Saturday 10th, May 2025
canara news

ಜನಪರ ಹೋರಾಟಗಾರ-ಆಪತ್ಭಾಂಧವ ಡಾ| ಶಿವ ಮೂಡಿಗೆರೆ ಗೃಹ ಸಚಿವಾಲಯದ ಕೋವಿಡ್ ಉಸ್ತುವಾರಿ ಸಮಿತಿ ಸದಸ್ಯರಾಗಿ ನೇಮಕ

Published On : 15 Jun 2020   |  Reported By : Rons Bantwal


ಮುಂಬಯಿ, ಜೂ.14: ಮಹಾರಾಷ್ಟ್ರದಲ್ಲಿನ ಹೆಸರಾಂತ ಯುವ ಉದ್ಯಮಿ, ಸಮಾಜ ಸೇವಕ, ಮುಂಬಯಿ ನ್ಯೂಸ್ ವಾಹಿನಿಯ ಥಾಣೆ ಜಿಲ್ಲಾ ಮುಖ್ಯಸ್ಥ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಇದರ ಪತ್ರಕರ್ತರ ಭವನ ಸಮಿತಿ ಕಾರ್ಯಾಧ್ಯಕ್ಷ ಡಾ| ಶಿವ ಮೂಡಿಗೆರೆ ಇವರನ್ನು ಕೇಂದ್ರ ಸರಕಾರದ ಗೃಹ ಇಲಾಖೆಯ ಕೋವಿಡ್-19 ಉಸ್ತುವಾರಿ (ಮಾನಿಟರಿಂಗ್) ಸಮಿತಿ ಸದಸ್ಯರಾಗಿ ನೇಮಕ ಗೊಂಡಿದ್ದಾರೆ ಎಂದು ಭಾರತ ಸರಕಾರದ ಗೃಹ ಸಚಿವಾಲಯದ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ (ಐಎಎಸ್) ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕೋವಿಡ್-19ರ ವಿಶೇಷ ಸ್ಥಿತಿ ಸಲಹಾ ಸಮಿತಿಯ ಅನುಮೋದನೆಯಲ್ಲಿ ಅಂಗೀಕರಿಸಲ್ಪಟ್ಟ ಗೌರವಾನ್ವಿತ ಕೇಂದ್ರೀಯ ಗೃಹ ಸಚಿವರ ಅಧಿಕೃತ ಆದೇಶಗಳಿಗೆ ಅನುಸಾರವಾಗಿ, ಗೃಹ ವ್ಯವಹಾರಗಳ ಸಚಿವಾಲಯದಲ್ಲಿ ಕೋವಿಡ್-19 ಮಾನಿಟರಿಂಗ್ ಕಮಿಟಿ ರಚಿಸಲಾಗಿದ್ದು, ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್‍ಒಪಿ) ಅನುಷ್ಠಾನಕ್ಕೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಕುಂದುಕೊರತೆಗಳ ಮೇಲ್ವಿಚಾರಣೆ ಮತ್ತು ಪರಿಹಾರ ಮತ್ತು ಎಸ್‍ಒಪಿ ಬದಲಾವಣೆಗಳು ವಾಸ್ತವಿಕ ಮತದಾನ ನಿಮಿತ್ತ ದೇಶದ ವಿವಿಧ ಭಾಗಗಳಲ್ಲಿ ಈ ಸಮಿತಿ ಕಾರ್ಯ ನಿರ್ವಹಿಸಲಿದೆ ಎಂದು ಅಜಯ್ ಭಲ್ಲಾ ತಿಳಿಸಿದ್ದಾರೆ.

ನೃಪೇಂದ್ರ ಮಿಶ್ರ (ಐಎಎಸ್) ಅಧ್ಯಕ್ಷರಾಗಿರುವ ಈ ಸಮಿತಿಯಲ್ಲಿ ಕವಿತಾ ಪದ್ಮನಾಭನ್ ಐಎಎಸ್ ï ಪ್ರಧಾನ ಸಲಹೆಗಾರರಾಗಿದ್ದು, ಸಂಜಯ್ ಆರ್.ಭವ್ಸಾರ್ ಐಎಎಸ್, ಅಂಬುಜ್ ಶರ್ಮಾ ಐಎಎಸ್ ಮತ್ತು ಅಭಿಷೇಕ್ ಎಂ.ಚೌಧರಿ ಐಎಎಸ್, ಭರುಉನ್ ಮಿತ್ರ, ಅನಿಕೇತ್ ಡೇ, ವಿನಯ್ ಕುಮಾರ್ ಜೈನ್, ಗೋಪಾಲ್ ಪಿಳ್ಳೈ, ಅಶೋಲಿ ಚಲೈ, ಸಿದ್ಧಾರ್ಥ್ ಕಿಶೋರ್ ದೇವ್, ಪಾರ್ಥೋ ಭಟ್ಟಾಚಾರ್ಯ, ಝುಬೈರ್ ಆಹ್ಮದ್, ಇವರು ವಿವಿಧ ಹುದ್ದೆಗಳ ಸಲಹೆಗಾರರಾಗಿರುವರು. ಅಧ್ಯಕ್ಷರ ಅಂತಿಮ ಅನುಮೋದನೆಯಂತೆ ಸಮಿತಿ ಸಂಯೋಜನೆ ಆಗಿದ್ದು ಅಕಲಿ ಕೊಂಘೈ ಮಾಧ್ಯಮ ಸಲಹಗಾರ, ಉಷಾ ಪಧೀ ಮತ್ತು ಪಾಥ್ ಕಾಲಿಯಾ ವಕ್ತಾರರು ಹಾಗೂ ಒಂಭತ್ತು ಸದಸ್ಯರುಗಳಿದ್ದಾರೆ. ಆ ಪೈಕಿ ಡಾ| ಶಿವ ಮೂಡಿಗೆರೆ ಮಹಾರಾಷ್ಟ್ರ ರಾಜ್ಯ ಸದಸ್ಯರಾಗಿರುವರು ಎಂದೂ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ತಿಳಿಸಿದ್ದಾರೆ.

ಪ್ರಸ್ತುತ ಮುಂಬಯಿನ `ಆ್ಯಂಟಿ ಕರೆಪ್ಷನ್ & ಇಂಟೆಲಿಜೆನ್ಸ್ ಕಮಿಟಿ'ಯ ಅಧ್ಯಕ್ಷರಾಗಿ, ರಾಯಗಾಢ ಜಿಲ್ಲೆಯ ಮಾನವಾಧಿಕಾರದ ಅಧ್ಯಕ್ಷರಾಗಿ, ನೆರೊಲ್‍ನ ಮಣಿಕಂಠ ಸೇವಾ ಸಮಿತಿಯ ಟ್ರಸ್ಟಿಯಾಗಿ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಭವನ ಸಮಿತಿ ಕಾರ್ಯಾಧ್ಯಕ್ಷರಾಗಿ, ಧರ್ಮಶಾಸ್ತ ಚಾರಿಟೇಬಲ್ ಟ್ರಸ್ಟ್‍ನ ಟ್ರಸ್ಟಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಇವರ ಅನುಪಮ ಸಮಾಜ ಸೇವೆಗಾಗಿ ಯುನಾೈಟೆಡ್ ಸ್ಟೇಟ್ ಆಫ್ ಅಮೇರಿಕಾ ಅಲ್ಲಿನ ಕಿಂಗ್‍ಸ್ ಯುನಿವರ್ಸಿಟಿ ಮತ್ತು ಎಸ್‍ಎಎಂಎಸ್ ಟ್ರಸ್ಟ್ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಗೌರವ ಡಾಕ್ಟರೇಟ್ ಸನದು ಪ್ರಾಪ್ತಿಸಿದೆ. ಬಾಳಸಂಗಾತಿ ಶ್ರೀಮತಿ ಜ್ಯೋತಿ ಮೂಡಿಗೆರೆ ಮತ್ತು ಮಾ| ಸಿದ್ಧಾರ್ಥ್ ಮತ್ತು ಮಾ| ಶ್ರೀಪಾದ ಎಂಬ ಇಬ್ಬರು ಪುತರೊಂದಿಗೆ ಉಪನಗರದ ನವಿಮುಂಬಯಿ ನೆರೂಳ್‍ನಲ್ಲಿ ಸುಖಮಯ ಜೀವನ ನಡೆಸುತ್ತಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here