Saturday 4th, July 2020
canara news

ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್-ಮೈ ಕಮ್ಯೂನಿಟಿ ಫೌಂಡೇಶನ್ ನೇತೃತ್ವದ ಫೆ ್ಲೈ ದುಬಾಯಿ ವಿಮಾನ ಮಂಗಳೂರಿಗೆ ಆಗಮನ

Published On : 28 Jun 2020   |  Reported By : Rons Bantwal

ಮುಂಬಯಿ (ಮಂಗಳೂರು), ಜು.24: ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಹಾಗೂ ಮೈ ಕಮ್ಯೂನಿಟಿ ಫೌಂಡೇಶನ್ ನೇತೃತ್ವದಲ್ಲಿ ದುಬೈಯಿಂದ ಮಂಗಳೂರಿಗೆ ಹೊರಟ ಫ್ಲೈ ದುಬೈ ಎಫ್‍ಜ್ಹೆಡ್ 4617 ವಿಮಾನವು ಮಂಗಳವಾರ ಸಂಜೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು.

ಒಟ್ಟು 187 ಪ್ರಯಾಣಿಕರನ್ನು ಹೊತ್ತುಕೊಂಡು ಬರಬೇಕಾಗಿದ್ದ ವಿಮಾನವು ದುಬಾಯಿ ವಿಮಾನ ನಿಲ್ದಾಣದ ತಾಂತ್ರಿಕ ತೊಂದರೆಯಿಂದ 21 ಪ್ರಯಾಣಿಕರನ್ನು ಕೈಬಿಡಲಾಯಿತು. ಗರ್ಭಿಣಿಯರು, ವಯಸ್ಕರು, ಆನಾರೋಗ್ಯ ಪೀಡಿತರು, ಅತಂತ್ರ ಕಾರ್ಮಿಕರನ್ನು ಒಳಗೊಂಡಂತೆ 128 ಪುರುಷರು ಹಾಗೂ 38 ಮಹಿಳೆಯರು ಸೇರಿದಂತೆ ಒಟ್ಟು 166 ಪ್ರಯಾಣಿಕರು ಆಗಮಿಸಿದರು. ಯುಎಇ ಕಾಲಮಾನದಂತೆ ಮಂಗಳವಾರ ಅಪರಾಹ್ನ ದುಬಾಯಿ ವಿಮಾನ ನಿಲ್ದಾಣ ಟರ್ಮಿನಲ್ 2 ರಿಂದ ಮಂಗಳೂರಿಗೆ ಪ್ರಯಾಣ ಆರಂಭಿಸಿತ್ತು. ದುಬಾಯಿಯಲ್ಲಿ ಮೈ ಕಮ್ಯೂನಿಟಿ ಫೌಂಡೇಶನ್ ಮುಖ್ಯಸ್ಥರಾದ ಅಶ್ರಫ್ ಅಬ್ಬಾಸ್, ಎಂ.ಫ್ರೆಂಡ್ಸ್ ಎನ್‍ಆರ್‍ಐ ಸದಸ್ಯರಾದ ಹನೀಫ್ ಪುತ್ತೂರು ಹಾಗೂ ನವಾಝ್ ಕಾನತ್ತಡ್ಕ ಪ್ರಯಾಣಿಕರೆಲ್ಲರಿಗೂ ಶುಭಾರೈಸಿ ಬೀಳ್ಕೊಟ್ಟರು.

ಮಂಗಳೂರಿನಲ್ಲಿ ಅಂತರಾಷ್ಟ್ರ ಪ್ರಯಾಣಿಕರ ನೋಡಲ್ ಅಧಿಕಾರಿ ಯತೀಶ್ ಉಳ್ಳಾಲ್, ಎಂ.ಫ್ರೆಂಡ್ಸ್ ಸ್ಥಾಪಕ ರಶೀದ್ ವಿಟ್ಲ, ಜೊತೆ ಕಾರ್ಯದರ್ಶಿ ಹನೀಫ್ ಕುದ್ದುಪದವು, ಸದಸ್ಯರಾದ ತುಫೈಲ್ ಅಹ್ಮದ್, ಮಹಮ್ಮದ್ ಟೋಪೆÇ್ಕೀ, ಆಶಿಕ್ ಕುಕ್ಕಾಜೆ, ಸೌಹಾನ್ ಎಸ್.ಕೆ., ಅಶ್ಫಾಕ್ ವಿಲಾಯತ್, ಇಂತಿಯಾಝ್ ಐ ಫ್ರೇಮ್, ಸಿರಾಜ್ ಮದಕ ಮೊದಲಾದವರು ಸುಖಾಗಮನ ಕೋರಿ ಬರಮಾಡಿಕೊಂಡರು.

More News

ನಿವೃತ್ತ ಶಿಕ್ಷಕ ಕಡಂದಲೆ ಪರಾರಿ ಪ್ರಭಾಕರ ಎಲ್.ಶೆಟ್ಟಿ ನಿಧನ
ನಿವೃತ್ತ ಶಿಕ್ಷಕ ಕಡಂದಲೆ ಪರಾರಿ ಪ್ರಭಾಕರ ಎಲ್.ಶೆಟ್ಟಿ ನಿಧನ
ಧರ್ಮಸ್ಥಳದಲ್ಲಿ ವಿಪತ್ತು ನಿರ್ವಹಣೆ ಕಾರ್ಯಕ್ರಮದ ಲೋಕಾರ್ಪಣೆ ಮತ್ತು ತರಬೇತಿ ಕಾರ್ಯಾಗಾರದ ಉದ್ಘಾಟನೆ: ವಿಪತ್ತು ನಿರ್ವಹಣೆ ಸಾಮಾಜಿಕ ಹೊಣೆಗಾರಿಕೆಯಾಗಿದೆ.
ಧರ್ಮಸ್ಥಳದಲ್ಲಿ ವಿಪತ್ತು ನಿರ್ವಹಣೆ ಕಾರ್ಯಕ್ರಮದ ಲೋಕಾರ್ಪಣೆ ಮತ್ತು ತರಬೇತಿ ಕಾರ್ಯಾಗಾರದ ಉದ್ಘಾಟನೆ: ವಿಪತ್ತು ನಿರ್ವಹಣೆ ಸಾಮಾಜಿಕ ಹೊಣೆಗಾರಿಕೆಯಾಗಿದೆ.
ಪರಂಪರ ವಿವಿದೊದ್ದೇಶ ಸಹಕಾರ ಸಂಘ ಮತ್ತು ನಿಟ್ಟೆ ತೆಂಗು ಉತ್ಪಾದಕರ ಸೌಹಾರ್ದ ಸೊಸೈಟಿಯ ಜಂಟಿ ವತಿಯಿಂದ ಸಸಿ ವಿತರಣಾ ಕಾರ್ಯಕ್ರಮ
ಪರಂಪರ ವಿವಿದೊದ್ದೇಶ ಸಹಕಾರ ಸಂಘ ಮತ್ತು ನಿಟ್ಟೆ ತೆಂಗು ಉತ್ಪಾದಕರ ಸೌಹಾರ್ದ ಸೊಸೈಟಿಯ ಜಂಟಿ ವತಿಯಿಂದ ಸಸಿ ವಿತರಣಾ ಕಾರ್ಯಕ್ರಮ

Comment Here