂ ತಿಳಿದಂತೆ ತುಳುನಾಡ ಜನ ಮುಂಬಯಿಗೆ ಹೋಗಿ ಅಲ್ಲಿ ಆ ವಾಣಿಜ್ಯ ನಗರದಲ್ಲಿ ಅಥವಾ ಇಡೀ ಮಹಾರಾಷ್ಟ್ರದಲ್ಲಿ ಸಾಮಾಜಿಕ, ಧಾರ್ಮಿಕ, ರಾಜಕೀಯ, ಶೈಕ್ಷಣಿಕ, ವೈದ್ಯಕೀಯ, ಬಾಲಿವುಡ್ ರಂಗದಲ್ಲಿ ರಾರಾಜಿಸಿ ನಮ್ಮ ಜಿಲ್ಲೆಗೂ ಗೌರವ ತಂದಿತ್ತಿದ್ದಾರೆ ಇಲ್ಲಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ನಮ್ಮ ಉಭಯ ಜಿಲ್ಲೆಗಳ ಎಲ್ಲಾ ಕ್ಷೇತ್ರಗಳ ಚಟುವಟಿಕೆಗೆ ಎಲ್ಲಾ ರೀತಿಯ ಬೆಂಬಲ ನೀಡಿದ್ದಾರೆ. ಒಂದು ಅಂದಾಜಿನಂತೆ ಜಿಲ್ಲೆಯಲ್ಲಿ ನಡೆಯುವ ಬ್ರಹ್ಮಕಲಶ, ಜೀರ್ಣೋದ್ಧಾರ, ಗುಡಿ, ಗೋಪುರಗಳ ಕಾರ್ಯಗಳಿಗಾಗಿ ವರ್ಷಂಪ್ರತಿ ನೂರಾರು ಕೋಟಿ ಅವರು ದುಡಿದ ಹಣವನ್ನು ನೀಡಿದ್ದಾರೆ. ಇದರಿಂದ ಇಲ್ಲಿಯ ನಮ್ಮ ಎಲ್ಲ ರೀತಿಯ ಜನಜೀವನ ಚೆನ್ನಾಗಿ ನಡೆದುಕೊಂಡು ಬಂದಿದೆ. ಬಹಳಷ್ಟು ಉದ್ಯೋಗ ಸೃಷ್ಟಿಯಾಗಿದೆ ಇದರಿಂದ ನಮ್ಮ ಕುಟುಂಬಗಳೂ ಸಶಕ್ತವಾಗಿದೆ.

ಆದರೆ ಈ ಬಾರಿ ನಾವು ನಮ್ಮ ಮನುಷ್ಯತ್ವವನ್ನು ಕಳೆದುಕೊಂಡಿದ್ದೇವೇಯೇ..? ಉತ್ತರ ಪ್ರದೇಶಕ್ಕೆ ಎಲ್ಲ ರಾಜ್ಯಗಳಿಂದಲೂ ಜನ ಪ್ರವಾಹದೋಪಾದಿಯಂತೆ ಬರುತ್ತಿದ್ದಾರೆ. ಈ ಲಕ್ಷಾಂತರ ಜನ (ಮಹಾರಾಷ್ಟ್ರವೂ ಸೇರಿ) ಬಂದಾಗಲೆಲ್ಲಾ ಆ ಯೋಗಿ ಸಂತೋಷದಿಂದ ತನ್ನೆರಡೂ ಕೈಗಳಿಂದ ಅವರನ್ನು ಸ್ವಾಗತಿಸುತ್ತಿದ್ದರೆ, ನಾವು ಕೇವಲ ಭೋಗಿಗಳಂತೆ ಇದ್ದೇವೆ ಎಂದು ಅನಿಸುತ್ತಿಲ್ಲವೇ? ದಯಮಾಡಿ ನೋವು ದುಃಖದಲ್ಲಿರುವ ನಮ್ಮವರೇ ಆಗಿರುವ ಆ ಬಂಧುಗಳ ಬಗ್ಗೆ ಕೆಟ್ಟದಾಗಿ ಮಾತನಾಡದಿರೋಣ. ಅವರ ಜೊತೆ ಕೀಳಾಗಿ ವರ್ತಿಸದಿರೋಣ. ಈ ಜಿಲ್ಲೆಯ ಜನರು ಸಹೃದಯಿಗಳು, ಕಷ್ಟಕ್ಕೆ ಸ್ಪಂದಿಸುವವರು, ಬುದ್ಧಿವಂತರು ಎಂಬುದನ್ನು ತೋರಿಸಲು ದೇವರೇ ಕೊಟ್ಟ ಅವಕಾಶವೆಂದು ಭಾವಿಸೋಣ ಎಂದು ಡಾ| ಪ್ರಭಾಕರ ಭಟ್ ಕಲ್ಲಡ್ಕ ತಿಳಿಸಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here