Saturday 5th, July 2025
canara news

ಗಿಲ್ಬರ್ಟ್ ರೋಡ್ರಿಗಸ್ ನಿಧನ

Published On : 24 Jun 2020   |  Reported By : Rons Bantwal


ಮುಂಬಯಿ, ಜೂ.24: ಉಪನಗರದ ಅಂಧೇರಿ ಪೂರ್ವದ ಚಕಲಾ ಸಿಗರೇಟ್ ಫ್ಯಾಕ್ಟರಿ ಸನಿಹದ ಚಕಲಾ ತರುಣ್ ಭಾರತ್ ಕಾಲೋನಿ ಇಲ್ಲಿನ ಸ್ನೇಹಲ್ ಅಪಾರ್ಟ್‍ಮೆಂಟ್ ನಿವಾಸಿ ಗಿಲ್ಬರ್ಟ್ ರೋಡ್ರಿಗಸ್ (53.) ಅಲ್ಪ ಕಾಲದ ಅನಾರೋಗ್ಯದಿಂದ ಇಂದಿಲ್ಲಿ ಮಂಗಳವಾರ ರಾತ್ರಿ ಕಾಂದಿವಿಲಿ ಪಶ್ಚಿಮದ ಆಸ್ಕರ್ ಮಲ್ಟಿ ಸ್ಪೆಷಿಯಾಲಿಟಿ ಆಸ್ಪತ್ರೆಯಲ್ಲಿ ನಿಧನರಾದರು.

ಉಡುಪಿ ಜಿಲ್ಲೆಯ ಹೇರೂರು ಸಸ್ತಾನ ಮೂಲತಃ ಗಿಲ್ಬರ್ಟ್ ಕಳೆದ ಅನೇಕ ವರ್ಷಗಳಿಂದ ಅದಾನಿ (ಹಳೆ ರಿಲಾಯನ್ಸ್) ಇಲೆಕ್ಟ್ರಿಸಿಟಿ ಮುಂಬಯಿ ಲಿಮಿಟೆಡ್ ಸಂಸ್ಥೆಯಲ್ಲಿ ನೌಕರಿಯಲ್ಲಿದ್ದರು.

ಪತ್ನಿ ಜೋಸ್ಫಿನ್ (ಸಿಕ್ವೇರಾ) ಜಿ.ರೋಡ್ರಿಗಸ್ (ಪಚ್ಚಿನಡ್ಕ ಮೊಡಂಕಾಪು ಬಂಟ್ವಾಳ), ಸುಪುತ್ರಿ ಕು| ಜನಿಶಾ ರೋಡ್ರಿಗಸ್, ಸುಪುತ್ರ ಮಾ| ಗಾವಿನ್ ರೋಡ್ರಿಗಸ್ ಸೇರಿದಂತೆ ಬಂಧು ಬಳಗ ಆಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಬುಧವಾರ ಓಶಿವಾರದಲ್ಲಿ ಸೆಮೆಟರಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here