ಮುಂಬಯಿ (ಉಳ್ಳಾಲ), ಜೂ.21: ಮಂಗಳೂರು ಇಲ್ಲಿನ ಉಳ್ಳಾಲ, ಸೋಮೇಶ್ವರದಲ್ಲಿ ಕಡಲ್ಕೊರೆತದ ಪ್ರದೇಶಗಳಿಗೆ ಇಂದಿಲ್ಲಿ ಭಾನುವಾರ ಸಂಜೆ ಕರ್ನಾಟಕ ರಾಜ್ಯದ ಮುಜರಯಿ, ಮೀನುಗಾರಿಕೆ, ಬಂದರುಗಳು ಮತ್ತು ಒಳನಾಡು ಸಾರಿಗೆ ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿದರು.
ಸೋಮೇಶ್ವರದಲ್ಲಿ ಕಡಲ್ಕೊರೆತದ ತೀವ್ರತೆ ಹೆಚ್ಚಾಗಿದ್ದು ಸಾರ್ವಜನಿಕರ ಮತ್ತು ಮೀನುಗಾರರ ದೂರಿನ ಹಿನ್ನಲೆಯಲ್ಲಿ ತಾನು ಅಧಿಕಾರಿಗಳೊಂದಿಗೆ ಈ ಭೇಟಿ ನೀಡಿದ್ದು ಸ್ಥಾನೀಯರ ಮತ್ತು ಮೀನುಗಾರರ ಮನೆಗಳನ್ನು ರಕ್ಷಣೆ ಮಾಡುವ ಅನಿವಾರ್ಯತೆ ಇದೆ ಎಂದೂ ಸಚಿವ ಪೂಜಾರಿ ತಿಳಿಸಿದರು.