ಕೋಟಿಗೊಬ್ಬ ಕನ್ನಡಿಗ ಪ್ರವೀಣ್ ಶೆಟ್ಟಿ ವಕ್ವಾಡಿಗೆ ಪ್ರಯಾಣಿಕರ ಶ್ಲಾಘನೆ
ಮುಂಬಯಿ, ಜೂ.14: ಗಲ್ಪ್ ರಾಷ್ಟ್ರದ ಶಾರ್ಜಾದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ವಿಶೇಷ ಚಾರ್ಟರ್ಡ್ ವಿಮಾನ ಆಗಮಿಸಿದ್ದು, ಈ ಪ್ರಯಾಣಕ್ಕೆ ವಿಶೇಷವಾಗಿ ಶ್ರಮಿಸಿದ ದುಬಾಯಿನ ಪ್ರತಿಷ್ಠಿತ ಉದ್ಯಮಿ, ಫಾರ್ಚೂನ್ ಸಮೂಹದ ಕಾರ್ಯಾಧ್ಯಕ್ಷ, ಕರ್ನಾಟಕ ಎನ್‍ಆರ್‍ಐ ಫೆÇೀರಂ-ಯುಎಇ (ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ) ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ ಅವರನ್ನು ಪ್ರಯಾಣಿಕರೆಲ್ಲರೂ ಅಭಿವಂದಿಸಿದ್ದಾರೆ.
ಕಳೆದ ಶನಿವಾರ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರೆಲ್ಲರೂ ಈ ಸುಖಮಯ ಪ್ರಯಾಣಕ್ಕೆ ಅನುಕೂಲಕರ ವ್ಯವಸ್ಥೆ ಮಾಡಿದ್ದ ಹೆಮ್ಮೆಯ ಯುಎಇ ಕನ್ನಡಿಗರು ದುಬೈ ಯುನೈಟೆಡ್ ಅರಬ್ ಎಮಿರೇಟ್ಸ್ ಇದರ ಸಹಾಯ ಹಸ್ತ ವಿಭಾಗ ಮತ್ತು ಸದಸ್ಯರೆಲ್ಲರಿಗೂ ಮತ್ತು ವಿಶೇಷವಾಗಿ ಪ್ರವೀಣ್ ಶೆಟ್ಟಿ ವಕ್ವಾಡಿ ಅವರ ಸತತ ಪ್ರಯತ್ನದಿಂದ ಇದು ಸಾಧ್ಯವಾಗಿ ಹಲವು ಗರ್ಭಿಣಿಯರು, ಮಕ್ಕಳು, ಜೇಷ್ಠ ನಾಗರೀಕರು ಮತ್ತು ಅಸ್ವಸ್ಥ ಕನ್ನಡಿಗರು ಕರುನಾಡು ಸೇರುವಂತಾಯಿತು ಎಂದು ಮನದಾಳದಿಂದ ಉಪಕಾರ ಸ್ಮರಿಸಿದ್ದಾರೆ.
ಪ್ರವೀಣ್ ಶೆಟ್ಟಿ ವಕ್ವಾಡಿ ಅವರು ಕಷ್ಟದಲ್ಲಿರುವ ಕನ್ನಡಿಗರನ್ನೆಲ್ಲಾ ತಾಯ್ನಾಡಿಗೆ ಕಳುಹಿಸಿ ಕೊಡುವ ಸೇವೆ ಮೆಚ್ಚಲೇಬೇಕು. ಪ್ರವೀಣ್ ಶೆಟ್ಟಿ ಅವರು ಕೇವಲ ಹೆಸರು, ಕೀರ್ತಿ ಮತ್ತು ದುಡ್ಡಿಗೆ ಮಾಡಿದ ಕಾರ್ಯ ಇದಲ್ಲ. ಮನವೀಯ ಕಳಕಳಿ ಅನ್ನುವುದು ಅವರಲ್ಲಿನ ಸದ್ಗುಣವಾಗಿದೆ. ಉದ್ಯೋಗ ಮತ್ತು ಆರೋಗ್ಯದಿಂದ ಕಂಗೆಟ್ಟವರಿಗೆ ಅವರು ಅನುವು ಮಾಡಿಕೊಟ್ಟಿದ್ದಾರೆ. ಸಂಕಷ್ಟದಲ್ಲಿರುವ ಕನ್ನಡಿಗರಿಗೆ ಅವರು ತೋರುತ್ತಿರುವ ಸಹಾಯ ಹಸ್ತ ನಿಜವಾಗಲೂ ಬಣ್ಣಿಸಲು ಅಸಾಧ್ಯ, ಇವರು ಕೋಟಿಗೊಬ್ಬ ಕನ್ನಡಿಗ ಎಂದೇಳಲು ನಮಗೆ ಹಿರಿಮೆ ಅನ್ನಿಸುತ್ತಿದೆ. ಅವರಿಂದ ಇದೊಂದು ಸಾಧನೀಯ ಮತ್ತು ಶ್ಲಾಘನೀಯ ಸೇವೆ ಆಗಿದ್ದು ಮತ್ತೊಮ್ಮೆ ಹೆಮ್ಮೆಯ ಕನ್ನಡಿಗರು ತಮ್ಮತಮ್ಮ ಕುಟುಂಬದ ವತಿಯಿಂದ ಮನದುಂಬಿದ ಧನ್ಯವಾದಗಳನ್ನು ಹೇಳುತ್ತೇವೆ ಎಂದು ರಫೀಕ್ ಆಲಿ, ಚಂದ್ರಶೇಖರ್ ಬೆಂಗಳೂರು, ಟೀಂ ಸದಸ್ಯೆ ಮಮತಾ ಬೆಂಗಳೂರು ಅವರು ಶಾರ್ಜಾ ಏರ್‍ಪೆÇೀರ್ಟ್‍ನಿಂದ ಹೊರಡುವ ಮುನ್ನ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದರು.