Wednesday 27th, January 2021
canara news

ಪರಂಪರ ವಿವಿದೊದ್ದೇಶ ಸಹಕಾರ ಸಂಘ ಮತ್ತು ನಿಟ್ಟೆ ತೆಂಗು ಉತ್ಪಾದಕರ ಸೌಹಾರ್ದ ಸೊಸೈಟಿಯ ಜಂಟಿ ವತಿಯಿಂದ ಸಸಿ ವಿತರಣಾ ಕಾರ್ಯಕ್ರಮ

Published On : 28 Jun 2020   |  Reported By : Rons Bantwal


ಮುಂಬಯಿ, ಜೂ.23: ಮಂಗಳವಾರ ಬೆಳಗ್ಗೆ ಪರಂಪರ ವಿವಿದೊದ್ದೇಶ ಸಹಕಾರ ಸಂಘ (ನಿ) ಇದರ ವತಿಯಿಂದ ಹಸಿರು ಕೃಷಿ ಅಭಿಯಾನದಡಿ ಸಸಿ ವಿತರಣಾ ಕಾರ್ಯಕ್ರಮವು ಶ್ರೀ ರಾಮಪ್ಪ ಶಾಲೆ ವಠಾರ ಆನೆಕೆರೆ ಇಲ್ಲಿ ಸಂಘದ ಅಧ್ಯಕ್ಷ ನವೀನ್‍ಚಂದ್ರ ಜೈನ್ ಅಧ್ಯಕ್ಷತೆಯಲ್ಲಿ ಜರುಗಿತು.

ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಪ್ರಕೃತಿ ವಿಕೋಪಗಳು ಹಾಗೂ ಸಾಂಕ್ರಾಮಿಕ ರೋಗಗಳಿಗೆ ಪ್ರಕೃತಿಯ ನಾಶವೇ ಕಾರಣವಾಗಿದ್ದು, ಈ ನಿಟ್ಟಿನಲ್ಲಿ ಹೆಚ್ಚಿನ ಗಿಡ ಮರಗಳನ್ನು ಬೆಳೆಸುವ ಸಲುವಾಗಿ ಸಸಿ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಉತ್ತಮ ಉದ್ದೇಶವಾಗಿದೆ ಎಂದು ಸಭೆಯಲ್ಲಿ ಮುಖ್ಯ ಅತಿಥಿüಯಾಗಿ ಉಪಸ್ಥಿತರಿದ್ದ ಶ್ರೀ ರಾಮಪ್ಪ ಶಾಲಾ ಮುಖ್ಯೋಪಾಧ್ಯಾಯ ಹರೀಶ್ ಶೆಟ್ಟಿ ತಿಳಿಸಿದರು.

ನವೀನ್‍ಚಂದ್ರ ಜೈನ್ ನಿಟ್ಟೆ ಸಭೆಯನ್ನುದ್ದೇಶಿಸಿ ಮಾತನಾಡಿ ಯಾವುದೇ ಗಿಡಗಳ ಪೋಷಣೆಯು ಕಷ್ಟದ ಕೆಲಸವಲ್ಲ. ಹೆಚ್ಚಿನ ಗಿಡ-ಮರಗಳನ್ನು ಬೆಳೆಸುವುದರಿಂದ ಅಂತರ್ಜಲದ ಮಟ್ಟ ಹೆಚ್ಚಾಗುತ್ತದೆ. ಸುಮಾರು 2500 ಗಿಡಗಳಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ನುಗ್ಗೆ, ಮಹಾಗನಿ, ಗೇರು, ನೇರಳೆ, ನೆಲ್ಲಿ, ಹಲಸು, ಪೇರಳೆ, ಸೀಮರೋಭೆ, ಮಾವು, ನಿಂಬೆ, ಬಿದಿರು, ಹೊಳೆದಾಸವಾಳ, ಸಾಗುವನಿ, ಬಿಲ್ವ, ಶ್ರೀಗಂಧ ಮುಂತಾದ ಸಸಿಗಳ ತಳಿಗಳನ್ನು ಸಂಘದ ಸದಸ್ಯರಿಗೆ ಉಪಸ್ಥಿತರಿದ್ದ ಅತಿಥಿüಗಳು ವಿತರಿಸಿದರು. ನಿಟ್ಟೆ ತೆಂಗು ಉತ್ಪಾದಕರ ಸೌಹಾರ್ದ ಸೊಸೈಟಿಯು ಕಾರ್ಯಕ್ರಮದಲ್ಲಿ ಜಂಟಿಯಾಗಿ ಸಹಕರಿಸಿದ್ದ ಅಲ್ಲಿನ ಕೃಷಿಕರಿಗೂ ಸಸಿಗಳನ್ನು ವಿತರಿಸಲಾಯಿತು.

ಈ ಸಭೆಯಲ್ಲಿ ಪರಂಪರಾ ವಿವಿದೊದ್ದೇಶ ಸಹಕಾರ ಸಂಘದ ಉಪಾಧ್ಯಕ್ಷ ಅಭಯ್‍ಚಂದ್ರ ಜೈನ್, ನಿರ್ದೇಶಕರಾದ ಎ.ಮೋಹನ ಪಡಿವಾಳ, ಕೆ.ಪಿ. ಭಂಡಾರಿ, ನರಸಿಂಹ ಕಾಮತ್, ಮಮತಾ. ಆರ್. ಶೆಟ್ಟಿ ಉಪಸ್ಥಿತರಿದ್ದು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗಂಗಾಧರ್.ಆರ್ ಕಾರ್ಯಕ್ರಮ ನಿರೂಪಿಸಿದರು ಕಾರ್ಯದರ್ಶಿ ಧರಣೇಂದ್ರ ಜೈನ್ ನಿಟ್ಟೆ ಧನ್ಯವಾದ ಸಮರ್ಪಿಸಿದರು.

 
More News

ಬ್ರಹ್ಮಶ್ರೀ ನಾರಾಯಣ ಗುರು ಐಕ್ಯತಾ ವೇದಿಕೆ ರಾಜ್ಯ ನಿಯೋಗ ಬಿಲ್ಲವರ ಭವನಕ್ಕೆ ಭೇಟಿ
ಬ್ರಹ್ಮಶ್ರೀ ನಾರಾಯಣ ಗುರು ಐಕ್ಯತಾ ವೇದಿಕೆ ರಾಜ್ಯ ನಿಯೋಗ ಬಿಲ್ಲವರ ಭವನಕ್ಕೆ ಭೇಟಿ
2020 ರ ದ.ಕ. ಜಿಲ್ಲಾ ಹಿಂದಿ ರತ್ನ : ಪುತ್ತೂರು ಇರ್ದೆ ಉಪ್ಪಳಿಗೆಯ ಗೀತಾ ಕುಮಾರಿ
2020 ರ ದ.ಕ. ಜಿಲ್ಲಾ ಹಿಂದಿ ರತ್ನ : ಪುತ್ತೂರು ಇರ್ದೆ ಉಪ್ಪಳಿಗೆಯ ಗೀತಾ ಕುಮಾರಿ
ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಆರ್ಥಿಕ ನೆರವು : ಐಕಳ ಹರೀಶ್ ಶೆಟ್ಟಿ
ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಆರ್ಥಿಕ ನೆರವು : ಐಕಳ ಹರೀಶ್ ಶೆಟ್ಟಿ

Comment Here