Saturday 10th, May 2025
canara news

ಸೌದಿ ಅರೇಬಿಯಾ-ಜಿದ್ದಾದಲ್ಲಿನ ಅನಿವಾಸಿ ಕನ್ನಡಿಗರು ತವರಿಗೆ

Published On : 20 Jun 2020   |  Reported By : Rons Bantwal


ಇಂಡಿಯನ್ ಸೋಶಿಯಲ್ forumನಿಂದ ಆರೋಗ್ಯ ಸುರಕ್ಷಾ ಕಿಟ್ ವಿತರಣೆ

ಮುಂಬಯಿ (ಜಿದ್ದಾ), ಜೂ.14: ಅನಿವಾಸಿಗರನ್ನು ಮರಳಿ ಕರೆತರುವ ಭಾರತ ಸರಕಾರದ ವಂದೇ ಭಾರತ್ ಮಿಷನ್‍ನ ಭಾಗವಾಗಿ ಕಳೆದ ಶನಿವಾರ (ಜೂ.13) ನಿಗದಿಯಾಗಿ ಜಿದ್ದಾ ಬೆಂಗಳೂರು ವಿಮಾನ ಮೂಲಕ ಹೊರಟ ಅನಿವಾಸಿ ಕನ್ನಡಿಗರಿಗೆ ಇಂಡಿಯನ್ ಸೋಶಿಯಲ್ ¥sóÉÇೀರಂ ಜಿದ್ದಾ ಸಂಸ್ಥೆಯು ಪ್ರಯಾಣಿಕರಿಗೆ ಆಹಾರ ಮತ್ತು ಆರೋಗ್ಯ ಸುರಕ್ಷಾ ಸಾಮಾಗ್ರಿಗಳನ್ನೊಳಗೊಂಡ ಕಿಟ್‍ಗಳನ್ನು ವಿತರಿಸಿ ಶುಭಾರೈಸಿತು.

ಇಂಡಿಯನ್ ಸೋಶಿಯಲ್ ¥sóÉÇೀರಂ ಅವಿರತ ಪ್ರಯತ್ನದಿಂದಾಗಿ ತವರಿಗೆ ಇಲ್ಲಿನ ಅನಿವಾಸಿ ಕನ್ನಡಿಗರು ಮರಳುವಂತಾಗಿದ್ದು, ಕೋವಿಡ್ 19 ಹರಡುವಿಕೆಯನ್ನು ತಡೆಗಟ್ಟುವ ಆರೋಗ್ಯ ಸುರಕ್ಷಾ ಕಿಟ್ ಮಾಸ್ಕ್, ಕೈಕವಚ, ಸ್ಯಾನಿಟೈಸರ್ ಮುಂತಾದ ಸಾಮಾಗ್ರಿಗಳನ್ನು ಒದಗಿಸಿತ್ತು.

ಹಲವು ಗರ್ಭಿಣಿ ಸ್ತ್ರೀಯರು ಮತ್ತು ಕಾಯಿಲೆ ಪೀಡಿತ ಅನಿವಾಸಿ ಕನ್ನಡಿಗರ ವಾಪಾಸಾತಿಗಾಗಿ ಇಂಡಿಯನ್ ಸೋಶಿಯಲ್ ¥sóÉÇೀರಂ ಜಿದ್ದಾ, ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ಮನವಿ ಮಾಡಿತ್ತು. ಕಳೆದ ಎರಡು ತಿಂಗಳುಗಳಿಂದ ಈ ಉದ್ದೇಶಕ್ಕಾಗಿ ಇಂಡಿಯನ್ ಸೋಶಿಯಲ್ ¥sóÉÇೀರಂ ನಾಯಕರು ಮತ್ತು ಕಾರ್ಯಕರ್ತರು ಪ್ರಯತ್ನ ಪಟ್ಟಿದ್ದರು. ಇದರ ¥sóÀಲವಾಗಿ ಇದೀಗ ಅವರಲ್ಲಿ ಹಲವರು ಈ ವಿಮಾನದ ಮೂಲಕ ತವರಿಗೆ ಮರಳಿದ್ದಾರೆ. ತಬೂಕ್ ಪ್ರಾಂತ್ಯದಿಂದ ಮಂಗಳೂರು ಮೂಲದ ನಾಲ್ಕು ಮಂದಿ ಗರ್ಭಿಣಿ ಸ್ತ್ರೀಯರು, ಮಕ್ಕಳು ಮತ್ತು ತೀವ್ರ ಅನಾರೋಗ್ಯ ಪೀಡಿತರಾಗಿದ್ದ ಜಿದ್ದಾದ ಅನಿಲ್ ಡಿಸೋಝ ಎಂಬವರು ಈ ವಿಮಾನದ ಮೂಲಕ ತವರಿಗೆ ಹೊರಟಿದ್ದರು.

ಸೌದಿ ಅರೇಬಿಯಾದಲ್ಲಿ ಕೋವಿಡ್ 19 ಲಾಕ್ ಡೌನ್ ಆರಂಭವಾದಂದಿನಿಂದ ಇಂಡಿಯನ್ ಸೋಶಿಯಲ್ ¥sóÉÇೀರಂ ಇಲ್ಲಿ ಸಂಕಷ್ಟದಲ್ಲಿರುವ ಅನಿವಾಸಿ ಕನ್ನಡಿಗರಿಗಾಗಿ ನಿರಂತರ ಪರಿಹಾರ ಕಾರ್ಯಗಳನ್ನು ನಡೆಸುತ್ತಿದ್ದು ಸುಮಾರು 11000 ಮಂದಿಗೆ ಕಿಟ್ ವಿತರಿಸಿದೆ. ಅಗತ್ಯವಿದ್ದವರಿಗೆ ವೈದ್ಯಕೀಯ ಸಲಹೆ ಸೂಚನೆಗಳನ್ನು ಒದಗಿಸಿದೆ. ಇಂದು ಪ್ರಯಾಣಿಕರ ಬೀಳ್ಕೊಡುಗೆಯ ಸಂಧರ್ಭದಲ್ಲಿ ಐಎಸ್‍ಎಫ್ ಅಧ್ಯಕ್ಷ ಕಲಂದರ್ ಸೂರಿಂಜೆ, ಕಾರ್ಯಕರ್ತರಾದ ಮುಸ್ತಫಾ, ರಷೀದ್ ಕಿನ್ನಿಗೋಳಿ, ರಫೀಕ್ ಬುಡೋಳಿ, ಆಸಿಫ್ ಮೂಳೂರು, ಆಸೀಫ್ ಗಂಜಿಮಠ, ಹಫಿûೀಝ್ ಮುಂತಾದವರು ಉಪಸ್ಥಿತರಿದ್ದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here